ಬರಲಿದೆ ಬ್ಲ್ಯಾಕ್ ಫಿನಿಶಿಂಗ್ ಸೋನಿ ಮೊಬೈಲ್

Posted By:
ಬರಲಿದೆ ಬ್ಲ್ಯಾಕ್ ಫಿನಿಶಿಂಗ್ ಸೋನಿ ಮೊಬೈಲ್

ಗ್ರಾಹಕರಿಗೆ ಅತ್ಯುನ್ನತ ಗುಣಮಟ್ಟದ ಎಲೆಕ್ಟ್ರಾನಿಕ್ ಸಾಧನಗಳನ್ನು ನೀಡುತ್ತಾ ಬಂದಿರುವ ಸೋನಿ ಕಂಪನಿ ಅಂತರರಾಷ್ಟ್ರೀಯ ಮೊಬೈಲ್ ಮಾರುಕಟ್ಟೆಗೆ ಸೋನಿ ವಾಕ್ ಮನ್ NW Z1060 ಮೊಬೈಲನ್ನು ಬಿಡುಗಡೆಗೊಳಿಸಲು ತಯಾರಾಗಿದೆ.

ಸೋನಿ ಮೊಬೈಲ್ ವಿನ್ಯಾಸ ಬ್ಲಾಕ್ ಫಿನಿಶಿಂಗ್ ನೊಂದಿಗೆ ಅತಿ ಆಕರ್ಷಕವಾಗಿದ್ದು, ನೋಡಿದ ತಕ್ಷಣವೇ ಕೊಂಡುಕೊಳ್ಳುವ ಮನಸ್ಸಾಗುತ್ತೆ.

ಸೋನಿ ವಾಕ್ ಮನ್ NW Z1060 ಮೊಬೈಲ್ ವಿಶೇಷತೆ:

* 70.9 x 134.4 x11.1 ಎಂಎಂ ಸುತ್ತಳತೆ

* 156 ಗ್ರಾಂ ತೂಕ, ಟಚ್ ಸ್ಕ್ರೀನ್

* 4.3 ಇಂಚಿನ ಸ್ಕ್ರೀನ್ ಡಿಸ್ಪ್ಲೇ, 480 x 800 ರೆಸೊಲ್ಯೂಷನ್

* ಆಂಡ್ರಾಯ್ಡ್ 2.3 ಆಪರೇಟಿಂಗ್ ಸಿಸ್ಟಮ್

* 1000 MHz ವೇಗದ NVIDIA Tegra 2.250 AP20H ಚಿಪ್ ಸೆಟ್ ಮೈಕ್ರೊ ಪ್ರೊಸೆಸರ್

* 720p ಹೈ ಡೆಫನಿಶನ್ ವಿಡಿಯೋ ರೆಕಾರ್ಡಿಂಗ್

* 512 ಎಂಬಿ RAM

* 3.5 ಎಂಎಂ ಆಡಿಯೋ ಜ್ಯಾಕ್

* USB 2.0 ಪೋರ್ಟ್, ಬ್ಲೂಟೂಥ್, 802.11 b/ g/ n ವೈ-ಫೈ ಸಂಪರ್ಕ

* 32 ಜಿಬಿವರೆಗೂ ಮೆಮೊರಿ ಸಾಮರ್ಥ್ಯ

* ನಾಯ್ಡ್ ಕ್ಯಾನ್ಸಲೇಶನ್ ತಂತ್ರಜ್ಞಾನ

ಮನರಂಜನೆಗೆಂದು RDS ಜೊತೆ ಎಫ್ ಎಂ ರೇಡಿಯೋ ಇದ್ದು, GPS ನೇವಿಗೇಶನ್ ಕೂಡ ಲಭ್ಯವಿದೆ. ವಿಶೇಷವಾಗಿರುವ ಮಿನಿ HDMI ಔಟ್ ಪುಟ್ ಅತ್ಯುತ್ತಮ ವಿಡಿಯೋ ನೀಡಲಿದೆ. ಗ್ರಾಹಕರಿಗೆ ಅನೇಕ ಅಪ್ಲಿಕೇಶನ್ ಹೊಂದಲು ಆಂಡ್ರಾಯ್ಡ್ ಮಾರ್ಕೆಟ್ ಸೌಲಭ್ಯ ನೀಡಲಾಗಿದೆ.

ಇದರಲ್ಲಿರುವ ಲೀಥಿಯಂ ಐಯಾನ್ ಬ್ಯಾಟರಿ 8 ಗಂಟೆ ಟಾಕ್ ಟೈಂ ನೀಡುತ್ತೆ. ಈ ಸೋನಿ ವಾಕ್ ಮನ್ NW Z1060 ಮೊಬೈಲ್ ಬೆಲೆಯನ್ನೂ ಕೆಲವೇ ದಿನಗಳಲ್ಲಿ ಕಂಪನಿ ತಿಳಿಸಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot