ಸೋನಿ ಮಿಕ್ಸ್ ವಾಕ್ ಮ್ಯಾನ್ ಫೋನ್ ಬಿಡುಗಡೆ

Posted By: Varun
ಸೋನಿ ಮಿಕ್ಸ್ ವಾಕ್ ಮ್ಯಾನ್ ಫೋನ್ ಬಿಡುಗಡೆ

ಸೋನಿ ಕಂಪನಿಯ ಉತ್ಪನ್ನಗಳು 24 ಕ್ಯಾರಟ್ ಚಿನ್ನವಿದ್ದ ಹಾಗೆ.ಅದರ ಬಗ್ಗೆ ಚಕಾರ ಎತ್ತುವ ಹಾಗಿಲ್ಲ. ಹಾಗಾಗಿಯೇ ಗ್ರಾಹಕರು ಸೋನಿ ಟಿವಿ ಇರಲಿ,ಮೊಬೈಲ್ ಇರಲಿ ಇಲ್ಲವೆ ಮ್ಯೂಸಿಕ್ ಪ್ಲೇಯರ್ ಗಳು ಇರಲಿ, ಮುಗಿಬಿದ್ದು ಖರೀದಿಸುತ್ತಾರೆ.

ಎರಿಕ್ಸನ್ ನ ಸಂಬಂಧ ಕಡಿದುಕೊಂಡ ನಂತರ ವಿವಿಧ ರೇಂಜ್ ನ ಫೋನ್ ಹಾಗು ವಾಕ್ ಮ್ಯಾನ್ ಗಳನ್ನು ಬಿಡುಗಡೆ ಮಾಡುತ್ತಿರುವ ಸೋನಿ, ಈಗ್ಗ ಸೋನಿ ಮಿಕ್ಸ್ ಹೆಸರಿನ ವಾಕ್ ಮ್ಯಾನ್ ಫೋನ್ ಒಂದನ್ನು ಬಿಡುಗಡೆ ಮಾಡಿದೆ.

ಈ ಸುಂದರ ಸೋನಿ ಮಿಕ್ಸ್ ವಾಕ್ ಮ್ಯಾನ್ ಫೋನಿನ ಸ್ಪೆಸಿಫಿಕೆಶನ್ ಗಳು ಈ ರೀತಿ ಇವೆ:

  • 7.6cm TFT WVGA ಟಚ್ ಸ್ಕ್ರೀನ್, 400X240 ಪಿಕ್ಸೆಲ್ ರೆಸಲ್ಯೂಶನ್

  • 3.2 ಮೆಗಾಪಿಕ್ಸೆಲ್ ಕ್ಯಾಮೆರಾ

  • ಬ್ಲೂಟೂತ್, USB, ವೈ-ಫೈ,ಮೈಕ್ರೋ USB

  • ಆಂತರಿಕ MP3 ಪ್ಲೇಯರ್ ಮತ್ತು ಮೀಡಿಯಾ ಪ್ಲೇಯರ್, ಮೈಕ್ರೋ ಫೋನ್

  • 9 ಗಂಟೆ ಟಾಕ್ ಟೈಮ್ ಇರುವ ಬ್ಯಾಟರಿ

  • GSM, GPRS ಮತ್ತು EDGE

  • 256 MB ರಾಮ್, 32 GB ವರೆಗೆ ವಿಸ್ತರಿಸಬಹುದಾದ ಮೆಮೊರಿ

  • ಸಾಮಾಜಿಕ ಜಾಲ ತಾಣಗಳ ಆಪ್ಸ್
 

ಈ ಸೋನಿ ಫೋನಿನ ಬೆಲೆ 6,999 ರೂಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot