TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಭಾರತದಲ್ಲಿ ಶಿಯೋಮಿ ಅಲೆ ಅಳಿಸಲಿದೆ ಭಾರತೀಯ 'ಸ್ಮಾರ್ಟಾನ್ ಟಿ' ಫೋನ್!!
ಭಾರತೀಯ ಮೊಬೈಲ್ ಕಂಪನಿಗಳು ಇರುವುದು ಕೆಲವೇ ಕೆಲವು. ಅದರಲ್ಲಿಯೂ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ನೀಡುವ ಒಂದೇ ಒಂದು ಮೊಬೈಲ್ ಕಂಪೆನಿ ಹೆಸರನ್ನು ಹೇಳಿ ಎಂದರೆ ಯಾವೊಬ್ಬ ಭಾರತೀಯ ಕೂಡ ಮಾತೆತ್ತುವುದಿಲ್ಲ.! ಆದರೆ, ಭಾರತೀಯರಿಗೆ ಇನ್ಮುಂದೆ ಅಂತಹ ಪರಿಸ್ಥಿತಿ ಬರುವುದಿಲ್ಲ.!!
ಹೌದು, ವಿಶ್ವದ ಮೊಬೈಲ್ ಕಂಪೆನಿಗಳಂತೆಯೇ ಭಾರತದ ಮೊಬೈಲ್ ಕಂಪೆನಿಯೊಂದು ತಲೆಎತ್ತಿ ನಿಲ್ಲುವಂತಹ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿದೆ.! ಅತ್ಯುತ್ತಮ ದರ್ಜಿಯ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಿ ವಿಶ್ವದಲ್ಲಿಯೇ ಭಾರತದ ಹೆಸರನ್ನು ಉತ್ತುಂಗ ಸ್ಥಿತಿಗೆ ಕರೆದೊಯ್ಯಲು ಭಾರತದ 'ಸ್ಮಾರ್ಟಾನ್' ಮೊಬೈಲ್ ಕಂಪೆನಿ ಸಿದ್ದವಾಗಿದೆ.!!
ಭಾರತದಲ್ಲಿ ನಂಬರ್ ಒನ್ ಆಗಿ ಮೆರೆಯುತ್ತಿರುವ ಶಿಯೋಮಿ ಕಂಪೆನಿ ಮೊಬೈಲ್‌ಗಳಿಗೂ ಸೆಡ್ಡು ಹೊಡೆಯುವಂತಹ ಸ್ಮಾರ್ಟಾನ್ ಕಂಪೆನಿಯ ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. 5000mAh ಬ್ಯಾಟರಿ ಹೊಂದಿರುವ "ಸ್ಮಾರ್ಟಾನ್ ಟಿ ಫೋನ್ ಪಿ" ಫೋನ್ ಕೇವಲ 7,999 ರೂಪಾಯಿಗಳಿಗೆ ಬಾರತದಲ್ಲಿ ಲಭ್ಯವಿದೆ.!!
ಅತ್ಯಂತ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಫೀಚರ್ಸ್ ಹೊಂದಿರುವ ಫೋನ್ ಇದಾಗಿದ್ದು, ಗುಣಮಟ್ಟದಲ್ಲಿಯೂ ಇದು ಬೆಸ್ಟ್ ಫೋನ್ ಎನ್ನಬಹುದು.! ಹಾಗಾಗಿ, "ಸ್ಮಾರ್ಟಾನ್ ಟಿ ಫೋನ್ ಪಿ" ಫೋನ್ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ? ಸ್ಮಾರ್ಟ್‌ಫೋನ್ ವಿಶೇಷತೆಗಳು ಏನು? ಬಿಡುಗಡೆ ಯಾವಾಗ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!
ಡಿಸ್‌ಪ್ಲೇ ಮತ್ತು ವಿನ್ಯಾಸ.!!
ಶಿಯೋಮಿ ಸ್ಮಾರ್ಟ್‌ಫೋನ್‌ಗಳನ್ನು ಗುರಿಯಾಗಿಸಿಕೊಂಡು ಬಂದಿರುವ ಸ್ಮಾರ್ಟಾನ್ ಪಿ ಫೋನ್ ಬಹುತೇಕ ರೆಡ್‌ಮಿ ನೋಟ್ 4 ವಿನ್ಯಾಸವನ್ನು ಹೊಂದಿದೆ. ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆ ಹಾಗೂ 2.5D ಕರ್ವಡ್ ಗ್ಲಾಸ್ ಹೊದಿಕೆಯ 5.2 ಇಂಚ್ ಡಿಸ್‌ಪ್ಲೇ ಸ್ಮಾರ್ಟ್‌ಫೋನಿನಲ್ಲಿದೆ.!!
ಪ್ರೊಸೆಸರ್ ಮತ್ತು RAM!!
