ಎಕ್ಸ್‌ಪೀರಿಯಾ ಟಿ2 ಆಲ್ಟ್ರಾಗೂ ಕಿಟ್‌ಕ್ಯಾಟ್ ನವೀಕರಣ

Written By:

ಈ ವರ್ಷದಲ್ಲಿ ಲಾಂಚ್ ಆಗಿರುವ ಸೋನಿಯ ಸ್ಮಾರ್ಟ್‌ಫೋನ್, ತನ್ನ ಮಧ್ಯಮ ಶ್ರೇಣಿಯ ಫೋನ್‌ ಆದ ಎಕ್ಸ್‌ಪೀರಿಯಾ ಟಿ2 ಅಲ್ಟ್ರಾಗೂ ಕಿಟ್‌ಕ್ಯಾಟ್ ಸುಗಂಧವನ್ನು ಹೊಮ್ಮಿಸುವಂತೆ ಮಾಡಿದೆ. ಇದನ್ನು ಮೂಲತಃ ಆಂಡ್ರಾಯ್ಡ್ ಜೆಲ್ಲಿಬೀನ್ 4.3 ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಇದು ಕೂಡಲೇ ಕಿಟ್‌ಕ್ಯಾಟ್ ಆವೃತ್ತಿಯನ್ನು ಪಡೆದುಕೊಳ್ಳಲಿದೆ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಅಧಿಕೃತವಾಗಿ ಘೋಷಿಸಿದೆ.

ಸೋನಿ ಎಕ್ಸ್‌ಪೀರಿಯಾ ಟಿ2 ಅಲ್ಟ್ರಾ ಮತ್ತು ಇದರ ಡ್ಯುಯೆಲ್ ಸಿಮ್ ಆವೃತ್ತಿಯು ಈ ನವೀಕರಣವನ್ನು ಆದಷ್ಟು ಬೇಗನೇ ಪಡೆದುಕೊಳ್ಳಲಿದ್ದು ಇದರೊಂದಿಗೆ ಕೆಲವೊಂದು ಸಾಫ್ಟ್‌ವೇರ್ ಉತ್ಪನ್ನಗಳನ್ನೂ ತನ್ನೊಳಗೆ ಸೇರಿಸಿಕೊಳ್ಳಲಿದೆ. ಜಪಾನ್ ಕಂಪೆನಿಯು ಕಿಟ್‌ಕ್ಯಾಟ್ ಆವೃತ್ತಿಯು ಫೋನ್‌ನಲ್ಲಿ ತರಲಿರುವ ಮಾರ್ಪಾಡುಗಳನ್ನು ಕೂಡ ನಮೂದಿಸಿದೆ.

ಸೋನಿಯಿಂದ ಎಕ್ಸ್‌ಪೀರಿಯಾ ಟಿ2 ಗೂ ಕಿಟ್‌ಕ್ಯಾಟ್

ಕಂಪೆನಿಯ ಪ್ರಕಾರ, ಕೆಲವೊಂದು ಕಾರ್ಯಾಚರಣೆ ಸುಧಾರಣೆಗಳು ಮತ್ತು ಬಳಕೆದಾರ ಇಂಟರ್ಫೇಸ್ ಒಪ್ಟಿಮೈಸೇಶನ್ ಅನ್ನು ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ತರಲಿದ್ದು ಸೋನಿಯಿಂದ ವಿತರಣೆಯಾಗಲಿರುವ ಸುಧಾರಣೆಗಳ ಶ್ರೇಣಿಗಳೊಂದಿಗೆ ಇದು ಬರಲಿದೆ.

ಹೆಚ್ಚಾಗಿ ಈ ನವೀಕರಣವನ್ನು ತಮ್ಮ ಫೋನ್‌ಗೆ ಅಳವಡಿಸಿಕೊಂಡ ನಂತರ, ಬಳಕೆದಾರರು ಸ್ಟೇಟಸ್ ಬಾರ್ ಮತ್ತು ತ್ವರಿತ ಸೆಟ್ಟಿಂಗ್‌ಗಳನ್ನು ಫೋನ್‌ನಲ್ಲಿ ಕಾಣಬಹುದಾಗಿದ್ದು, ಇದು ಉತ್ತಮ ಅನುಭವವನ್ನು ಗ್ರಾಹಕರಿಗೆ ನೀಡಲಿದೆ. ಬಳಕೆದಾರರು ಬಯಸಿದಾಗ ಮಾತ್ರವೇ ಅಧಿಸೂಚನೆಗಳನ್ನು ಪಡೆಯಬಹುದಾದ ಆಯ್ಕೆಯನ್ನು ಕೂಡ ಫೋನ್ ಹೊಂದಿದೆ.

ಎಕ್ಸ್‌ಪೀರಿಯಾ ಟಿ2 ಅಲ್ಟ್ರಾ ಕಸ್ಟಮ್ ಇಂಟರ್ಫೇಸ್ ಅನುಭವವಾದ "ಎಕ್ಸ್‌ಪೀರಿಯಾ ಥೀಮ್ಸ್‌ನೊಂದಿಗೆ" ಬಂದಿದ್ದು ಇದರಲ್ಲಿ ಅನಿಮೇಶನ್ ಮತ್ತು ಲೈವ್ ವಾಲ್‌ಪೇಪರ್ ಅನ್ನು ಫೋನ್ ಲಾಂಚ್ ಮಾಡಲಿದೆ. ಇದರೊಂದಿಗೆ ತನ್ನ ಸಂಪೂರ್ಣ ಸ್ಥಳೀಯ ಅಪ್ಲಿಕೇಶನ್ ಪೋರ್ಟ್‌ಫೋಲಿಯೋವನ್ನು ಅತ್ಯಾಧುನಿಕ ಆವೃತ್ತಿಗಳಿಗೆ ಕಂಪೆನಿಯು ಅಪ್‌ಗ್ರೇಡ್ ಮಾಡಲಿದ್ದು ಇದು ಟಿ2 ಅಲ್ಟ್ರಾಗೆ ಹೊಸ ವೈಶಿಷ್ಟ್ಯವನ್ನು ನೀಡಲಿದೆ.

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್ ಅಪ್‌ಗ್ರೇಡ್ ಅನ್ನು ಸೋನಿ ತನ್ನ ಎಕ್ಸ್‌ಪೀರಿಯಾ E1 ಮತ್ತು ಎಕ್ಸ್‌ಪೀರಿಯಾ M2 ಗೆ ಕೂಡ ಬಿಡುಗಡೆ ಮಾಡಲಿದ್ದು ಎಕ್ಸ್‌ಪೀರಿಯಾ ಬಳಕೆದಾರರಿಗೆ ಇದು ಹರ್ಷದ ಸುದ್ದಿಯಾಗಿದೆ.

English summary
This article tells about that Sony releases kitkat update for Xperia T2 ultra.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot