ಸೋನಿ Xperia ಇಯಾನ್ 12 MP ಫೋನ್

By Varun
|
ಸೋನಿ Xperia ಇಯಾನ್ 12 MP ಫೋನ್

ಸೋನಿ ಕಂಪನಿ Xperia ಸರಣಿಯ ಫೋನುಗಳನ್ನು ಒಂದಾದ ಮೇಲೆ ಒಂದು ಬಿಡುತ್ತಿದ್ದು, ತನ್ನ ತಂತ್ರಜ್ಞಾನದ ಸಾಮರ್ಥ್ಯವನ್ನು Xperia ಸರಣಿಯ ಮೂಲಕ ಪರಿಚಯಿಸುತ್ತಿದೆ.

ಈಗ 4.6 ಇಂಚ್ ನ ದೊಡ್ಡ ಸ್ಕ್ರೀನ್ ಇರುವ ಸ್ಮಾರ್ಟ್ ಫೋನ್ ಆದ ಸೋನಿ Xperia ಇಯಾನ್ ಅನ್ನು ಬಿಡುಗಡೆ ಮಾಡುವ ಸೂಚನೆ ನೀಡಿದ್ದು, ಇದರ ಫೀಚರುಗಳನ್ನು ನೋಡಿದರೆ ಜಬರ್ದಸ್ತ್ ಎನ್ನುವಷ್ಟು ಇವೆ.

ಗೇಮಿಂಗ್, ಮಲ್ಟಿಮೀಡಿಯಾ ಹಾಗು HD ವೀಡಿಯೋ ಫೀಚರುಗಳನ್ನು ಹೊಂದಿರುವ ಈ ಸ್ಮಾರ್ಟ್ ಫೋನ್ ಕೆಂಪು ಹಾಗು ಕಪ್ಪು ಬಣ್ಣಗಳಲ್ಲಿ ಬರಲಿದೆ.

ಇದರ ಫೀಚರುಗಳು ಈ ರೀತಿ ಇವೆ:

 • 4.6 ಇಂಚಿನ ಟಚ್ ಸ್ಕ್ರೀನ್, ತರಚು ನಿರೋಧಕ ಗ್ಲಾಸ್ ನೊಂದಿಗೆ

 • 1280 x 720 ಪಿಕ್ಸೆಲ್ ರೆಸಲ್ಯೂಶನ್

 • 12.1 ಮೆಗಾಪಿಕ್ಸೆಲ್ ಕ್ಯಾಮರಾ

 • ಡ್ಯುಯಲ್ ಕೋರ್ 1.5 GHz ಕ್ವಾಲ್ಕೊಮ್ ಸ್ನಾಪ್ಡ್ರಾಗನ್ ಪ್ರೊಸೆಸರ್.

 • ಸ್ಥಳೀಯ ರೆಸೊಲ್ಯೂಶನ್ 4.6 ಇಂಚಿನ ಟಚ್ಸ್ಕ್ರೀನ್

 • MSM8260 ಮೊಬೈಲ್ ಪ್ರೋಸೆಸರ್

 • 1 GB ಮೆಮೊರಿ

 • Adreno 220 ಗ್ರಾಫಿಕ್ಸ್ ಕಾರ್ಡ್

 • ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ (ಆಂಡ್ರಾಯ್ಡ್ 4.0 ತಂತ್ರಾಂಶಕ್ಕೆ ಅಪ್ಗ್ರೇಡ್ ಮಾಡಬಹುದು)

 • 30 fps (ಫ್ರೇಮ್ ಪರ್ ಸೆಕಂಡ್ ) ನಲ್ಲಿ 1080p HD ವಿಡಿಯೋ ತೆಗೆಯುವ ಸಾಮರ್ಥ್ಯ

 • 720p ವಿಡಿಯೋ ರೆಕಾರ್ಡ್ ಮಾಡಬಹುದಾದ 1.3 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮೆರಾ.

 • 16 GB ಆಂತರಿಕ ಮೆಮೊರಿ

 • 32 GB ವರೆಗೆ ವಿಸ್ತರಿಸಬಹುದಾದ ಮೆಮೊರಿ

 • ನಿಯರ್ ಫೀಲ್ಡ್ ಕನೆಕ್ಟಿವಿಟಿ(NFC)

 • ಸಾಮಾಜಿಕ ಜಾಲತಾಣಗಳ ಆಪ್ಸ್, RDS ಮತ್ತು ಬ್ಲೂಟೂತ್

 • ಸ್ಟೀರಿಯೋ ಎಫ್ಎಂ

 • 1900 mAh ಬ್ಯಾಟರಿ

ಈ ಸ್ಮಾರ್ಟ್ ಫೋನ್ ಸುಮಾರು 36 ಸಾವಿರಕ್ಕೆ ಭಾರತಕ್ಕೆ ಬರಬಹುದು ಎಂಬ ನಿರೀಕ್ಷೆ ಇದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X