Home
ಮೊಬೈಲ್

ಹತ್ತನೇ ವರ್ಷದ ಸಂಭ್ರಮಾಚರಣೆಯಲ್ಲಿ ಸ್ಟೈ ಫೋರ್ಸ್ ಶೂಟರ್

By Shwetha

ಆರ್ಕೇಡ್ ಆಧಾರಿತ ಶೂಟಿಂಗ್ ಆಟಗಳನ್ನು ಆಡುವವರಿಗೆ ಒಂದು ಸಂತೋಷಕರ ಸುದ್ದಿ. ವರದಿಗಳ ಪ್ರಕಾರ, ಪೋಲಿಶ್ ಡೆವಲಪರ್ ಈಗತಾನೇ ಹೊಚ್ಚ ಹೊಸದಾದ ಸ್ಮ್ಯಾಶ್ ಹಿಟ್ 2004, ಸ್ಕೈ ಫೋರ್ಸ್ ಅನ್ನು ಆಂಡ್ರಾಯ್ಡ್ ಹಾಗೂ ಐಓಎಸ್ ಪ್ಲಾಟ್‌ಫಾರ್ಮ್‌ಗಳಿಗಾಗಿ ಬಿಡುಗಡೆಗೊಳಿಸಿದೆ.

ಇದು ಪಿಡಿಎ ಗೇಮ್‌ಗಳಲ್ಲೇ ಹತ್ತುವರ್ಷಗಳ ಹಿಂದೆಯೇ ಬಹು ಜನಪ್ರಿಯವಾಗಿದ್ದು, ಹಾಗಾಗಿಯೇ ಮೊಬೈಲ್‌ಗಳಲ್ಲಿ ಗೇಮ್ಸ್ ಆಡುವವರಿಗೆ ಇದೊಂದು ಧಮಾಲ್ ಕೊಡುಗೆಯಾಗಿದೆ. ವಿಶೇಷವಾದ ಶೈಲಿಯಲ್ಲಿ ತನ್ನ ಹತ್ತು ವರ್ಷದ ಸಂಭ್ರಮಾಚರಣೆಯನ್ನು ಮಾಡಲಿರುವ ಈ ಗೇಮ್ ಹೊಚ್ಚ ಹೊಸ ಶೈಲಿಯಲ್ಲಿ ಮೊಬೈಲ್ ಪ್ರಿಯರ ಗಮನ ಸೆಳೆಯುವುದು ಖಂಡಿತ.

ಆಂಡ್ರಾಯ್ಡ್, ಐಓಎಸ್‌ಗಾಗಿ ಸ್ಕೈ ಫೋರ್ಸ್ ಆರ್ಕೇಡ್ ಶೂಟರ್

ಇತ್ತೀಚಿನ ಅತ್ಯಾಧುನಿಕ ಸ್ಮಾರ್ಟ್‌ಫೋನ್ ತಂತ್ರಜ್ಞಾನದೊಂದಿಗೆ ಸಂಯೋಜನೆಗೊಂಡಿರುವ ಸ್ಕೈ ಫೋರ್ಸ್ 2014 ತನ್ನ ಹಿಂದಿನ ಗೇಮ್ ಸೆಟ್ಟಿಂಗ್‌ಗಳನ್ನು ಹಾಗೆಯೇ ಇಟ್ಟಿದ್ದು ಸಣ್ಣ ಮಟ್ಟಿನ ಬದಲಾವಣೆಗಳನ್ನು ಮಾಡಿಕೊಂಡಿದೆ. ಆಟಗಾರ ಪ್ರತಿಯೊಂದು ಹಂತದಲ್ಲೂ ಭಾರೀ ಬಿರುಸಿನ ಹೊಡೆತಗಳನ್ನು ಈ ಆಟದಲ್ಲಿ ಅನುಭವಿಸಬಹುದಾಗಿದ್ದು, ತನ್ನ ಹತ್ತನೇ ವರ್ಷಾಚರಣೆಯನ್ನು ಆಚರಿಸುತ್ತಿರುವ ಈ ಆಟ ಹಲವಾರು ಬದಲಾವಣೆಗಳೊಂದಿಗೆ ಆಟಗಾರರ ಎದುರು ಸಜ್ಜಾಗಲು ಹೊರಟಿದೆ.

ನಾವು ಹತ್ತು ವರ್ಷಗಳಿಂದ ಹೊಂದಿರುವ ನಮ್ಮ ಮೊಬೈಲ್ ಆಟಗಾರರಿಗೆ ಸ್ಕೈ ಫೋರ್ಸ್ ಇನ್ನಷ್ಟು ಆಕರ್ಷಕವಾಗಿ ಕಂಡುಬರಲಿ ಎಂಬುದೇ ನಮ್ಮ ಬಯಕೆಯಾಗಿದೆ. ಹೇಗೆ ಈ ಹಿಂದೆ ನಮ್ಮ ಈ ಗೇಮಿಂಗ್ ಅನ್ನು ಹೇಗೆ ಪ್ರೋತ್ಸಾಹಿಸುತ್ತಿದ್ದರೋ ಅದೇ ರೀತಿ ಮುಂದೆಯೂ ಈ ಆಟಕ್ಕೆ ತಕ್ಕುದಾದ ಪ್ರೋತ್ಸಾಹ ದೊರಕಲಿ ಎಂಬುದು ನಮ್ಮ ಬಯಕೆಯಾಗಿದೆ ಎಂದು ಗೇಮ್‌ನ ಸಹ ಫೌಂಡರ್ ಮಾರೆಕ್ ವೈಜ್ನ್ಸಿಕಿ ತಿಳಿಸಿದ್ದಾರೆ.

ಸ್ಕೈ ಫೋರ್ಸ್ 2014 ಪ್ರಸ್ತುತ ಉಚಿತವಾಗಿ ಆಂಡ್ರೋಯ್ಡ್ ಮತ್ತು ಐಓಎಸ್‌ಗೆ ಲಭ್ಯವಿದೆ. ಮತ್ತು ಇದನ್ನು ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದು.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+