ಸುದ್ದಿಯಾಗಿದೆ ಎಕ್ಸ್ ಪಿರಿಯಾ X7 ಮೊಬೈಲ್

Posted By: Staff
ಸುದ್ದಿಯಾಗಿದೆ ಎಕ್ಸ್ ಪಿರಿಯಾ X7 ಮೊಬೈಲ್

ಸೋನಿ ಎಕ್ಸ್ ಪಿರಿಯಾ X7 ಸ್ಮಾರ್ಟ್ ಫೋನ್ ಇನ್ನೂ ಬಿಡುಗಡೆಯಾಗಬೇಕಿದೆ. ಆದರೆ ಈಗಾಗಲೇ ಈ ಬಹುನಿರೀಕ್ಷಿತ ಮೊಬೈಲ್ ಬಗ್ಗೆ ಜನರಲ್ಲಿ ಕೌತುಕ ಹೆಚ್ಚಿದೆ. ಅದಕ್ಕೆಂದೇ ಕಂಪನಿ ಈ ಎಕ್ಸ್ ಪಿರಿಯಾ X7 ಮೊಬೈಲಿನ ವಿಶೇಷತೆ ಬಗ್ಗೆ ಅಧೀಕೃತವಾಗಿ ಘೋಷಿಸಿದೆ.

ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ಈ ಮೊಬೈಲ್ ಹೊತ್ತು ತರುತ್ತಿರುವುದಾಗಿ ತಿಳಿದುಬಂದಿದೆ. ಬಾರ್ ಫೋನ್ ವಿನ್ಯಾಸದಲ್ಲಿರುವ ಈ ಮೊಬೈಲ್ ವಿಂಡೋಸ್ ಫೋನ್ 7 ಆಪರೇಟಿಂಗ್ ಸಿಸ್ಟಮ್ ನಿಂದ ಕಾರ್ಯ ನಿರ್ವಹಿಸಲಿದ್ದು, 1.2GHz ಸ್ನ್ಯಾಪ್ ಡ್ರಾಗನ್ MSM8260 ಸಿಪಿಯು ಹೊಂದಿದೆ. ಮೊಬೈಲ್ 3ಜಿ ಸಂಪರ್ಕವನ್ನೂ ಬೆಂಬಲಿಸುತ್ತದೆ. ಈ ಎಕ್ಸ್ ಪಿರಿಯಾ ಮೊಬೈಲಿನ ಗುಣಲಕ್ಷಣಗಳನ್ನು ಮುಂದೆ ತಿಳಿಯಿರಿ.

ಸೋನಿ ಎರಿಕ್ಸನ್ ಎಕ್ಸ್ ಪಿರಿಯಾ X7 ವಿಶೇಷತೆ:

* 4.3 ಇಂಚಿನ WVGA ಟಚ್ ಸ್ಕ್ರೀನ್

* 8 ಮೆಗಾ ಪಿಕ್ಸಲ್ ಕ್ಯಾಮೆರಾ

* GPRS/GSM/WAP/EDGE ಕ್ವಾಡ್ ಬ್ಯಾಂಡ್

* 3ಜಿ/HSDPA/HSPA

* ಬ್ಲೂಟೂಥ್, USB, 802.11n ವೈ-ಫೈ, ಮೈಕ್ರೊ SD ಕಾರ್ಡ್ ಸ್ಲಾಟ್

* 3.5 ಎಂಎಂ ಆಡಿಯೋ ಜ್ಯಾಕ್

* 512 ಎಂಬಿ RAM ಮತ್ತು ಆಂತರಿಕ ಮೆಮೊರಿ ಸಾಮರ್ಥ್ಯ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

ಮೊಬೈಲ್ ನಲ್ಲಿ ಮೀಡಿಯಾ ಪ್ಲೇಯರ್ ಇದ್ದು, ಮಲ್ಟಿಪಲ್ ಕೋ ಡೆಕ್ ಮತ್ತು RDS-ಹೊಂದಿರುವ ಎಫ್ ಎಂ ರೇಡಿಯೋ ಪಡೆದುಕೊಂಡಿದೆ. ಬಳಕೆದಾರರ ಅನುಕೂಲಕ್ಕೆಂದು ಸಾಮಾಜಿಕ ತಾಣಗಳ ಆಯ್ಕೆಯೂ ಇದೆ. ಸ್ಟಿರಿಯೋ ಬ್ಲೂಟೂಥ್ v2.1 ಸಂಪರ್ಕದೊಂದಿಗೆ ಉತ್ತಮ ಸಂಗೀತಕ್ಕೆಂದು ಡಾಬ್ಲಿ ಡಿಜಿಟಲ್ ಪ್ಲಸ್ ಒದಗಿಸಲಾಗಿದೆ. ನೇವಿಗೇಶನ್ ಗೆಂದು ಮ್ಯಾಪ್ ಮತ್ತು A-GPS ಮತ್ತು ಅತ್ಯುತ್ತಮ ಬ್ರೌಸಿಂಗ್ ಸಾಧ್ಯವಾಗಲಿದೆ.

Li-Ion ಬ್ಯಾಟರಿ ಹೊಂದಿರುವ ಸೋನಿ ಎರಿಕ್ಸನ್ ಎಕ್ಸ್ ಪಿರಿಯಾ X7 ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಘೋಷಿಸಿಲ್ಲ.

Please Wait while comments are loading...
Opinion Poll

Social Counting