Home
ಮೊಬೈಲ್

ಐಫೋನ್ ಇದ್ದಕ್ಕಿದ್ದಂತೆ ಲಾಕ್ ಆಗುತ್ತಿದೆಯೇ?

ಹಲವು ಐಫೋನ್ ಬಳಕೆದಾರರಿಗೆ ತಮ್ಮ ಐಕ್ಲೌಡ್ ಅಕೌಂಟಿನಿಂದ ಒತ್ತಾಯಪೂರ್ವಕವಾಗಿ ಲಾಗ್ ಔಟ್ ಆಗುವಂತೆ ಆಗುತ್ತಿದೆ. ಈಗಾಗಲೇ ಹಲವು ಮಂದಿ ತಮ್ಮ ಐಫೋನ್ ನಲ್ಲಿ ಈ ಸಮಸ್ಯೆಯನ್ನು ಎದುರಿಸಿದ್ದಾರೆ.ಹಲವರು ತಾವು ಎದುರಿಸಿದ ಈ ಸಮಸ್ಯೆಯ ಬಗ್ಗೆ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಬರೆದಿದ್ದಾರೆ ಮತ್ತು ಇದೀಗ ಆಪಲ್ ಕೂಡ ಈ ಸಮಸ್ಯೆಯನ್ನು ಪರಿಗಣಿಸಿದೆ.

ಆಪಲ್ ನಿಂದ ಪ್ರತಿಕ್ರಿಯೆ:

ಆಪಲ್ ನಿಂದ ಪ್ರತಿಕ್ರಿಯೆ:

ಆಪಲ್ ನ ಸಂಬಂಧ ಪಟ್ಟ ಟೀಮ್ ಈ ಸಮಸ್ಯೆಗೆ ಪ್ರತಿಕ್ರಿಯಿಸಿದ್ದು ನೀವು ಈ ಸಮಸ್ಯೆ ಎದುರಿಸುತ್ತಿದ್ದೀರಾ ಎಂದು ಪ್ರಶ್ನಿಸಿದೆ. ನಿಮ್ಮ ಆಪಲ್ ಐಡಿ ಲಾಕ್ ಆಗುವುದು ಅಥವಾ ಡಿಸೇಬಲ್ ಆಗುವುದು ಆಗುತ್ತಿದೆಯೇ ಎಂದು ಕೇಳಿದೆ?

ಸಮಸ್ಯೆಗೆ ಕಾರಣ ತಿಳಿದಿಲ್ಲ:

ಸಮಸ್ಯೆಗೆ ಕಾರಣ ತಿಳಿದಿಲ್ಲ:

ಆದರೆ ಈ ಸಮಸ್ಯೆಗೆ ಕಾರಣವೇನು ಎಂಬ ಬಗ್ಗೆ ಆಪಲ್ ಇದುವರೆಗೂ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಒತ್ತಾಯಪೂರ್ವಕವಾಗಿ ಪಾಸ್ ವರ್ಡ್ ರೀಸೆಟ್ ಮಾಡುವಂತೆ ಯಾಕೆ ಕೇಳಲಾಗುತ್ತಿದೆ ಎಂಬ ಬಗ್ಗೆ ಆಪಲ್ ಗೂ ಕೂಡ ಇನ್ನೂ ತಿಳಿದುಬಂದಂತಿಲ್ಲ.

ಭದ್ರತಾ ನೆಪ:

ಭದ್ರತಾ ನೆಪ:

ಭದ್ರತಾ ಕಾರಣದಿಂದ ಆಪಲ್ ಐಡಿಯಿಂದ ಲಾಗ್ ಔಟ್ ಮಾಡಲು ಹೇಳಲಾಗುತ್ತದೆ ಎಂಬುದು ಮ್ಯಾಕ್ ರೂಮರ್ಸ್ ವರದಿಯಿಂದ ತಿಳಿದಿದೆ. ಸೆಕ್ಯುರಿಟಿ ಪ್ರಶ್ನೆಗೆ ಉತ್ತರ ನೀಡಿದ ನಂತರ ಆಪಲ್ ಮತ್ತೆ ಆಕ್ಸಿಸ್ ನ್ನು ನೀಡುತ್ತದೆ. ಅಷ್ಟೇ ನಿಗಧಿತ ಫೋನ್ ನಂಬರ್ ನಲ್ಲಿ ವ್ಯಾಲಿಡೇಷನ್ ಕೂಡ ನಡೆಸಲಾಗುತ್ತದೆ.

