ಸ್ಮಾರ್ಟ್‌ಫೋನ್ ಕ್ಯಾಮರಾ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳು..!

By GizBot Bureau
|

ಕಳೆದು ಹೋದ ಕ್ಷಣಗಳನ್ನು ಪದೇ ಪದೇ ಮೆಲುಕು ಹಾಕಬೇಕೆಂದರೆ ನಮ್ಮ ಕಣ್ಣ ಮುಂದೆ ಆ ಘಟನೆಯ ಚಿತ್ರಣವಿದ್ದರೇನೆ ಚೆಂದ. ಅದಕ್ಕೆ ಹೆಚ್ಚಿನವರು ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದು ಇಟ್ಟುಕೊಳ್ಳಲು ಇಚ್ಛಿಸುವುದು. ಕ್ಯಾಮರಾ ಅಂದ ಕೂಡ್ಲೆ ಈಗೆಲ್ಲ ಅತ್ಯುದ್ಭುತ ಕ್ಯಾಮರಾಗಳು ಮೊಬೈಲ್ ನಲ್ಲೇ ಬರುತ್ತೆ.

ಈ ಬಗ್ಗೆ ಮಗನೊಬ್ಬ ತನ್ನ ಅಪ್ಪನ ಬಳಿ ಹೇಳುತ್ತಿದ್ದ. ಈ ಮೊಬೈಲ್ ನಲ್ಲಿ ಇಷ್ಟು ಮೆಗಾಪಿಕ್ಸಲ್ ನ ಕ್ಯಾಮರಾ ಇದೆ, ಆ ಮೊಬೈಲ್ ನಲ್ಲಿ ದ್ಯುತಿರಂದ್ರ ಇಷ್ಟಿದೆ. ಈ ಮೊಬೈಲ್ ಐಓಎಸ್ ಅತ್ಯದ್ಭುತವಾಗಿದೆ. ಆ ಮೊಬೈಲ್ ನಲ್ಲಿ ಫ್ಲ್ಯಾಶ್ ಮೋಡ್ ಚೆನ್ನಾಗಿದೆ.ಹಾಗೇ ಹೀಗೆ ಅಂತ ಮೊಬೈಲ್ ನ ಕ್ಯಾಮರಾ ಕೆಪಾಸಿಟಿಯ ವರ್ಣನೆಯನ್ನು ಮಗ ಮಾಡುತ್ತಿದ್ದರೆ ಅಪ್ಪನಿಗೆ ಏನೂ ಅರ್ಥವಾಗಲಿಲ್ಲ.

ಸ್ಮಾರ್ಟ್‌ಫೋನ್ ಕ್ಯಾಮರಾ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳು..!

ಅದಿಕ್ಕೆ ಹೇಳೋದು ಟೆಕ್ನಾಲಜಿ ಬೆಳೆದಂತೆಲ್ಲ ನಾವು ನಮ್ಮನ್ನ ಅಪ್ ಡೇಟ್ ಮಾಡಿಕೊಳ್ಳುತ್ತಿರಬೇಕು. ಇಲ್ಲದೇ ಇದ್ದರೆ ಜನರೇಷನ್ ಗೆ ತಕ್ಕ ಹಾಗೆ ನಮಗೆ ಬದುಕಲು ಸಾಧ್ಯವಾಗುವುದಿಲ್ಲ. ಅದೇ ಕಾರಣಕ್ಕೆ ಸ್ಮಾರ್ಟ್ ಫೋನ್ ನ ಕ್ಯಾಮರಾದಲ್ಲಿ ಬಳಕೆ ಮಾಡುವ ಕೆಲವು ಪದಗಳ ಅರ್ಥವನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಇವುಗಳನ್ನು ಅರ್ಥೈಸಿಕೊಂಡರೆ ಯಾವ ಸ್ಮಾರ್ಟ್ ಫೋನಿನ ಕ್ಯಾಮರಾ ವೈಶಿಷ್ಟ್ಯ ಅದ್ಭುತವಾಗಿರುತ್ತದೆ ಅದರಿಂದ ಫೋಟೋ ಕ್ಲಿಕ್ಕಿಸಿದರೆ ಹೇಗೆ ಆ ಫೋಟೋ ಬರುತ್ತದೆ ಎಂಬ ಬಗ್ಗೆ ನಿಮಗೊಂದು ಪರಿಕಲ್ಪನೆ ಸಿಗಲಿದೆ.

