ಸ್ಮಾರ್ಟ್‌ಫೋನ್‌ನಲ್ಲಿ ಚಿಪ್‌ಸೆಟ್ ಏಕೆ ಹೆಚ್ಚು ಮಹತ್ವದ್ದು?
ಕ್ವಾಡ್ ಕೋರ್ ಚಿಪ್‌ಸೆಟ್‌ನೊಂದಿಗೆ 1 ಅಥವಾ 2ಜಿಬಿ RAMನೊಂದಿಗೆ ಸ್ಮಾರ್ಟ್‌ಫೋನ್ ಬರುವ ಕಾಲ ಮುಗಿದು ಹೋಗಿದೆ. ಇಂದು ಸ್ಮಾರ್ಟ್‌ಫೋನ್ ತಯಾರಕರು ಗ್ರಾಹಕರ ಮನಸ್ಸನ್ನು ಅರಿತುಕೊಂಡು ಫೋನ್‌ಗಳನ್ನು ತಯಾರಿಸುತ್ತಿದ್ದು ಇದರಿಂದ ಹೆಚ್ಚುವರಿ ಅಪ್ಲಿಕೇಶನ್‌ಗಳು ಮತ್ತು ಮಲ್ಟಿ ಟಾಸ್ಕ್ ಅನ್ನು ನಿರ್ವಹಿಸುವಾಗ ಸ್ಮಾರ್ಟ್‌ಫೋನ್ ಯಾವುದೇ ತೊಂದರೆಗಳನ್ನು ಅನುಭವಿಸುವುದಿಲ್ಲ.
ಸ್ಮಾರ್ಟ್‌ಫೋನ್ ತಯಾಕರು ಪ್ರೊಸೆಸಿಂಗ್ ಪವರ್ ಮತ್ತು ಫೋನ್‌ನ ಹಾರ್ಡ್‌ವೇರ್ ಅಂಶಕ್ಕೆ ಇದೀಗ ಹೆಚ್ಚಿನ ಒತ್ತು ನೀಡುತ್ತಿದ್ದು, ಕ್ಯಾಮೆರಾದ ಜೊತೆಗೆ ಇನ್ನಿತರ ಅಂಶಗಳ ಮೇಲೂ ಗಮನವಿಟ್ಟುಕೊಂಡು ಫೋನ್ ತಯಾರಿಯನ್ನು ಮಾಡುತ್ತಿದ್ದಾರೆ. ಇಂದು ಗ್ರಾಹಕರು ಸೆಲ್ಫಿ ಅಂಶಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಸ್ಮಾರ್ಟ್‌ಫೋನ್ ತಯಾರಕರು ಸೆಲ್ಫಿ ಕ್ಯಾಮೆರಾಗಳ ಅಭಿವೃದ್ಧಿಗೂ ಗಮನವನ್ನು ನೀಡುತ್ತಿದ್ದಾರೆ. ಬನ್ನಿ ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್ ತಯಾರಕರು ಯಾವೆಲ್ಲಾ ಬಗೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಉನ್ನತಿಗೆ ಗಮನವನ್ನು ಹರಿಸುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳೋಣ.

#1
ಇಂದಿನ ಗ್ರಾಹಕರಿಗೆ ದೊಡ್ಡ ಡಿಸ್‌ಪ್ಲೇ ಫೋನ್ ಬೇಕಿದ್ದರೆ, ಇನ್ನು ಕೆಲವರಿಗೆ ಕ್ಯಾಮೆರಾ ಉತ್ತಮವಾಗಿದ್ದರೆ ಸಾಕು. ಸ್ಮಾರ್ಟ್‌ಫೋನ್‌ನಲ್ಲಿ ಪ್ರೊಸೆಸರ್ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದೆ. ಅದನ್ನು ಕಡೆಗಣಿಸುವಂತಿಲ್ಲ.

#2
ಉತ್ತಮ ಚಿಪ್‌ಸೆಟ್ ಉತ್ತಮ ಕಾರ್ಯನಿರ್ವಹಣೆಗೆ ಸಹಾಯಕವಾಗಿದ್ದು, ಬಳಕೆದಾರರಿಗೆ ಅತ್ಯುತ್ತಮ ಬಳಕೆ ಅನುಭವವನ್ನು ನೀಡುತ್ತಿದೆ. 16 ಎನ್‌ಎಮ್ ಚಿಪ್‌ಸೆಟ್‌ಗಳು ಸುಧಾರಿತ ತಂತ್ರಜ್ಞಾನ ಎಂದೆನಿಸಿದ್ದು ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಇತಿಹಾಸವನ್ನೇ ದಾಖಲಿಸಿದೆ.

#3
ಹುವಾವೆಯ ಆನ್‌ಲೈನ್ ಸ್ಮಾರ್ಟ್‌ಫೋನ್ ಬ್ರಾಂಡ್ ಹೋನರ್ ಹೆಚ್ಚು ಶಕ್ತಿಯುತ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಹೋನರ್ ತನ್ನ ಬಳಕೆದಾರರಿಗೆ ಉತ್ತಮ ಫೀಚರ್‌ಗಳನ್ನೇ ಒದಗಿಸುತ್ತಿದ್ದು, ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಲಿದೆ.

#4
ಕಂಪೆನಿಯು ಕಿರಿನ್ 650 16 ಎನ್‌ಎಮ್ ಚಿಪ್‌ಸೆಟ್ ಉಳ್ಳ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದ್ದು, ಇತ್ತೀಚೆಗೆ ತಾನೇ ಅನಾವರಣಗೊಂಡಿದೆ. ಇದು ಹಿಂದಿನ 28 ಎನ್‌ಎಮ್ ಚಿಪ್‌ಸೆಟ್‌ಗಳಿಗೆ ಭರ್ಜರಿ ಪೈಪೋಟಿಯನ್ನು ನೀಡಲಿದೆ.


Click it and Unblock the Notifications








