Nothing Phone 3a pro ಫೋನಿನ ವಿನ್ಯಾಸದಿಂದ ನಿರಾಶೆಗೊಂಡ ಅಭಿಮಾನಿಗಳು?!
ಭಾರತದಲ್ಲಿ ಇದೇ ಮಾರ್ಚ್ 4 ರಂದು ಬಿಡುಗಡೆಯಾಗುತ್ತಿರುವ Nothing Phone 3a ಸರಣಿಯಲ್ಲಿ ಪ್ರೊ ಮಾದರಿ ಸ್ಮಾರ್ಟ್‌ಫೋನ್ Nothing Phone 3a pro ಹೇಗಿರಲಿದೆ ಎಂಬ ಮೊದಲ ಲುಕ್ ಬಹಿರಂಗವಾಗಿದೆ. Nothing ಕಂಪೆನಿಯು ದೇಶದಲ್ಲಿ ತನ್ನ ಮುಂಬರುವ Nothing Phone 3a ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದನ್ನು ಇತ್ತೀಚಿಗಷ್ಟೇ ಖಚಿತಪಡಿಸಿತ್ತು. ಇದಾದ ನಂತರ Nothing Phone 3a pro ಆವೃತ್ತಿಯ ಸ್ಮಾರ್ಟ್‌ಫೋನ್ ವಿನ್ಯಾಸವು ಹೇಗಿರಲಿದೆ ಎಂಬುದನ್ನು ಬಹಿರಂಗಪಡಿಸಿದೆ. ಮತ್ತು Nothing Phone 3a pro ಸ್ಮಾರ್ಟ್‌ಫೋನಿನ ವಿನ್ಯಾಸವು ಮಿಶ್ರ ಪ್ರತಿಕ್ರಿಯೆ ಪಡೆದಿದೆ.
ಹೌದು, Nothing Phone 3a pro ಸ್ಮಾರ್ಟ್‌ಫೋನಿನಲ್ಲಿ ಈ ವರ್ಷದ ಅತಿದೊಡ್ಡ ಅಪ್‌ಗ್ರೇಡ್‌ಗಳಲ್ಲಿ ಒಂದಾದ 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಕ್ಯಾಮೆರಾ ಇರುತ್ತದೆ ಎಂದು ಕಂಪೆನಿಯು ಮೊದಲೇ ತಿಳಿಸಿತ್ತು. ಇದರಿಂದ ಅದರ ವಿನ್ಯಾಸ ಬದಲಾಗುವ ನಿರೀಕ್ಷೆ ಇತ್ತು. ಅದರಂತೆ, ತನ್ನ ಸಿಗ್ನೇಚರ್ ಶೈಲಿಯ ಪಾರದರ್ಶಕ ಬ್ಯಾಕ್ ಪ್ಯಾನಲ್ ಅನ್ನು ಉಳಿಸಿಕೊಂಡಿರುವ ಕಂಪೆನಿಯು, ಮೂರು ಕ್ಯಾಮೆರಾಗಳನ್ನು ಹೊಂದಿರುವ ಹೊಸ ರೌಂಡ್ ಕ್ಯಾಮೆರಾ ಸೆಟಪ್‌ನಲ್ಲಿ Nothing Phone 3a pro ಸ್ಮಾರ್ಟ್‌ಫೋನನ್ನು ಬಿಡುಗಡೆಗೊಳಿಸಿದೆ. ಇದು ಅನೇಕ ಅಭಿಮಾನಿಗಳಿಗೆ ಸಂತಸ ತಂದಿದ್ದರೆ, ಹಲವರನ್ನು ನಿರಾಶೆಗೊಳಿಸಿದೆ.
X ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ, ಕೆಲವು ಬಳಕೆದಾರರು Nothing Phone 3a pro ವಿನ್ಯಾಸದ ಕುರಿತು ತಮ್ಮ ಅತೃಪ್ತಿಯ ಬಗ್ಗೆ ಧ್ವನಿ ಎತ್ತಿದ್ದಾರೆ. X ನಲ್ಲಿ ಒಬ್ಬ ಬಳಕೆದಾರರು, "ಇಂತಹ ಕೆಟ್ಟ ವಿನ್ಯಾಸವನ್ನು ನಾವು ನೋಡಿಲ್ಲ. ಇದು ನನ್ನ ಆಸೆಯನ್ನು ನಿರಾಸೆಗೊಳಿಸಿದೆ ಎಂದು!" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ನಥಿಂಗ್ ಕಂಪೆಇಯ ಸಹ-ಸಂಸ್ಥಾಪಕ ಕಾರ್ಲ್ ಪೀ ಅವರನ್ನು ಈ ಹೊಸ ವಿನ್ಯಾಸವನ್ನು ಸಮರ್ಥಿಸಿಕೊಳ್ಳಲು ಸವಾಲು ಹಾಕಿದ್ದಾರೆ. ಈ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು "ಭಯಾನಕ" ಎಂದು ಕರೆದಿದ್ದಾರೆ.!

