ಸ್ಮಾರ್ಟ್‌ಫೋನ್ ಕೈಹಿಡಿದಿಲ್ಲ ಎಂದರೂ ಮುಂದುವರೆದ ಸೋನಿ ಯಶೋಗಾಥೆ..!
ಜಗತ್ತಿನ ಪ್ರಮುಖ ತಂತ್ರಜ್ಞಾನ ಕಂಪನಿಯಾಗಿರುವ ಸೋನಿ ತನ್ನ ಪ್ರಾಪಿಟ್‌ನ್ನು ದಾಖಲೆಯ ಮಟ್ಟದಲ್ಲಿ ಶೇ.30ರಷ್ಟು ಹೆಚ್ಚಿಸಿಕೊಂಡಿದ್ದು, ಪ್ರಮುಖ ಕಂಪನಿಯಾಗಿ ಮುಂದುವರೆಯುತ್ತಿದೆ. ಆದರೆ, ಸ್ಮಾರ್ಟ್‌ಫೋನ್ ಲೋಕದಲ್ಲಿ ಸೋನಿ ಸ್ಮಾರ್ಟ್‌ಫೋನ್‌ಗಳನ್ನು ಕೇಳುವವರು ಇಲ್ಲದಂತಾಗಿದೆ. ಆದರೂ, ಸೋನಿ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯನ್ನು ಮುಂದುವರೆಸಿದ್ದು, ತನ್ನ ಯಶೋಗಾಥೆಯನ್ನು ಮುಂದುವರೆಸಿದೆ.

ಆದರೆ, ಸೋನಿ ಸ್ಮಾರ್ಟ್‌ಫೋನ್‌ಗಳನ್ನು ಜನ ತೆಗೆದುಕೊಂಡಿಲ್ಲ ಎಂದರೂ ಸೋನಿಗೆ ಯಾವುದೇ ರೀತಿಯ ನಷ್ಟವಾಗುತ್ತಿಲ್ಲ. ಬದಲಾಗಿ ಸೋನಿಯು ತನ್ನ ಪ್ರಾಪಿಟ್‌ನ್ನು ಮುಂದುವರೆಸಿದೆ. ಇತ್ತೀಚೆಗೆ ತಾನೇ ಆಪಲ್, ಸ್ಯಾಮ್‌ಸಂಗ್ ಮತ್ತು ಹುವಾವೆ ಫೋನ್‌ಗಳನ್ನು ಸ್ಪರ್ಧೆ ನೀಡಲು ಹೊಸ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ನ್ನು ಕೂಡ ಬಿಡುಗಡೆ ಮಾಡಿತ್ತು. ಅದಲ್ಲದೇ ಮ್ಯೂಸಿಕ್ ಪ್ಲೇಯರ್‌ಗಳನ್ನು ಕೂಡ ಸೋನಿ ಲಾಂಚ್ ಮಾಡುತ್ತಿದೆ. ಆದರೆ, ಇವುಗಳು ಮಾರುಕಟ್ಟೆಯಲ್ಲಿ ಯಾವುದೇ ಸದ್ದನ್ನು ಮಾಡುತ್ತಿಲ್ಲ. ಆದರೂ ಕೂಡ ಸೋನಿಯ ಪ್ರಾಪೀಟ್ ಮಾತ್ರ ಹೆಚ್ಚಾಗುತ್ತಾ ಸಾಗಿದ್ದು, ಯಶಸ್ಸು ಮುಂದುವರೆದಿದೆ.

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರೀ ಹಿನ್ನಡೆ
ಜಗತ್ತಿನ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸೋನಿ ಶೆ.5ಕ್ಕಿಂತಲೂ ಕಡಿಮೆ ಪಾಲುದಾರಿಕೆಯನ್ನು ಹೊಂದಿದೆ. ಅದಲ್ಲದೇ ಸೋನಿ ಸ್ಮಾರ್ಟ್‌ಫೋನ್‌ಗಳು ಜನರ ಮನಸನ್ನು ಆಕರ್ಷಿಸಲು ವಿಫಲವಾಗುತ್ತಿವೆ. ಮತ್ತು ಮ್ಯೂಸಿಕ್ ಪ್ಲೇಯರ್‌ಗಳು ಸಹ ಅತಿ ಹೆಚ್ಚಿನ ಬೆಲೆ ಹೊಂದಿದ್ದು, ಹೈ ರೆಸಲ್ಯೂಷನ್ ಸಂಗೀತ ಕೇಳುವವರಿಗೆ ಇವು ಉಪಯುಕ್ತವಾಗಿದ್ದು, ಸಾಮಾನ್ಯ ಜನರಿಗೆ ಹೆಚ್ಚು ಉಪಯುಕ್ತವಾಗುವುದಿಲ್ಲ ಎಂಬ ಕಾರಣವೂ ಸಹ ಸೋನಿ ಹಿನ್ನಡೆಗೆ ಕಾರಣವಾಗಿದೆ.