ಯಾಕೆಂದರೆ ಎಲ್ಲಾ ಫೋನಿನ ಕ್ಯಾಮರಾಗಳು ಒಂದೇ ಕೆಲಸವನ್ನೇ ಮಾಡುವುದು ಅಂದರೆ ಫೋಟೋ ಕ್ಲಿಕ್ಕಿಸುವುದೇ ಆದರೂ ಕೂಡ ಅವು ಕ್ಲಿಕ್ಕಿಸುವ ಫೋಟೋದ ಕ್ವಾಲಿಟಿ ವಿಭಿನ್ನವಾಗಿರುತ್ತದೆ. ಅದಕ್ಕೆ ಕಾರಣವಾಗುವುದು ಅದರಲ್ಲಿ ಅಳವಡಿಸಲಾಗುವ ಹಾರ್ಡ್ ವೇರ್ ಗಳು ಮತ್ತು ಸಾಫ್ಟ್ ವೇರ್ ಗಳು. ಪ್ರತಿ ಫೋನು ಕೂಡ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಹಾಗಾದರೆ ಸ್ಮಾರ್ಟ್ ಫೋನ್ ಕ್ಯಾಮರಾಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಪದಗಳು ಯಾವುದು ಮತ್ತು ಅದರ ಅರ್ಥವೇನು ಎಂಬುದನ್ನು ನೋಡೋಣ. ಮುಂದೆ ಓದಿ.

ಮೆಗಾಪಿಕ್ಸಲ್ (MP)

ಮೆಗಾಪಿಕ್ಸಲ್ (MP)

ಸ್ಮಾರ್ಟ್ ಫೋನ್ ಕ್ಯಾಮರಾಗಳ ಮಾತನಾಡುವಾಗ ಪ್ರತಿಯೊಬ್ಬರ ಆಲೋಚನೆಯಲ್ಲೂ ಬರುವ ಮೊದಲ ಪದವೇ ಎಷ್ಟು ಮೆಗಾಪಿಕ್ಸಲ್ ಕ್ಯಾಮರಾ ಇದೆ ಎಂಬುದು.ಇದು ಮಿಲಿಯನ್ ಗಟ್ಟಲೆ ಪಿಕ್ಸಲ್ ಗಳನ್ನು ಎಣಿಸುವ ಒಂದು ಲೆಕ್ಕಾಚಾರ ಅಷ್ಟೇ.. ಪ್ರತಿಯೊಂದು ಚಿತ್ರವೂ ಕೂಡ ಸಣ್ಣಸಣ್ಣ ರಂದ್ರಗಳಂತ ಭಾಗಗಳಿಂದ( ನಮ್ಮ ಕಣ್ಣಿಗೆ ಕಾಣುವಂತದಲ್ಲ.. ಸೂಕ್ಷ್ಮದರ್ಶಕದಲ್ಲಿ ಕಂಡಾಗ ಹೇಗೆ ಅಣುಗಳು ಕಾಣಿಸುತ್ತವೆಯೂ ಹಾಗೆ. ಆದರೆ ಅಣುಗಳಿಗಿಂತ ಸ್ವಲ್ಪ ದೊಡ್ಡದು ಎಂದಿಟ್ಟುಕೊಳ್ಳಿ ) ರಚಿಸಲ್ಪಡುತ್ತದೆ. ಆ ಸಣ್ಣಸಣ್ಣ ಭಾಗಗಳನ್ನೇ ಪಿಕ್ಸಲ್ ಗಳು ಎಂದು ಕರೆಯುವುದು ( ಒಂದು ಎಂಪಿ ಎಂದರೆ ಒಂದು ಮಿಲಿಯನ್ ಪಿಕ್ಸಲ್ ). ಹೆಚ್ಚು ನಂಬರ್ ನ ಮೆಗಾಪಿಕ್ಸಲ್ ಇರುವ ಕ್ಯಾಮರಾವು ಅತ್ಯಂತ ಉತ್ತಮ ಫೋಟೋವನ್ನು ನೀಡುತ್ತದೆ ಎಂದರ್ಥ.