ಕಡಿಮೆ ಬೆಲೆಗೆ ಮಾರುಕಟ್ಟೆಗೆ ಕಾಲಿಟ್ಟಿರುವ ಸ್ಮಾರ್ಟಾನ್ ಪಿ ಫೋನ್ ಸ್ನ್ಯಾಪ್‌ಡ್ರಾಗನ್ 435 ಚಿಪ್‌ಸೆಟ್ ಅನ್ನು ಒಳಗೊಂಡಿದೆ. ಇನ್ನು 3GB RAM ಮತ್ತು 32 GB ಆಂತರಿಕ ಮೆಮೊರಿ ಹೊಂದಿರುವ ಈ ಫೋನ್‌ನಲ್ಲಿ ಮೆಮೊರಿಯನ್ನು ಹೆಚ್ಚಿಸಬಹುದಾದ ಆಯ್ಕೆ ಕೂಡ ಲಭ್ಯವಿದೆ.!!
5000mAh ಬ್ಯಾಟರಿ ಶಕ್ತಿ.!!
ಶಿಯೋಮಿಗೂ ಸೆಡ್ಡು ಹೊಡೆಯುವ ಬ್ಯಾಟರಿ ಶಕ್ತಿಯನ್ನು 7,999 ರೂಪಾಯಿಯ ಸ್ಮಾರ್ಟ್‌ಫೋನ್ ಸ್ಮಾರ್ಟಾನ್ ಪಿ ಹೊಂದಿದೆ. ಸ್ಮಾರ್ಟಾನ್ ಕಂಪೆನಿ ಹೇಳುವಂತೆ ಸ್ಮಾರ್ಟ್‌ಪೋನ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಸಂಪೂರ್ಣ ಎರಡು ದಿನಗಳು ಸಂಪೂರ್ಣ ಬಳಕೆ ಮಾಡಬಹುದು ಎಂದು ತಿಳಿಸಿದೆ.!!
ಕ್ಯಾಮೆರಾ ಫೀಚರ್ಸ್?
ಕ್ಯಾಮರಾ ವಿಷಯದಲ್ಲಿಯೂ ಶಿಯೋಮಿಯನ್ನು ನಕಲು ಮಾಡಿರುವ ಸ್ಮಾರ್ಟ್ರಾನ್ ಪಿ 13 ಎಂಪಿ ರಿಯರ್ ಹಾಗೂ 5MP ಸೆಲ್ಫಿ ಕ್ಯಾಮರಾ ಹೊಂದಿದೆ. ಕ್ಯಾಮರಾ ಅಪ್ಲಿಕೇಶನ್ ಇಂಟರ್‌ಫೇಸ್ ಅನ್ನು ಸ್ವಲ್ಪಮಟ್ಟಿನ ಟ್ವೀಕ್ ಮಾಡಲಾಗಿದ್ದು, ನಾವು ನೀಡುವ ಬೆಲೆಗೆ ಈ ಫೋನ್ ಕ್ಯಾಮೆರಾ ಅಪರೂಪವಾಗಿದೆ ಎನ್ನಬಹುದು.!!
1000GB ಕ್ಲೌಡ್ ಡೇಟಾ!!
ಸ್ಮಾರ್ಟ್‌ಫೋನ್ ಮೆಮೊರಿ ಸಾಲುವುದಿಲ್ಲ ಎನ್ನುವವರಿಗಾಗಿಯೇ ಸ್ಮಾರ್ಟಾನ್ ಕಂಪೆನಿ ತಮ್ಮ ಟಿ.ಕ್ಲೌಟ್‌ನಲ್ಲಿ 1000GB ಕ್ಲೌಡ್ ಡೇಟಾವನ್ನು ಉಚಿತವಾಗಿ ಒದಗಿಸಿದೆ.!! ಹಾಗಾಗಿ, ಸ್ಮಾರ್ಟಾನ್ ಗ್ರಾಹಕರು ವಿಡಿಯೋ, ಫೋಟೊಗಳನ್ನು ಇಡಲು ಫೋನ್ ಮೆಮೊರಿ ಇಲ್ಲವಲ್ಲ ಎಂದು ಚಿಂತಿಸುಹಾಗಿಲ್ಲ.!!
ಇತರೆ ಏನೆಲ್ಲಾ ಫೀಚರ್ಸ್?
ಆಂಡ್ರಾಯ್ಡ್ 7.1.1 ನೌಗಾಟ್ ಮೂಲಕ ಕಾರ್ಯನಿರ್ವಹಣೆ ನಿಡುವ ಈ ಫೋನ್ ಆಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಆಗುವ ನಿರೀಕ್ಷೆಯಿದೆ. 4G ಎಲ್‌ಟಿಇ, ವೋಲ್ಟ್, ವೈ ಫೈ 802.11 ಮೈಕ್ರೋ ಯುಎಸ್‌ಬಿ ಪೋರ್ಟ್‌ನಂತಹ ಬಹುತೇಕ ಎಲ್ಲಾ ಫೀಚರ್ಸ್‌ಗಳನ್ನು ಹೊಂದಿರುವ ಈ ಫೋನ್ ಅನ್ನು ನಾವು ನೀಡುವ ಹಣಕ್ಕೆ ಯೋಗ್ಯ ಫೋನ್ ಎನ್ನಬಹುದು.!!