ಸ್ಮಾರ್ಟ್ ಫೋನ್ ಆಪ್(apps) ನೀವೇ ಮಾಡುವುದು ಹೇಗೆ ?

Posted By: Varun
ಸ್ಮಾರ್ಟ್ ಫೋನ್ ಆಪ್(apps) ನೀವೇ ಮಾಡುವುದು ಹೇಗೆ ?

ನಮ್ಮ ಫೋನ್ ಗಳು ಸ್ಮಾರ್ಟ್ ಆಗುತ್ತಿರುವ ಹಾಗೆ ಅದರಲ್ಲಿ ಬಳಸುವ ಆಪ್ (apps)ಗಳೂ ಕೂಡ ಹೆಚ್ಚಾಗುತ್ತಿವೆ. ಅದರಲ್ಲೂ ನಿಮ್ಮದೇ ಆದ ಉಪಯೋಗಕ್ಕೆ ಬರುವ ಆಪ್ ಗಳನ್ನು ಅಭಿವೃದ್ಧಿ ಪಡಿಸಿದರೆ ನೀವೂ ಹಣ ಮಾಡಿಕೊಳ್ಳಬಹುದು . ಇದು ಪರ್ಯಾಯ ಕೆಲ್ಸವಾಗಬಲ್ಲದೂ ಕೂಡ.

ಹಾಗಿದ್ದರೆ ಆಂಡ್ರಾಯ್ಡ್ ಹಾಗು ಆಪಲ್ ನ ಐ.ಓ.ಎಸ್ ಆಪ್ ಗಳು ವಿಶ್ವ ಪ್ರಸಿದ್ಧಿ ಯಾಗಿದ್ದು, ಅವುಗಳಿಗೆ ಹೊಂದಾಣಿಕೆಯಾಗುವ ಆಪ್ ಗಳನ್ನು ನೀವೇ ಅಭಿವೃದ್ಧಿಪಡಿಸಲು ಕಲಿಸುವ ಎಷ್ಟೋ ಸಂಸ್ಥೆಗಳಿವೆ. ನಿಮಗೋಸ್ಕರ ಅಂತಹ ಕೋರ್ಸ್ ಗಳ ಪಟ್ಟಿ ಇಲ್ಲಿದೆ.

ಗೀಕ್ ಮೆನ್ಟಾರ್ಸ್(Geek Mentors): ನೋಯ್ಡಾ ಮೂಲದ ಈ ಸಂಸ್ಥೆಯು ಜನಪ್ರಿಯ ಐ.ಓ.ಎಸ್ ಮತ್ತು ಆಂಡ್ರಾಯ್ಡ್ ಸೇರಿದಂತೆ ವಿವಿಧ ಆಪ್ ಗಳಿಗೆ ತರಬೇತಿ ನೀಡುತ್ತದೆ. ಕೋಡಿಂಗ್ ಅನುಭವ ಅಥವಾ ಜ್ಞಾನವಿಲ್ಲದ ವಿನ್ಯಾಸಗಾರರು ಕೂಡ 3 ತಿಂಗಳ ಈ ಕೋರ್ಸ್ ಗೆ ಸೇರಿಕೊಳ್ಳಬಹುದು. ಗೇಮ್ ಅಭಿವೃದ್ಧಿ ಮಾಡುವುದು ಹೇಗೆ ಎಂದೂ ಹೇಳಿಕೊಡಲಾಗುತ್ತದೆ. ಈ ಮೂರು ತಿಂಗಳ ಕೋರ್ಸ್ Rs.75, ೦೦೦.

ಕೋಡ್ ಫ್ರಕ್ಸ್(CodeFrux ):ಬೆಂಗಳೂರು ಮೂಲದ,ಕೋಡ್ ಫ್ರಕ್ಸ್, ಐಫೋನ್ ಮತ್ತು ಆಂಡ್ರಾಯ್ಡ್ ವೇದಿಕೆಯ ಅಪ್ಲಿಕೇಶನ್ ಅಭಿವೃದ್ಧಿಗೆ ಶಿಕ್ಷಣ ಒದಗಿಸುತ್ತದೆ. ಆನ್ಲೈನ್ ಕಲಿಕೆಯ ವ್ಯವಸ್ಥೆ ಕೂಡ ಇದ್ದು ಒಂದು ತಿಂಗಳಿಗೆ Rs.15,000 ಮತ್ತು ಎರಡು ತಿಂಗಳ ಕೋರ್ಸ್ ಗೆ 20 ಸಾವಿರ ರೂಪಾಯಿ ಶುಲ್ಕವಿದೆ.

ಜೀನಿಯಸ್ ಪೋರ್ಟ್(Genius Port):

ಪುಣೆ, ಮತ್ತು ಬೆಂಗಳೂರುಗಳಲ್ಲಿ ಕಛೇರಿ ಹೊಂದಿರುವ ಜೀನಿಯಸ್ ಪೋರ್ಟ್, IOS, ಆಂಡ್ರಾಯ್ಡ್ ಮತ್ತು ವಿಂಡೋಸ್ 7 ಮೊಬೈಲ್ ಅಪ್ಲಿಕೇಶನ್ ತರಬೇತಿ ನೀಡುತ್ತದೆ.

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot