Home
ಮೊಬೈಲ್

ದೇಶದಲ್ಲಿಯೇ ತಯಾರಾದ 'ಸೋನಿ ಎಕ್ಸ್‌ಪೀರಿಯಾ R1' ಫೋನ್‌ ಭರ್ಜರಿ ಬಿಡುಗಡೆ!!

ದೈತ್ಯ ಎಲೆಕ್ಟ್ರಾನಿಕ್ಸ್ ಸಂಸ್ಥೆ ಸೋನಿ ಮತ್ತೆ ಎರಡು ಹೊಸ ಮಾದರಿಯ ಎಕ್ಸ್‌ಪೀರಿಯಾ ಸ್ಮಾರ್ಟ್‌ಫೋನ್‌ಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದೆ.!!

By Bhaskar N J

ಚೀನಾ ಮೊಬೈಲ್ ಕಂಪೆನಿಗಳು ಭಾರತದಲ್ಲಿ ಹೆಸರಾಗುವ ಮೊದಲು ಭಾರತೀಯರನ್ನು ಹೆಚ್ಚು ಕಾಡಿದ್ದ ಫೋನ್‌ಗಳು ಎಂದರೆ ಸೋನಿ ಕಂಪೆನಿಯ ಎಕ್ಸ್‌ಪೀರಿಯಾ ಸ್ಮಾರ್ಟ್‌ಫೋನ್‌ಗಳು ಎನ್ನಬಹುದು.! ಸ್ಟೈಲಿಶ್ ಲುಕ್, ಫೀಚರ್ಸ್ ಎಲ್ಲವನ್ನು ಹೊತ್ತು ಬರುತ್ತಿದ್ದ ಈ ಫೊನ್‌ಗಳಿಗೆ ಎಲ್ಲರೂ ಮನಸೋತಿದ್ದರು. ಆದರೆ, ಅವುಗಳ ಬೆಲೆ ಹೆಚ್ಚಾಗಿದ್ದರಿಂದ ಖರೀದಿಸುವವರ ಸಂಖ್ಯೆ ಕಡಿಮೆ ಇತ್ತು.!!

ಆದರೆ, ಹೊಸ ವಿಷಯ ಏನೆಂದರೆ, ದೈತ್ಯ ಎಲೆಕ್ಟ್ರಾನಿಕ್ಸ್ ಸಂಸ್ಥೆ ಸೋನಿ ಮತ್ತೆ ಎರಡು ಹೊಸ ಮಾದರಿಯ ಎಕ್ಸ್‌ಪೀರಿಯಾ ಸ್ಮಾರ್ಟ್‌ಫೋನ್‌ಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದೆ.! ಭಾರತದಲ್ಲೇ ನಿರ್ಮಾಣವಾಗಿರುವ ನೂತನ ಎಕ್ಸ್‌ಪೀರಿಯಾ ಫೋನ್‌ಗಳು ಬಜೆಟ್‌ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಎಲ್ಲರ ಕಣ್ಣುಕುಕ್ಕುತ್ತಿವೆ.! ಹಾಗಾದರೆ, ನೂತನ ಎಕ್ಸ್‌ಪೀರಿಯಾ ಸ್ಮಾರ್ಟ್‌ಫೋನ್‌ಗಳು ಹೇಗಿವೆ? ಅವುಗಳ ಬೆಲೆ ಎಷ್ಟು? ಫೀಚರ್ಸ್ ಏನು ಎಂಬುದನ್ನು ಮುಂದೆ ತಿಳಿಯಿರಿ.!!

ಎಕ್ಸ್‌ಪೀರಿಯಾ ಆರ್1 ಮತ್ತು ಆರ್1 ಪ್ಲಸ್!!

ಎಕ್ಸ್‌ಪೀರಿಯಾ ಆರ್1 ಮತ್ತು ಆರ್1 ಪ್ಲಸ್!!

ಸೋನಿ ಸಂಸ್ಥೆ ಎಕ್ಸ್‌ಪೀರಿಯಾ ಆರ್1 ಮತ್ತು ಎಕ್ಸ್‌ಪೀರಿಯಾ ಆರ್1 ಪ್ಲಸ್ ಎಂಬ ಎರಡು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.! ಗೂಗಲ್‌ನ ನೂತನ ಆಂಡ್ರಾಯ್ಡ್ ಓರಿಯೋಗೆ ಅಪ್‌ಗ್ರೇಡ್ ಆಗಬಹುದಾದ ಫೋನ್‌ಗಳು ಇವು ಎಂದು ಸೋನಿ ಕಂಪೆನಿನಿ ತಿಳಿಸಿದೆ.!!

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಡಿಸ್‌ಪ್ಲೇ ಮತ್ತು ಪ್ರೊಸೆಸರ್!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್!!

ಎಕ್ಸ್‌ಪೀರಿಯಾ ಆರ್1 ಮತ್ತು ಆರ್1 ಪ್ಲಸ್ ಎರಡೂ ಸ್ಮಾರ್ಟ್‌ಫೊನ್‌ಗಳು 5.2 ಇಂಚ್ , 720x1280p ರೆಸೊಲ್ಯೂಷನ್ ಹೆಚ್‌ಡಿ 2.5D ಕರ್ವಡ್ ಗ್ಲಾಸ್ ಡಿಸ್‌ಪ್ಲೇ ಹೊಂದಿವೆ. ಇನ್ನು ಕ್ವಾಲ್ಕಮ್ ಕಂಪೆನಿಯ ಆಕ್ಟಕೋರ್ ಸ್ನ್ಯಾಪ್‌ಡ್ರಾಗನ್ 430 ಪ್ರೊಸೆಸರ್ ಫೋನ್‌ಗಳಲ್ಲಿ ಲಭ್ಯವಿದ್ದು, ಫೋನ್‌ನಲ್ಲಿ ಪ್ರೊಸೆಸರ್ ಆಯ್ಕೆಯಲ್ಲಿ ಸ್ವಲ್ಪ ಹಿಂದುಳಿದಿದೆ ಎನ್ನಬಹುದು.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಎಕ್ಸ್‌ಪೀರಿಯಾ ಆರ್1 2GB RAM ಮತ್ತು 16GB ಇಂಟರ್ನಲ್ ಸ್ಟೋರೆಜ್ ಹೊತ್ತು ಹೊರಬಂದಿದ್ದರೆ, ಎಕ್ಸ್‌ಪೀರಿಯಾ ಆರ್1 ಪ್ಲಸ್ ಮಾತ್ರ 3GB RAM 32GB ಇಂಟರ್ನಲ್ ಸ್ಟೋರೆಜ್ ಹೊಂದಿದೆ.! ಎರಡೂ ಸ್ಮಾರ್ಟ್‌ಪೋನ್‌ಗಳ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಮೂಕ ಹೆಚ್ಚಿಸಿಕೊಳ್ಳಬಹುದಾಗಿದೆ.!!

ಎಕ್ಸ್‌ಪೀರಿಯಾ ಆರ್1 ಕ್ಯಾಮೆರಾ?

ಎಕ್ಸ್‌ಪೀರಿಯಾ ಆರ್1 ಕ್ಯಾಮೆರಾ?

ಡಿಸ್‌ಪ್ಲೇ ಮತ್ತು ಪ್ರೊಸೆಸರ್‌ನಂತೆ ಆರ್1 ಮತ್ತು ಆರ್1 ಪ್ಲಸ್ ಎರಡೂ ಸ್ಮಾರ್ಟ್‌ಫೊನ್‌ಗಳು 13 MP ಆಟೋ ಫೋಕಸ್ ಹೊಂದಿರುವ ರಿಯರ್ ಕ್ಯಾಮೆರಾ ಹಾಗೂ 8MP ಫ್ರಂಟ್ ಫೇಸಿಂಗ್ ಶೂಟರ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿದೆ.!! ನಾವು ನೀಡುವ ಹಣಕ್ಕೆ ಅತ್ಯುತ್ತಮ ಫೀಚರ್ ಈ ಫೋನ್‌ನಲ್ಲಿದೆ.!!

ಇತರ ಫೀಚರ್ಸ್ ಮತ್ತು ಬೆಲೆ?

ಇತರ ಫೀಚರ್ಸ್ ಮತ್ತು ಬೆಲೆ?

154g ತೂಕ, ಡ್ಯುಯಲ್ ಸಿಮ್, 2620mAh ಬ್ಯಾಟರಿ, Wi-Fi, USB Type-C ಯಂತಹ ಎಲ್ಲಾ ಫೀಚರ್ಸ್ ಸ್ಮಾರ್ಟ್‌ಫೋನ್‌ನಲ್ಲಿದ್ದರೂ ಸಹ ಫಿಂಗರ್‌ಪ್ರಿಂಟ್ ಫೀಚರ್ ಮಾತ್ರ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಲಾಗಿಲ್ಲ.!! ಆದರೂ, ಸೋನಿ ಎಕ್ಸ್‌ಪೀರಿಯಾ ಆರ್1: 12,990 ರೂ. ಸೋನಿ ಎಕ್ಸ್‌ಪೀರಿಯಾ ಆರ್1 ಪ್ಲಸ್: 14,990 ರೂ. ಬೆಲೆಗಳನ್ನು ಹೊಂದಿವೆ.!!

Best Mobiles in India

English summary
Sony launches mid-range Xperia R1 and R1 Plus for Rs 12990 and Rs 14990 respectively.to know more visit to kannada,gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+