ದ್ಯುತಿರಂಧ್ರ (Aperture (f/stop))

ದ್ಯುತಿರಂಧ್ರ (Aperture (f/stop))

ದ್ಯುತಿರಂಧ್ರ ಎಂದರೆ ಕ್ಯಾಮರಾದಲ್ಲಿರುವ ಹೋಲು ಅಥವಾ ರಂಧ್ರ. ಲೆನ್ಸ್ ಮತ್ತು ಕ್ಯಾಮೆರಾ ಸಂವೇದಕ ಮೂಲಕ ಪಡೆಯಬಹುದಾದ ಬೆಳಕಿನ ಪ್ರಮಾಣವನ್ನು ನಮ್ಮ ಕಣ್ಣುಗಳಲ್ಲಿ ನಿಯಂತ್ರಿಸುತ್ತದೆ . ಇದನ್ನು ನಾವು f/1.5, f/2.4 ಹೀಗೆ ನಮೂದಿಸುತ್ತೇವೆ.ಕಡಿಮೆ ದ್ಯುತಿರಂಧ್ರವೆಂದರೆ ಹೆಚ್ಚು ಬೆಳಕು ಆ ರಂಧ್ರದ ಮೂಲಕ ತೆರಳಲು ಕ್ಯಾಮರಾ ಲೆನ್ಸ್ ಸಹಕರಿಸುತ್ತದೆ ಎಂದರ್ಥ.

ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ (Optical image stabilization)

ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಷನ್ (Optical image stabilization)

ನಿಮಗೆ ತಿಳಿದಿರಬಹುದು, ಹಳೆ ಕಾಲದ ಕ್ಯಾಮರಾದಲ್ಲಿ ದೂರದ ಫೋಟೋವನ್ನು ಹತ್ತಿರದಿಂದ ಮತ್ತು ಹತ್ತಿರದ ಫೋಟೋವನ್ನು ದೂರದಿಂದ ತೆಗೆದಂತೆ ಕಾಣಲು ಕ್ಯಾಮರಾ ಮುಂಭಾಗದಲ್ಲಿ ತಿರುಗಿಸಲಾಗುತ್ತಿತ್ತು. ಆದರೆ ಸ್ಮಾರ್ಟ್ ಫೋನ್ ಗಳಲ್ಲಿ ಟಚ್ ಸ್ಕ್ರೀನ್ ಇರುತ್ತದೆ. ಕೇವಲ ನೀವು ಬೆರಳುಗಳ ತುದಿಯಿಂದ ಫೋಟೋ ಕ್ಲಿಕ್ಕಿಸುವ ಮುನ್ನ ಫ್ರೇಮ್ ಫಿಕ್ಸ್ ಮಾಡಲು ಬೆರಳನ್ನು ಜಾರಿಸಿದರೆ ಸಾಕಾಗುತ್ತದೆ. ಹೀಗೆ ಫೋಟೋ ಕ್ಲಿಕ್ಕಿಸಲು ಎಷ್ಟು ದೂರ ಮತ್ತು ಹತ್ತಿರ ಮಾಡಲು ಸಾಧ್ಯವಾಗುತ್ತದೆ ಎಂಬುದೇ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್. ಕಡಿಮೆ ಬೆಳಕಿನಲ್ಲಿ ಫೋಟೋ ಅಥವಾ ವೀಡಿಯೋ ಮಾಡಲು ಈ ವೈಶಿಷ್ಟ್ಯತೆಯು ನಿಮಗೆ ಅನುಕೂಲಕರವಾಗಿರುತ್ತದೆ.