Nothing Phone 3a pro ಸ್ಮಾರ್ಟ್‌ಫೋನಿನಲ್ಲಿ ಈ ವರ್ಷದ ಅತಿದೊಡ್ಡ ಅಪ್‌ಗ್ರೇಡ್‌ಗಳಲ್ಲಿ ಒಂದಾದ 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಕ್ಯಾಮೆರಾ ಆಗಿರುತ್ತದೆ. ಇದು 3x ಆಪ್ಟಿಕಲ್ ಜೂಮ್, 6x ಇನ್-ಸೆನ್ಸರ್ ಜೂಮ್ ಮತ್ತು ಕ್ರೇಜಿ 60x ಹೈಬ್ರಿಡ್ "ಅಲ್ಟ್ರಾ" ಜೂಮ್ ಅನ್ನು ಸಹ ಬೆಂಬಲಿಸುವ ನಿರೀಕ್ಷೆಯಿದೆ. ಕಂಪನಿಯು ಪ್ರಭಾವಶಾಲಿ ಮ್ಯಾಕ್ರೋ ಶಾಟ್‌ಗಳನ್ನು ಸಹ ಭರವಸೆ ನೀಡಿದೆ. ಹಾಗಾದರೆ, ನೂತನ Nothing Phone 3a ಸರಣಿ ಸ್ಮಾರ್ಟ್‌ಫೋನ್‌ಗಳು ಹೇಗಿರಲಿವೆ?, ಬೆಲೆಗಳು ಎಷ್ಟಿರಬಹುದು ಎಂಬ ಸಂಪೂರ್ಣ ಮಾಹಿತಿಯನ್ನುನೋಡೋಣಹೊಸ ಬನ್ನಿ.
Nothing Phone 3a ಸರಣಿ ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯಗಳು
Nothing Phone 3a ಸರಣಿ ಸ್ಮಾರ್ಟ್‌ಫೋನ್‌ಗಳು ಅದರ ಸಿಗ್ನೇಚರ್ ಶೈಲಿಯ ಅರೆ-ಪಾರದರ್ಶಕ ವಿನ್ಯಾಸ ಮತ್ತು ಗ್ಲಿಫ್ ಇಂಟರ್ಫೇಸ್ ಅನ್ನು ಒಳಗೊಂಡಿರುತ್ತದೆ. ಅಂದರೆ ಈ ಫೋನ್ ಹಿಂಭಾಗದಲ್ಲಿ ಕಂಪೆನಿಯ ವಿಶಿಷ್ಟ LED ಲೈಟ್‌ಗಳನ್ನು ಹೊಂದಿರುತ್ತದೆ. ಇನ್ನು ಈ ಸ್ಮಾರ್ಟ್‌ಫೋನಿನ ಡಿಸ್ಪ್ಲೇ 120Hz ರಿಫ್ರೆಶ್ ದರದೊಂದಿಗೆ 6.72-ಇಂಚಿನ AMOLED ಪ್ಯಾನೆಲ್ ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.ಇದು ನಯವಾದ ದೃಶ್ಯಗಳು ಮತ್ತು ಆಳವಾದ ಹೊಳಪನ್ನು ನೀಡುತ್ತದೆ. ಪ್ರೊ ಆವೃತ್ತಿಯು ಹೆಚ್ಚುವರಿ ಡಿಸ್ಪ್ಲೇ ವೈಶಿಷ್ಟ್ಯಗಳನ್ನು ಹೊಂದಿರಬಹುದು, ಆದರೆ ನಥಿಂಗ್ ಕಂಪೆನಿಯು ಇನ್ನೂ ಅದನ್ನು ದೃಢೀಕರಿಸಿಲ್ಲ.