ಹ್ಯಾಕರ್ ನಿಂದ ರಕ್ಷಿಸಲು ಸುರಕ್ಷಾ ಕ್ರಮ:

ಹ್ಯಾಕರ್ ನಿಂದ ರಕ್ಷಿಸಲು ಸುರಕ್ಷಾ ಕ್ರಮ:

9ಟು5ಮ್ಯಾಕ್ ವರದಿಯು ಹೇಳುವಂತೆ ಆಪಲ್ ಹ್ಯಾಕರ್ ಗಳಿಂದ ಟಾರ್ಗೆಟ್ ಆಗಿರುವ ಕೆಲವು ಆಪಲ್ ಬಳಕೆದಾರರನ್ನು ರಕ್ಷಿಸಲು ಈ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎನ್ನಲಾಗಿದೆ. ಅನಧಿಕೃತವಾಗಿರುವ ಗುಂಪೊಂದು ಆಪಲ್ ಐಡಿಯ ಕಳವಿಗೆ ಪ್ರಯತ್ನ ನಡೆಸುತ್ತಿದೆ ಮತ್ತು ಕೆಲವು ಆನ್ ಲೈನ್ ಸಮಸ್ಯೆಗಳನ್ನು ಸೃಷ್ಟಿಸಲು ಪ್ಲಾನ್ ರೂಪಿಸಿದೆ ಇದನ್ನು ತಡೆದು ಆಪಲ್ ಬಳಕೆದಾರರನ್ನು ಸುರಕ್ಷಿತವಾಗಿಡುವ ನಿಟ್ಟಿನಲ್ಲಿ ಆಗಾಗ ಪಾಸ್ ವರ್ಡ್ ರೀಸೆಟ್ ಮಾಡುವ ಅಗತ್ಯವಿರುವುದರಿಂದ ಹೀಗೆ ಮಾಡಲಾಗುತ್ತಿದೆ ಎಂದು ಕೂಡ ಹೇಳಲಾಗಿದೆ.

ಬಗ್ ನಿಂದ ಆಗುತ್ತಿರುವ ಸಮಸ್ಯೆ:

ಅಷ್ಟೇ ಅಲ್ಲ, ಇನ್ನೊದು ಮೂಲದ ಮಾಹಿತಿಯ ಪ್ರಕಾರ ಇದೊಂದು ಸಿಂಪಲ್ ಆಗಿರುವ ಬಗ್ ನ ಕಾರಣದಿಂದ ಹುಟ್ಟಿಕೊಂಡಿರುವ ಸಮಸ್ಯೆಯೂ ಆಗಿರಬಹುದು ಎನ್ನಲಾಗಿದೆ. ಆದರೆ ಇದಕ್ಕೆ ಅಧಿಕೃತ ಉತ್ತರ ಆಪಲ್ ನಿಂದ ಇದುವರೆಗೂ ಲಭ್ಯವಾಗಿಲ್ಲ.

ಐಫೋನ್ ಎಕ್ಸ್ ನಲ್ಲಿ ಡಿಸ್ಪ್ಲೇ ಸಮಸ್ಯೆ:

ಐಫೋನ್ ಎಕ್ಸ್ ನಲ್ಲಿ ಕೆಲವು ಡಿಸ್ಪ್ಲೇ ಸಮಸ್ಯೆಗಳಿರುವ ಬಗ್ಗೆ ಕೆಲವೇ ವಾರಗಳ ಮುನ್ನ ಆಪಲ್ ಸಂಸ್ಥೆ ಒಪ್ಪಿಕೊಂಡಿತ್ತು. ಸ್ಪೆಷಲ್ ಎಡಿಷನ್ ನ ಐಫೋನ್ ಎಕ್ಸ್ ನಲ್ಲಿ ಕೆಲವು ಟಚ್ ಸಂಬಂಧಿತ ಸಮಸ್ಯೆಗಳಿದ್ದವು.

ಆಪಲ್ ನ ಅಧಿಕೃತ ಪೇಜ್ ನಲ್ಲೂ ಈ ಬಗ್ಗೆ ಬರೆದುಕೊಳ್ಳಲಾಗಿತ್ತು. ಡಿಸ್ಪ್ಲೇ ಮಾಡ್ಯೂಲ್ ನ ಕೆಲವು ಕಾಂಪೋನೆಂಟ್ ಗಳ ಕಾರಣದಿಂದಾಗಿ ಐಫೋನ್ ಎಕ್ಸ್ ನ ಡಿಸ್ಪ್ಲೇಯಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಹೇಳಲಾಗಿತ್ತು.

ಸಮಸ್ಯೆ ತಿಳಿಯಲು ಮಾರ್ಗಗಳು:

ಆಪಲ್ ತಿಳಿಸಿರುವಂತೆ ನಿಮ್ಮ ಐಫೋನ್ ಎಕ್ಸ್ ನ ಡಿಸ್ಪ್ಲೇಯಲ್ಲೂ ಟಚ್ ಸಂಬಂಧಿ ಸಮಸ್ಯೆಗಳಿವೆಯೇ ಎಂದು ತಿಳಿದುಕೊಳ್ಳುವುದಕ್ಕೆ ಎರಡು ಮಾರ್ಗಗಳಿವೆ. ಒಂದು ಡಿಸ್ಪ್ಲೇ ಅಥವಾ ಡಿಸ್ಪ್ಲೇಯಲ್ಲಿನ ಕೆಲವು ಭಾಗದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ಮಾಡಲು ಟಚ್ ನಿಂದ ಸಾಧ್ಯವಾಗದೇ ಇರುವುದು. ಎರಡನೆಯದು ನೀವು ಯಾವುದೇ ಟಚ್ ಮಾಡದೇ ಇದ್ದರೂ ಕೂಡ ಡಿಸ್ಪ್ಲೇಯಲ್ಲಿ ಪ್ರತಿಕ್ರಿಯೆಗಳಾಗುವುದು.

Best Mobiles in India

English summary
Some iPhones are getting abruptly locked, need password reset
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+