ಶಟರ್ ವೇಗ (Shutter speed)

ಶಟರ್ ವೇಗ (Shutter speed)

ಶಟರ್ ವೇಗ ಅಂದರೆ ಫೋಟೋವನ್ನು ಎಷ್ಟು ಬಿಳುಪಾಗಿ ತೆಗೆಯಬೇಕು ಎಂಬುದನ್ನು ನಿರ್ಧರಿಸಲು ಸಹಾಯ ಮಾಡುವ ಅಂಶವಾಗಿದೆ. ಒಂದು ವೇಳೆ ನಿಮ್ಮ ಶಟರ್ ಸ್ಪೀಡ್ ಕಡಿಮೆ ಇದ್ದರೆ ಹೆಚ್ಚು ಬ್ರೈಟ್ ಆಗಿರುವ ಚಿತ್ರವನ್ನು ತೆಗೆಯಲು ಸಾಧ್ಯವಿದೆ. ಕಡಿಮೆ ಬೆಳಕಿನ ಪ್ರದೇಶದಲ್ಲಿ ಫೋಟೋ ಕ್ಲಿಕ್ಕಿಸುವ ಸಂದರ್ಬದಲ್ಲಿ ಇದು ನಿಮ್ಮ ಸಹಾಯಕ್ಕೆ ಬರುತ್ತದೆ. ಐಎಸ್ ಓ ನಿಮ್ಮ ಕ್ಯಾಮರಾವನ್ನು ಬೆಳಕಿಗೆ ಹೊಂದಿಸುವ ಸೂಕ್ಷ್ಮತೆಯನ್ನು ಐಎಸ್ಒ ನಿರ್ಧರಿಸುತ್ತದೆ. ಕಡಿಮೆ ಬೆಳಕಿನ ಪ್ರದೇಶದಲ್ಲೂ ಕೂಡ ಉತ್ತಮ ಫೋಟೋ ತೆಗೆಯಲು ಸಾಧ್ಯವಿದೆ. ಕ್ಯಾಮೆರಾಗಳಿಗೆ ಸಂಬಂಧಿಸಿದ ಚಿತ್ರ ಸೂಕ್ಷ್ಮತೆಯ ರೇಟಿಂಗ್ ಗಳನ್ನು ಇಂಟರ್ ನ್ಯಾಷನಲ್ ಸ್ಟ್ಯಾಂಡರ್ಸ್ ಆರ್ಗನೈಸೇಷನ್ ಪ್ರತಿನಿಧಿಸುವ ಐಎಸ್ಒ ಆಡಳಿತದಲ್ಲಿದೆ.

ಕ್ಷೇತ್ರದ ಆಳ (Depth of field)

ಕ್ಷೇತ್ರದ ಆಳ (Depth of field)

ಕ್ಷೇತ್ರದ ಆಳ ಎಂದರೆ ಚಿತ್ರದ ಯಾವ ಪ್ರದೇಶವು ಎಷ್ಟು ಫೋಕಸ್ ಆಗಿದೆ ಎಂಬುದನ್ನು ಸೂಚಿಸುವುದಾಗಿದೆ. ಒಂದು ವೇಳೆ ಯಾವುದೇ ಚಿತ್ರವು ಚಿತ್ರದ ಎಲ್ಲಾ ಭಾಗವನ್ನೂ ಫೋಕಸ್ ಮಾಡಿದ್ದರೆ ಅದರರ್ಥ ಹೆಚ್ಚಿನ ಕ್ಷೇತ್ರದ ಆಳವನ್ನು ಕ್ಯಾಮರಾ ಹೊಂದಿದೆ ಎಂಬುದಾಗಿದೆ ಮತ್ತು ಒಂದು ವೇಳೆ ಚಿತ್ರವು ಕೇವಲ ಮುಂಭಾಗವನ್ನು ಹೊಂದಿದ್ದು, ಹಿಂಭಾಗವು ಫೋಕಸ್ ಆಗಿದ್ದರೆ ಅದರ ಅರ್ಥ ಕಡಿಮೆ ಕ್ಷೇತ್ರದ ಆಳವನ್ನು ಹೊಂದಿದೆ ಎಂಬುದಾಗಿದೆ.

