Subscribe to Gizbot

ಗುಣಮಟ್ಟದ ಸೆಲ್ಫೀಯೊಂದಿಗೆ ಸೋನಿ ಎಕ್ಸ್‌ಪೀರಿಯಾ C3

Written By:

ಸೋನಿ ತಯಾರಿಕಾ ಕ್ಯಾಮೆರಾ ಸೆನ್ಸಾರ್‌ನೊಂದಿಗೆ ಪ್ರೀತಿಯನ್ನು ಬೆಳೆಸಿಕೊಂಡಿರುವ ಸೆಲ್ಫೀ ಫೋನ್ ಪ್ರಿಯರಿಗೊಂದು ಸಂತಸಕರವಾದ ಸುದ್ದಿಯೊಂದನ್ನು ನಾವಿಲ್ಲಿ ನೀಡುತ್ತಿದ್ದೇವೆ. ವರದಿಗಳ ಪ್ರಕಾರ, ಜಪಾನೀ ಸ್ಮಾರ್ಟ್‌ಫೋನ್ ದಿಗ್ಗಜ ಸೋನಿ ಮೊಬೈಲ್ ಅಧಿಕೃತವಾಗಿ ಎಕ್ಸ್‌ಪೀರಿಯಾ C3 ಸ್ಮಾರ್ಟ್‌ಫೋನ್ ಅನ್ನು ಪ್ರಸ್ತುತಪಡಿಸುತ್ತಿದ್ದು, ಇದೊಂದು ಉತ್ತಮ ಸೆಲ್ಫೀ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.

ಇದು ಮುಂಭಾಗದಲ್ಲೇ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ನೀಡುತ್ತಿದ್ದು ಸ್ಮಾರ್ಟ್‌ಫೋನ್‌ನ ವಿಶೇಷತೆಯನ್ನು ಹೆಚ್ಚಿಸಲು ಇದೂ ಒಂದು ಕಾರಣವಾಗಿದೆ. ಸೆಲ್ಫೀ ಪ್ರಿಯರಿಗೆ ಅತ್ಯುತ್ತಮ ಗುಣಮಟ್ಟದ ಫ್ರಂಟ್ ಕ್ಯಾಮೆರಾವನ್ನು ಒದಗಿಸಿರುವ ಕಂಪೆನಿ ಬಳಕೆದಾರರು ಪ್ರತೀ ಬಾರಿ ಸೆಲ್ಫೀ ಫೋಟೋವನ್ನು ತೆಗೆಯುವಾಗ ಅದ್ಭುತ ಅನುಭವವನ್ನು ಪಡೆದುಕೊಳ್ಳಲಿದ್ದಾರೆ.

ಎಕ್ಸ್‌ಪೀರಿಯಾ ಇನ್ನು 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾದಲ್ಲಿ

ಇಷ್ಟಲ್ಲದೆ, ಮುಂಭಾಗಕ್ಕೆ ಮೃದುವಾದ ಅನನ್ಯ ಫ್ಲ್ಯಾಶ್ ಅನ್ನು ಒದಗಿಸುವ ನಿಟ್ಟಿನಲ್ಲಿ ಕೂಡ ಕಂಪೆನಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಬಳಕೆದಾರರು ರಾತ್ರಿಯಲ್ಲಿ ಕೂಡ ಸೆಲ್ಫೀಯ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಫೋನ್ ಅನ್ನು ಡಬ್ಬಲ್ ಟ್ಯಾಪಿಂಗ್ (ತಟ್ಟುವ) ಮೂಲಕ ಅಥವಾ ಸ್ಮೈಲ್ ಶಟರ್ ಅನ್ನು ಬಳಸುವ ಮೂಲಕ ಇದನ್ನು ಸಾಧ್ಯಗೊಳಿಸಬಹುದಾಗಿದೆ.

"ಎಕ್ಸ್‌ಪೀರಿಯಾ c3 ಒಂದು ಅನನ್ಯ ಸ್ಮಾರ್ಟ್‌ಫೋನ್ ಆಗಿದ್ದು, ಹೊಸ ಶಕ್ತಿಯುತ "ಪ್ರೊ ಸೆಲ್ಫೀ ಕ್ಯಾಮ್" ನೊಂದಿಗೆ ಸಾಮಾಜಿಕ ಹಂಚಿಕೆ ಅನುಭವವನ್ನು ಒದಗಿಸಲು ರಚಿಸಲಾಗಿದೆ ಎಂದು ಎಕ್ಸ್‌ಪೀರಿಯಾ ಮಾರುಕಟ್ಟೆ ಡೈರೆಕ್ಟರ್ ಕ್ಯಾಲಮ್ ಮೆಕ್‌ಡಾಗಲ್ ತಿಳಿಸಿದ್ದಾರೆ.

ಸೋನಿಯಲ್ಲೇ ಅತ್ಯುತ್ತಮವಾದುದನ್ನು ಒದಗಿಸಲಿರುವ ಈ ಡಿವೈಸ್ ಪ್ರಸ್ತುತ ಚಾಲ್ತಿಯಲ್ಲಿರುವ ಇಮೇಜಿಂಗ್ ತಂತ್ರಜ್ಞಾನ ಮತ್ತು ಅತ್ಯದ್ಭುತ ಸ್ಪೆಕ್ಸ್ ಹಾಗೂ ಕಾರ್ಯನಿರ್ವಹಣೆಯಿಂದ ಮಧ್ಯಮ ಶ್ರೇಣಿಯಲ್ಲೂ ಉತ್ತಮ ಫೋನ್ ಅನುಭವವನ್ನು ನೀಡಲಿದೆ.

ಹೊಸ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆಪರೇಟಿಂಗ್ ಸಿಸ್ಟಮ್ ಅನ್ನು ಇದು ಹೊಂದಿದ್ದು ಸ್ನ್ಯಾಪ್‌ಡ್ರಾಗನ್ 400 ಚಿಪ್‌ಸೆಟ್ ಜೊತೆಗೆ ಕ್ವಾಡ್‌ ಕೋರ್ 1.2GHz ಕೋರ್ಟೆಕ್ಸ್ A7 ಪ್ರೊಸೆಸರ್‌ನೊಂದಿಗೆ, Adreno 305 GPU ಹಾಗೂ 1ಜಿಬಿ RAM ಅನ್ನು ಒದಗಿಸುತ್ತಿದೆ. ಇದು 8ಜಿಬಿ ವಿಸ್ತರಿಸಬಹುದಾದ ಆಂತರಿಕ ಸಂಗ್ರಹಣೆಯನ್ನು ಹೊಂದಿದ್ದು, 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ LED ಫ್ಲ್ಯಾಶ್ ಮತ್ತು ಸೂಪರ್ ತಿನ್ ದೇಹವನ್ನು ಹೊಂದಿದೆ. ಸೋನಿ ಎಕ್ಸ್‌ಪೀರಿಯಾ C3 ಬಿಳಿ, ಕಪ್ಪು ಮತ್ತು ಮಿಂಟ್ ಬಣ್ಣಗಳಲ್ಲಿ ಲಭ್ಯವಿದ್ದು ಆಗಸ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಾಗುತ್ತಿದೆ. ಈ ಫೋನ್ ಚೀನಾದಲ್ಲೇ ಮೊದಲು ಲಭ್ಯವಾಗುತ್ತಿದೆ. ಇದರ ಬೆಲೆಯನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.

English summary
This article tells that Sony xperia C3 selfie phone with 5MP front camera now official.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot