ತುರ್ತು ಸಹಾಯವಾಣಿ ಸಂಖ್ಯೆ112 ಬಿಡುಗಡೆ – ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು

By Gizbot Bureau
|

ಭಾರತವು ಇದೀಗ ಏಕ ತುರ್ತು ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ 911 ನಂಬರ್ ಇರುವಂತೆಯೇ ಈ ನಂಬರ್ ಕೂಡ ಕಾರ್ಯ ನಿರ್ವಹಿಸುತ್ತದೆ. ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆಗೊಳಿಸಿರುವ ಗೃಹ ಸಚಿವ ರಾಜ್ ನಾಥ್ ಸಿಂಗ್ “ಮುಂದಿನ ವರ್ಷಾಂತ್ಯದೊಳಗೆ ದೇಶದ ಎಲ್ಲಾ ಕಡೆಗಳಲ್ಲೂ ಸಹಾಯವಾಣಿ ಸಂಖ್ಯೆ 112 ಲಭ್ಯವಾಗುತ್ತದೆ ಮತ್ತು ಫೋನ್ ಗಳಲ್ಲಿ ಪ್ರೀಗ್ರಾಮ್ ಆಗಿ ಹೊಂದಿಸಿರುವ ಏಕ ಸಂಖ್ಯೆಯನ್ನು ಒತ್ತುವ ಮೂಲಕ ಯಾವುದೇ ವ್ಯಕ್ತಿ ಬೇಕಿದ್ದರೂ ಯಾವುದೇ ಸಂದರ್ಬಕ್ಕೂ ಕೂಡ ಈ ಸಹಾಯವಾಣಿಯ ಮೂಲಕ ಸಹಾಯಹಸ್ತ ಪಡೆಯಬಹುದು”.ಈ ಸಹಾಯವಾಣಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಅಂಶಗಳ ವಿವರ ಇಲ್ಲಿದೆ.

'112' ಪಾನ್-ಇಂಡಿಯಾ ಏಕ ತುರ್ತು ಸಹಾಯವಾಣಿ ಸಂಖ್ಯೆ

'112' ಪಾನ್-ಇಂಡಿಯಾ ಏಕ ತುರ್ತು ಸಹಾಯವಾಣಿ ಸಂಖ್ಯೆ

'112' ಸಹಾಯವಾಣಿ ಸಂಖ್ಯೆಯನ್ನು ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (ERSS)ಯ ಅಡಿಯಲ್ಲಿ ಬಿಡುಗಡೆಗೊಳಿಸಲಾಗಿದೆ.

'112' ತುರ್ತು ನಂಬರ್ ಪೋಲೀಸ್, ಅಗ್ನಿ ಮತ್ತು ಮಹಿಳಾ ಸಹಾಯವಾಣಿಗೆ ಕನೆಕ್ಟ್ ಆಗುತ್ತದೆ.

'112' ತುರ್ತು ನಂಬರ್ ಪೋಲೀಸ್, ಅಗ್ನಿ ಮತ್ತು ಮಹಿಳಾ ಸಹಾಯವಾಣಿಗೆ ಕನೆಕ್ಟ್ ಆಗುತ್ತದೆ.

'112' ಸಂಖ್ಯೆಯು ಪೋಲೀಸ್ (100), ಅಗ್ನಿ(101) ಮತ್ತು ಮಹಿಳಾ ಸಹಾಯವಾಣಿ(1090) ಸಹಾಯವಾಣಿಗೆ ಕನೆಕ್ಟ್ ಆಗುತ್ತದೆ. ಎಲ್ಲಾ ತುರ್ತು ಘಟಕಗಳನ್ನು ಏಕ ಸಂಖ್ಯೆಯ ಮೂಲಕ ಸೇವೆ ನೀಡುವ ಗುರಿಯನ್ನು ಇದು ಹೊಂದಿದೆ.

ಆರೋಗ್ಯ ಸಹಾಯವಾಣಿ (108) ಕೂಡ ಸದ್ಯದಲ್ಲೇ ಇದಕ್ಕೆ ಸೇರ್ಪಡೆಗೊಳ್ಳಲಿದೆ

ಆರೋಗ್ಯ ಸಹಾಯವಾಣಿ (108) ಕೂಡ ಸದ್ಯದಲ್ಲೇ ಇದಕ್ಕೆ ಸೇರ್ಪಡೆಗೊಳ್ಳಲಿದೆ

ಅಧಿಕೃತ ಮಾಹಿತಿಯ ಪ್ರಕಾರ ಆರೋಗ್ಯ ಸಹಾಯವಾಣಿ 108 ಕೂಡ ಕೆಲವೇ ದಿನಗಳಲ್ಲಿ ಇದರ ಅಡಿಯಲ್ಲೇ ಬರುತ್ತದೆ.

