ಒನ್‌ಪ್ಲಸ್ 6T ಖರೀದಿಸಿದವರಿಗೆ ಬಿಗ್ ಶಾಕ್!..ಫೋನಿನಲ್ಲಿದೆ ತೊಂದರೆ?!

|

ಭಾರತದಲ್ಲಿ ಅತಿ ಹೆಚ್ಚು ಸೇಲ್ ಆಗುತ್ತಿರುವ ಪ್ರೀಮಿಯಂ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಖರೀದಿಸಿದವರಿಗೆ ಇದು ಶಾಕಿಂಗ್ ನ್ಯೂಸ್. ಏಕೆಂದರೆ, ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಹೆಸರಾಗುತ್ತಿರುವ ಒನ್‌ಪ್ಲಸ್ ಕಂಪೆನಿಯ ಇತ್ತೀಚಿನ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯಲ್ಲಿ ಹಾರ್ಡ್‌ವೇರ್ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಕೆಲ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಈ ರೀತಿಯ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗಿದ್ದು, ದುರದೃಷ್ಟವಶಾತ್ ಮೊಬೈಲ್ ಸ್ಕ್ರೀನ್‌ನಲ್ಲಿ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ. ಒನ್‌ಪ್ಲಸ್ 6T ಫೋನ್ ಮೊಬೈಲ್ ಡಿಸ್‌ಪ್ಲೇಯಲ್ಲಿ ಕೆಲವೊಮ್ಮೆ ನೀಲಿ ಬಣ್ಣದಲ್ಲಿ ವಿಲಕ್ಷಣವಾದ ಫ್ಲಿಕ್ಕರ್ ಕಾಣಿಸಿಕೊಳ್ಳುವ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ಒನ್‌ಪ್ಲಸ್ 6T ಖರೀದಿಸಿದವರಿಗೆ ಬಿಗ್ ಶಾಕ್!..ಫೋನಿನಲ್ಲಿದೆ ತೊಂದರೆ?!

ಒನ್‌ಪ್ಲಸ್ 6T ಫೋನಿನಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿರುವ ಬಗ್ಗೆ ವಿಡಿಯೋ ಕೂಡ ಸಿಕ್ಕಿದೆ. ಆ ವೀಡಿಯೋವನ್ನು ನೀವು ವೀಕ್ಷಿಸಿದರೆ, ವೀಡಿಯೊದ ಅಂತ್ಯದಲ್ಲಿ ಮೊಬೈಲ್ ಡಿಸ್‌ಪ್ಲೇಯಲ್ಲಿ ನೀಲಿ ಬಣ್ಣದ ಗೆರೆಗಳು ಕಾಣಿಸಿಕೊಂಡಿರುವುದನ್ನು ನೋಡಬಹುದಾಗಿದೆ. ಇದರಿಂದ ಸಾವಿರಾರು ತೆತ್ತು ಸ್ಮಾರ್ಟ್‌ಫೋನ್ ಖರೀದಿಸಿದ ಗ್ರಾಹಕರಿಗೆ ಈಗ ಡಿಸ್‌ಪ್ಲೇ ಸಮಸ್ಯೆಯ ಭಯ ಕಾಡುತ್ತಿದೆ.

ಮುಖ ಗುರುತಿಸುವಿಕೆ ವ್ಯವಸ್ಥೆ ಅಥವಾ ಫಿಂಗರ್ಪ್ರಿಂಟ್ ಸಂವೇದಕವನ್ನು ಬಳಸುತ್ತಿದ್ದಾಗ ಸ್ಕ್ರೀನ್‌ನಲ್ಲಿ ವಿಶಿಷ್ಟವಾಗಿ ಕಂಡುಬರುವ ಸಮಸ್ಯೆ ಇದು ಎಂದು ಕೆಲವರು ಹೇಳಿದ್ದಾರೆ. ಆದರೆ, ಫ್ಯಾಕ್ಟರಿ ಮರುಹೊಂದಿಸುವಿಕೆಯು ಸಹ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿರುವುದು, ಇದು ತಂತ್ರಾಂಶದ ಬದಲಿಗೆ ಸಂಭವನೀಯ ಹಾರ್ಡ್‌ವೇರ್ ಸಮಸ್ಯೆಯಂತೆ ಕಾಣುತ್ತದೆ.

ಇನ್ನು ಈ ಬಗ್ಗೆ ಒನ್‌ಪ್ಲಸ್ ಕಂಪೆನಿ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದಾಗ್ಯೂ ಈ ಸಮಸ್ಯೆಯ ವರದಿಗಳು ಒನ್‌ಪ್ಲಸ್ ಕಂಪೆನಿಯನ್ನು ತಲುಪಿರುತ್ತವೆ. ಒನ್‌ಪ್ಲಸ್ ಕಂಪೆನಿ ಈ ಬಗ್ಗೆ ಏನು ಮಾಡಲಿದೆ ಎಂಬುದು ಅಸ್ಪಷ್ಟವಾಗಿದ್ದು, ನೀವು ಕೂಡ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ವಿನಿಮಯಕ್ಕಾಗಿ ಮೊಬೈಲ್ ಅನ್ನು ಹಿಂದಕ್ಕೆ ಪಡೆದುಕೊಳ್ಳಬಹುದು ಎನ್ನಲಾಗಿದೆ.

Best Mobiles in India

English summary
Given how big a role a smartphone’s display plays in our experience, and how reliant we are on it to interact with it, safe to say that getting the display right is vital.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X