ದೇಶದಲ್ಲಿ ಬಿಡುಗಡೆಯಾಗಲಿರುವ Nothing Phone 3a ಮತ್ತು 3a pro ಎರಡೂ ಸ್ಮಾರ್ಟ್‌ಫೋನ್‌ಗಳು ಮಧ್ಯಮ ಶ್ರೇಣಿಯ ಪ್ರೊಸೆಸರ್ ಆಗಿರುವ "Snapdragon 7s Gen 3" ಚಿಪ್‌ಸೆಟ್‌ನಿಂದ ಚಾಲಿತವಾಗುತ್ತವೆ ಎಂದು ವದಂತಿಗಳಿವೆ. ಬ್ಯಾಟರಿ 5,000mAh ಸಾಮರ್ಥ್ಯದಾ ಗಿರುತ್ತದೆಎಂದು ನಿರೀಕ್ಷಿಸಲಾಗಿದೆ. ಆದರೆ, ವೇಗದ ಚಾರ್ಜಿಂಗ್ ಕುರಿತು ಇನ್ನೂ ಯಾವುದೇ ವಿವರಗಳು ಲಭ್ಯವಿಲ್ಲ, ಆದರೆ ಹಿಂದಿನ ನಥಿಂಗ್ ಸರಣಿಯ ಸ್ಮಾರ್ಟ್‌ಫೋನ್‌ಗಳು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಿದ್ದರಿಂದ, ನಾವು ಇದೇ ರೀತಿಯಲ್ಲಿ ವೈಶಿಷ್ಟ್ಯಗಳನ್ನು ಎದುರು ನೋಡಬಹುದು.
Nothing Phone 3a pro ಫೋನ್ ಪೆರಿಸ್ಕೋಪ್ ಲೆನ್ಸ್ ಪಡೆದರೂ, ಸಾಮಾನ್ಯ Phone 3a pro ಫೋನ್ ಇನ್ನೂ ಘನ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ ಎನ್ನಲಾಗಿದೆ. ಇದು OIS ನೊಂದಿಗೆ 50-ಮೆಗಾಪಿಕ್ಸೆಲ್ ಮುಖ್ಯ ಸೆನ್ಸಾರ್, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2x ಆಪ್ಟಿಕಲ್ ಜೂಮ್, 4x ಡೆಪ್ತ್ ಜೂಮ್ ಮತ್ತು 30x ಅಲ್ಟ್ರಾ ಜೂಮ್ ಹೊಂದಿರುವ 50-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಈ ಎಲ್ಲಾ ವಿವರಗಳು ಸೋರಿಕೆಯನ್ನು ಆಧರಿಸಿದ್ದು, ಅಧಿಕೃತ ಬಿಡುಗಡೆಯವರೆಗೆ ಸಂಪೂರ್ಣ ವೈಶಿಷ್ಟ್ಯಗಳ ಕುರಿತಂತೆ ನಾವು ಕಾದುನೋಡಬೇಕಿದೆ.
Nothing Phone 3a ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆಗಳು
Nothing Phone 3a ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆ ವಿವರಗಳನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ, ಆದರೆ ಸೋರಿಕೆಯ ಮಾಹಿತಿಗಳಂತೆ Nothing Phone 3a ಫೋನ್ ಬೆಲೆಗಳು ಸುಮಾರು 30,000 ರೂ.ಗಳಿಂದ ರಿಂದ ಪ್ರಾರಂಭವಾಗಬಹುದು ಎಂದು ಸೂಚಿಸುತ್ತವೆ, ಆದರೆ ಪ್ರೊ ಆವೃತ್ತಿಯ ಬೆಲೆ ರೂ 40,000 ಕ್ಕಿಂತ ಕಡಿಮೆ ಇರಬಹುದು. ಯುರೋಪ್‌ನಲ್ಲಿ, 3a ಬೆಲೆಗಳು EUR 349 (ರೂ 31,600) ಮತ್ತು Pro ಬೆಲೆ EUR 479 (ರೂ 43,400) ಆಗಿದೆ. ಭಾರತೀಯ ಬೆಲೆ ಸಾಮಾನ್ಯವಾಗಿ ಯುರೋಪ್‌ಗಿಂತ ಕಡಿಮೆಯಿರುತ್ತದೆ, ಆದ್ದರಿಂದ ಫೋನ್ ಬಿಡುಗಡೆಯಾದಾಗ ನಾವು ಸ್ವಲ್ಪ ಅಗ್ಗದ ದರಗಳನ್ನು ನಿರೀಕ್ಷಿಸಬಹುದು.


Click it and Unblock the Notifications