ಹಲವಾರು ಸಹಾಯವಾಣಿ ಸಂಖ್ಯೆಯನ್ನು ನೆನಪಿಡುವ ಸಮಸ್ಯೆಯನ್ನು ಸಾರ್ವಜನಿಕರಿಗೆ ನಿವಾರಿಸುವ ಉದ್ದೇಶ

ಒಂದೊಂದು ಸೇವೆಗಾಗಿ ಒಂದೊಂದು ನಂಬರ್ ನ್ನು ನೆನಪಿಟ್ಟುಕೊಳ್ಳುವುದು ಸಾರ್ವಜನಿಕರಿಗೆ ಕಷ್ಟವಾಗುವ ಸಮಸ್ಯೆಯನ್ನು ನಿವಾರಿಸುವ ಉದ್ದೇಶವನ್ನು ಏಕ- ತುರ್ತು ಸಹಾಯವಾಣಿ ಸಂಖ್ಯೆಯ ಮೂಲಕ ಹೊಂದಲಾಗಿದೆ.

16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 112 ಸಂಖ್ಯೆಯನ್ನು ಬಿಡುಗಡೆಗೊಳಿಸಲಾಗಿದೆ

16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 112 ಸಂಖ್ಯೆಯನ್ನು ಬಿಡುಗಡೆಗೊಳಿಸಲಾಗಿದೆ

ಇದೀಗ 112 ಸಂಖ್ಯೆಯನ್ನು 16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಆಂಧ್ರ ಪ್ರದೇಶ, ಪಂಜಾಬ್, ಉತ್ತಾರಾಖಂಡ, ಕೇರಳ, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ತೆಲಂಗಾಣ, ತಮಿಳು ನಾಡು,ಗುಜರಾತ್, ಪುದುಚೇರಿ, ಲಕ್ಷದ್ವೀಪ, ಅಂಡಮಾನ್, ದಾಬರ್ ನಗರ್ ಹವೇಲಿ, ಡಾಮನ್ ಮತ್ತು ಡಿಯೋ, ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ

ಇದು ಹೇಗೆ ಕೆಲಸ ಮಾಡುತ್ತದೆ

112 ಸಹಾಯವಾಣಿ ಸಂಖ್ಯೆಯನ್ನು ವ್ಯಕ್ತಿಯು ತಮ್ಮ ಮೊಬೈಲ್ ಮೂಲಕ ಡಯಲ್ ಮಾಡಬಹುದು ಅಥವಾ ಪವರ್ ಬಟನ್ ನ್ನು ಮೂರು ಬಾರಿ ಒತ್ತುವ ಮೂಲಕ ವೇಗವಾಗಿ ಸಹಾಯವಾಣಿಯನ್ನು ಸಂಪರ್ಕಿಸಬಹುದು.

ಫೀಚರ್ ಫೋನ್ ಗಳಲ್ಲಿ '5' ಅಥವಾ '9' ನ್ನು ಪ್ರೆಸ್ ಮಾಡಿ

ಫೀಚರ್ ಫೋನ್ ಗಳಲ್ಲಿ '5' ಅಥವಾ '9' ನ್ನು ಪ್ರೆಸ್ ಮಾಡಿ

ನಿಮ್ಮ ಬಳಿ ಫೀಚರ್ ಫೋನ್ ಇದ್ದಲ್ಲಿ '5' ಅಥವಾ '9' ಕೀಯನ್ನು ಒತ್ತುವ ಮೂಲಕ ಪ್ಯಾನಿಕ್ ಕಾಲ್ ಫಂಕ್ಷನ್ ನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು.

'112' ಸಹಾಯವಾಣಿ ಸಂಖ್ಯೆಯನ್ನು ಹಿಮಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ಗಳಲ್ಲಿ ಈಗಾಗಲೇ ಬಿಡುಗಡೆಗೊಳಿಸಲಾಗಿದೆ

ಹಿಮಾಚನ ಪ್ರದೇಶ ಮತ್ತು ನಾಗಾಲ್ಯಾಂಡ್ ರಾಜ್ಯಗಳು 112 ಸಹಾಯವಾಣಿ ಸಂಖ್ಯೆಯನ್ನು 2018 ನವೆಂಬರ್ ನಿಂದಲೇ ಬಳಸುತ್ತಿವೆ.

Best Mobiles in India

Read more about:
English summary
Single emergency helpline number '112' launched: All you need to know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X