ಫ್ಲ್ಯಾಶ್

ಫ್ಲ್ಯಾಶ್

ಫ್ಲ್ಯಾಶ್ ಗಳು ಅಧ್ಬುತವಾಗಿದ್ದರೆ ಆ ಸ್ಮಾರ್ಟ್ ಫೋನ್ ಅತ್ಯುದ್ಭುತ ಫೋಟೋ ಗಳನ್ನು ಕ್ಲಿಕ್ಕಿಸಲು ಸಹಕಾರ ನೀಡುತ್ತದೆ. ಆದರೆ ಕಡಿಮೆ ಬೆಳಕಿನಲ್ಲಿ ಚಿತ್ರಗಳನ್ನು ತೆಗೆಯುವಾಗ ಹೆಚ್ಚಿನ ಕ್ಯಾಮರಾಗಳು ವಿಫಲವಾಗುತ್ತದೆ. ಇಂತಹ ಸಂದರ್ಬದಲ್ಲಿ ಕ್ಯಾಮರಾದ ಫ್ಲ್ಯಾಶ್ ಆಯ್ಕೆಯು ಹೆಚ್ಚು ಪ್ರಯೋಜನಕ್ಕೆ ಬರುತ್ತದೆ. ಫೋಟೋ ಕ್ಲಿಕ್ಕಿಸಿದಾಗ ಕೆಲವೊಮ್ಮೆ ಬೆಳಕು ಮೂಡುತ್ತದೆಯಲ್ಲ ಅದುವೇ ಫ್ಲ್ಯಾಶ್. ಎರಡು ರೀತಿಯ ಫ್ಲಾಶ್ ಗಳು ಸ್ಮಾರ್ಟ್ ಫೋನ್ ಕ್ಯಾಮರಾಗಳಲ್ಲಿ ಲಭ್ಯವಿರುತ್ತದೆ. ಒಂದು LED ಮತ್ತೊಂದು True Tone LED. ಮೊದಲನೆಯದನ್ನು ಹೆಚ್ಚಿನ ಕಡಿಮೆ ಬಜೆಟ್ ನ ಮತ್ತು ಮಧ್ಯಮ ಬಜೆಟ್ ನ ಸ್ಮಾರ್ಟ್ ಫೋನ್ ಗಳಲ್ಲಿ ಬಳಕೆ ಮಾಡಲಾಗಿರುತ್ತದೆ. ಇತ್ತೀಚೆಗಿನ ಮಾರ್ಡನ್ ಹೈ ಎಂಡ್ ಸ್ಮಾರ್ಟ್ ಫೋನ್ ಗಳಲ್ಲಿ ಟ್ರೂ ಟೋನ್ ಎಲ್ಇಡಿಯನ್ನು ಬಳಕೆ ಮಾಡಲಾಗಿರುತ್ತದೆ.

ಐಎಸ್ಒ

ಐಎಸ್ಒ

ನಿಮ್ಮ ಕ್ಯಾಮರಾವನ್ನು ಬೆಳಕಿಗೆ ಹೊಂದಿಸುವ ಸೂಕ್ಷ್ಮತೆಯನ್ನು ಐಎಸ್ಒ ನಿರ್ಧರಿಸುತ್ತದೆ. ಕಡಿಮೆ ಬೆಳಕಿನ ಪ್ರದೇಶದಲ್ಲೂ ಕೂಡ ಉತ್ತಮ ಫೋಟೋ ತೆಗೆಯಲು ಸಾಧ್ಯವಿದೆ. ಕ್ಯಾಮೆರಾಗಳಿಗೆ ಸಂಬಂಧಿಸಿದ ಚಿತ್ರ ಸೂಕ್ಷ್ಮತೆಯ ರೇಟಿಂಗ್ ಗಳನ್ನು ಇಂಟರ್ ನ್ಯಾಷನಲ್ ಸ್ಟ್ಯಾಂಡರ್ಸ್ ಆರ್ಗನೈಸೇಷನ್ ಪ್ರತಿನಿಧಿಸುವ ಐಎಸ್ಒ ಆಡಳಿತದಲ್ಲಿದೆ.

Best Mobiles in India

English summary
Smartphone camera terms you should know. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X