Home
ಮೊಬೈಲ್

BP, ಹೃದಯ ಬಡಿತ ಅಳೆಯುವ ಸ್ಮಾರ್ಟ್‌ವಾಚ್: ನಿಮ್ಮ ಕೈನಲ್ಲೇ ಡಾಕ್ಟರ್..!

By Srinidhi

ಮಾರುಕಟ್ಟೆಯಲ್ಲಿ ಸ್ಮಾರ್ಟ್‌ವಾಚ್‌ಗಳ ಅಬ್ಬರವೂ ಹೆಚ್ಚಾಗಿದ್ದು, ಈ ಸಂದರ್ಭದಲ್ಲಿ ಫ್ಲಿಪ್‌ಕಾರ್ಟ್ ಒಡೆತನದ ಸ್ಮಾರ್ಟನ್ ಬ್ರಾಂಡ್ ತನ್ನದೇ ಸ್ಮಾರ್ಟ್‌ವಾಚ್ ವೊಂದನ್ನು ಮಾರುಕಟ್ಟೆಗೆ ಪರಿಚಯವನ್ನು ಮಾಡಿದ್ದು, 'ಸ್ಮಾರ್ಟನ್ ಟಿ ಬ್ಯಾಂಡ್' ಅನ್ನು ಬಿಡುಗಡೆ ಮಾಡಿದ್ದು, ಬಳಕೆದಾರರಿಗೆ ಅತೀ ಹೆಚ್ಚಿನ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್‌ವಾಚ್‌ಗಳು ದೊರೆಯುತ್ತಿದ್ದು, ಇದೇ ಸಂದರ್ಭದಲ್ಲಿ ಸ್ಮಾರ್ಟನ್ ಟಿ ಬ್ಯಾಂಡ್ ಅವುಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಬಳಕೆದಾರರ ಆರೋಗ್ಯದ ಕಾಳಜಿಯನ್ನು ವಹಿಸಲಿದೆ ಎನ್ನಲಾಗಿದ್ದು, ಬಳಕೆದಾರರಿಗೆ ಸಾಕಷ್ಟು ಸಹಾಯವನ್ನು ಮಾಡಲಿದೆ. ಫ್ಲಿಪ್‌ಕಾರ್ಟಿನಲ್ಲಿ ಮಾತ್ರವೇ ಮಾರಾಟವಾಗಲಿದೆ.

BP ಅಳೆಯುತ್ತದೆ:

BP ಅಳೆಯುತ್ತದೆ:

ಈಗಾಗಲೇ ದೇಶದಲ್ಲಿ ಅತೀ ಹೆಚ್ಚು ಮಂದಿ BP ಬ್ಲಡ್ ಪ್ರಷರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಸಹಾಯಕ್ಕೆ ಬರುವ ಸ್ಮಾರ್ಟನ್ ಟಿ ಬ್ಯಾಂಡ್, ಬಳಕೆದಾರರು ಬ್ಲಡ್ ಪ್ರಷರ್ ಅನ್ನು ಅಳೆಯಲಿದೆ ಎನ್ನಲಾಗಿದೆ.

ಹೃದಯ ಬಡಿತ:

ಹೃದಯ ಬಡಿತ:

ಇದಲ್ಲದೇ ಸ್ಮಾರ್ಟನ್ ಟಿ ಬ್ಯಾಂಡ್ ಬಳಕೆದಾರರ ಹೃದಯದ ಬಡಿತವನ್ನು ಲೆಕ್ಕಹಾಕಲಿದ್ದು, ಯಾವುದಾದರು ಹೆಚ್ಚು ಕಡಿಮೆ ಕಾಣಿಸಿದಲ್ಲಿ ಬಳಕೆದಾರರನ್ನು ಎಚ್ಚರಿಸುವಂತಹ ಕಾರ್ಯವನ್ನು ಮಾಡಲಿದೆ.

ನೋಟಿಫಿಕೇಷನ್:

ನೋಟಿಫಿಕೇಷನ್:

ನಿಮ್ಮ ಸ್ಮಾರ್ಟ್‌ಫೋನಿಗೆ ಬರುವ ಕರೆಗಳು ಮತ್ತು ಮೇಸೆಜ್‌ಗಳ ಕುರಿತು ನೋಟಿಫಿಕೇಷನ್ ಅನ್ನು ನೀಡಲಿದೆ. ಇದರಿಂದಾಗಿ ನಿಮ್ಮ ಯಾವುದೇ ನೋಟಿಫಿಕೇಷನ್ ಗಳು ಮಿಸ್ ಆಗುವುದಿಲ್ಲ.

ಬ್ಲೂಟೂತ್:

ಬ್ಲೂಟೂತ್:

ಸ್ಮಾರ್ಟನ್ ಟಿ ಬ್ಯಾಂಡ್ ಬ್ಲೂಟೂತ್ ನೊಂದಿಗೆ ಕಾರ್ಯನಿರ್ವಹಿಸಲಿದ್ದು, ನಿಮ್ಮ ಸ್ಮಾರ್ಟ್‌ಫೋನಿನೊಂದಿಗೆ ಕನೆಕ್ಟ್ ಆಗಲಿದೆ. ಇದಲ್ಲದೇ ಬಳಕೆದಾರರಿಗೆ ಆಪ್ ವೊಂದನ್ನು ಸಹ ನೀಡಲಿದೆ. ಇದರ ಮೂಲಕ ನಿರ್ವಹಿಸಬಹುದಾಗಿದೆ.

ವಾಟರ್ ಪ್ರೂಫ್:

ವಾಟರ್ ಪ್ರೂಫ್:

ಇದಲ್ಲದೇ ಸ್ಮಾರ್ಟನ್ ಟಿ ಬ್ಯಾಂಡ್ ವಾಟರ್ ಫ್ರೂಫ್ ಆಗಿದ್ದು, ಬಳಕೆದಾರರು ಎಲ್ಲಾ ವಾತಾವರಣದಲ್ಲಿಯೂ ಇದನ್ನು ಕಟ್ಟಿಕೊಳ್ಳಬಹುದಾಗಿದೆ. ಮಳೆಯಲ್ಲಿ ನೆನೆದರು ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ.

ಫೇಸ್‌ಬುಕ್ ಅನ್ನು ಸಹ ಬಳಸಬಹುದಾದ ಈ ಫೀಚರ್ ಪೋನ್ ಅತ್ಯುತ್ತಮವಾಗಿದೆ
ಒಂದು ವರ್ಷ ವ್ಯಾರೆಂಟಿ:

ಒಂದು ವರ್ಷ ವ್ಯಾರೆಂಟಿ:

ಸ್ಮಾರ್ಟನ್ ಟಿ ಬ್ಯಾಂಡ್ ಒಂದು ವರ್ಷದ ವ್ಯಾರೆಂಟಿಯೊಂದಿಗೆ ವರಲಿದ್ದು, ಬಳಕೆದಾರರಿಗೆ ಉತ್ತಮ ವಿನ್ಯಾಸದಲ್ಲಿ ದೊರೆಯುತ್ತಿದ್ದು, ಡಿಜಿಟಲ್ ವಾಚ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

Best Mobiles in India

English summary
Smartron t-band Launched In India. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+