ಭಾರೀ ಲಾಭ
ಸೋನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮಕಾಡೆ ಮಲಗಿದರೂ ಬಹಳಷ್ಟು ಲಾಭವನ್ನು ಮಾಡಿಕೊಂಡಿದೆ. ಸೋನಿ ಮಂಗಳವಾರ ಬಿಡುಗಡೆ ಮಾಡಿದ ವರದಿಯಂತೆ ಶೇ.30 ರಷ್ಟು ದಾಖಲೆಯ ಏರಿಕೆಯನ್ನು ಕಂಡಿದೆ. 7.7 ಬಿಲಿಯನ್ ಡಾಲರ್ ವಾರ್ಷಿಕ ಆದಾಯವನ್ನು ನಿರೀಕ್ಷಿಸಿದೆ. ಇದೇ ಆದಾಯವನ್ನು ಗಮನಿಸಿದರೆ, ಕೊನೆಯ ತ್ರೈಮಾಸಿಕದಲ್ಲಿ ಶೇ.17ರಷ್ಟು ಆದಾಯವನ್ನು ಸೋನಿ ಗಳಿಸಲಿದೆ ಎಂಬ ನಿರೀಕ್ಷೆಯಿದೆ.

ಸೋನಿ ಯಶಸ್ಸಿಗೆ ಕಾರಣ ಏನು ಗೊತ್ತಾ..?
ಸೋನಿಯ ಯಶಸ್ಸಿಗೆ ಸ್ಮಾರ್ಟ್‌ಫೋನ್‌ಗಳು ಕಾರಣ ಅಲ್ಲ ಎಂದರೆ ಮತ್ತೇನು ಕಾರಣ ಎಂದರೆ ಪ್ರಮುಖವಾಗಿ ಗೇಮ್‌ಗಳು ಸೋನಿಯ ಯಶಸ್ಸಿಗೆ ಪ್ರಮುಖ ಕಾರಣವಾಗುತ್ತವೆ. ಆದರೆ, ಸೋನಿ ಹೊಸ ಪ್ಲೇ ಸ್ಟೇಷನ್ ಕನ್ಸೋಲ್ ಲಾಂಚ್ ಮಾಡಿ 5 ವರ್ಷಗಳೇ ಕಳೆದಿವೆ. ಆದರೆ, ಸೋನಿ ಬಹಳಷ್ಟು ಗೇಮ್‌ಗಳನ್ನು ಮಾರಾಟ ಮಾಡುತ್ತಿದ್ದು, ಅವುಗಳ ಚಂದಾದಾರಿಕೆಯಿಂದ ಬಹಳ ದೊಡ್ಡ ಆದಾಯವನ್ನು ಸೋನಿ ಪಡೆಯುತ್ತಿದೆ.

ಗೇಮ್ ಸೋನಿ ಆದಾಯದ ಮೂಲ
ಸೋನಿಗೆ ಗೇಮಿಂಗ್ ವ್ಯವಹಾರವೇ ಪ್ರಮುಖ ಆದಾಯದ ಮೂಲವಾಗಿದೆ. ಒಟ್ಟು ಆದಾಯದಲ್ಲಿ ಶೆ.65ರಷ್ಟು ಆದಾಯ ಈ ಗೇಮಿಂಗ್ ವ್ಯವಹಾರದಿಂದಲೇ ಬರುತ್ತಿದೆ. ರೆಗ್ಯುಲರ್ ಗೇಮರ್‌ಗಳು ಸೋನಿಗೆ ಭರಪೂರ ಆದಾಯವನ್ನೇ ತಂದು ಕೊಡುತ್ತಿದ್ದಾರೆ.

ಕ್ಯಾಮೆರಾನೂ ಪ್ರಮುಖ
ಸೋನಿ ಕ್ಯಾಮೆರಾಗಳನ್ನೂ ಸಹ ಉತ್ಪಾದನೆಯನ್ನು ಮಾಡುತ್ತಿದೆ. ಭಾರೀ ಬೆಲೆಯ ಮಿರರ್‌ಲೆಸ್ ಕ್ಯಾಮೆರಾಗಳು ಸಹ ಇದರಲ್ಲಿ ಸೇರಿವೆ. ಆದರೆ, ಸೋನಿಯ ನೈಜ ಆದಾಯದ ಮೂಲವೆಂದರೆ ನಿಮ್ಮ ಫೋನ್‌ಗಳೆ ಎಂಬುದನ್ನು ಮರೆಯದಿರಿ. ಅದೆಂಗೆ, ಎಂದರೆ ಮುಂದೆ ನೋಡಿ.

ಇಮೇಜ್ ಸೆನ್ಸಾರ್
ಸೋನಿಯೇತರ ಮೊಬೈಲ್‌ನ್ನು ನೀವು ಬಳಸುತ್ತಿದ್ದರೆ, ನೀವು ಸೋನಿಗೆ ಲಾಭ ಮಾಡಿಕೊಡುತ್ತಿರುತ್ತೀರಿ. ಅದು ಹೇಗ ಎಂದರೆ, ಭಾಗಶಃ ಎಲ್ಲಾ ಮೊಬೈಲ್ ಉತ್ಪಾದಕರು ಸೋನಿ ಇಮೇಜ್ ಸೆನ್ಸಾರ್‌ಗಳನ್ನು ಬಳಸುತ್ತಿದ್ದು, ಸುಂದರವಾದ ಮತ್ತು ನೈಜ ಫೋಟೋಗಳನ್ನು ಸೆರೆಹಿಡಿಯಲು ಇವು ಅವಶ್ಯಕವಾಗಿವೆ. ಇದರ ಜತೆ ಸೋನಿಯ ಸೆಮಿ ಕಂಡಕ್ಟರ್ ವ್ಯಾಪಾರವೂ ಕೂಡ ಸೋನಿ ಆದಾಯವನ್ನೂ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.


Click it and Unblock the Notifications








