ಸೋನಿ Xperia Ion: 4.6 ಇಂಚ್ ಸ್ಕ್ರೀನ್ ಫೋನ್

By Varun
|

ಸೋನಿ Xperia Ion: 4.6 ಇಂಚ್ ಸ್ಕ್ರೀನ್ ಫೋನ್
ಸೋನಿ ಕಂಪನಿಯ Xperia ಸರಣಿ ಮೊಬೈಲುಗಳು ಒಂದರ ಹಿಂದೆ ಒಂದು ಬಿಡುಗಡೆಯಾಗುತ್ತಿದ್ದು ಹೋದ ತಿಂಗಳು ನಿಯೋ L ಹಾಗು go ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಆಗಿದ್ದವು.

ಈಗ Xperia Ion ಸ್ಮಾರ್ಟ್ ಫೋನ್ ಅನ್ನು ನೆನ್ನೆ ಬಿಡುಗಡೆ ಮಾಡಿದ್ದು, ದೊಡ್ಡದಾದ 4.6 ಇಂಚ್ ಸ್ಕ್ರೀನ್ ಹೊಂದಿದೆ. ಕೆಂಪು ಹಾಗು ಕಪ್ಪು ಬಣ್ಣಗಳಲ್ಲಿ ಬರಲಿರುವ ಈ ಸ್ಮಾರ್ಟ್ ಫೋನ್ ಕೊಂಡರೆ ಏರ್ ಟೆಲ್ ಆಫರ್ ಕೊಡಲಿದ್ದು, 3 ತಿಂಗಳ ಕಾಲ 500 MB ಉಚಿತ 3G ಇಂಟರ್ನೆಟ್ ಉಪಯೋಗಿಸಬಹುದಾಗಿದೆ.

ಇದರ ಫೀಚರುಗಳು ಈ ರೀತಿ ಇವೆ:

  • ಆಪರೇಟಿಂಗ್ ಸಿಸ್ಟಮ್: ಗೂಗಲ್ ಆಂಡ್ರೋಯ್ಡ್ 4.0 (ಐಸಿಎಸ್)

  • ಪ್ರೊಸೆಸರ್: 1.5GHz ಡ್ಯೂಯಲ್ ಕೋರ್ ಪ್ರೊಸೆಸರ್

  • ಡಿಸ್ಪ್ಲೇ: 4.6 ಇಂಚಿನ HD ರಿಯಾಲಿಟಿ ಟಚ್ ಸ್ಕ್ರೀನ್

  • ರೆಸಲ್ಯೂಶನ್: 1280 x 720 ಪಿಕ್ಸೆಲ್

  • ಮೆಮೊರಿ: 16GB ಆಂತರಿಕ ಮೆಮೊರಿ

  • ಬಾಹ್ಯ ಮೆಮೊರಿ: ಮೈಕ್ರೊ ಕಾರ್ಡ್ ಮೂಲಕ 32GB ವರೆಗೂ ವಿಸ್ತರಿಸಬಹುದಾದ ಮೆಮೊರಿ

  • RAM: 1GB

  • ಕನೆಕ್ಟಿವಿಟಿ: HSPA, GPRS,ವೈಫೈ,ಬ್ಲೂಟೂತ್ 3.0 ಹಾಗು ಮೈಕ್ರೋ USB v2.೦

  • ಹಿಂಬದಿಯ ಕ್ಯಾಮೆರಾ: 12 ಮೆಗಾ ಪಿಕ್ಸೆಲ್ (30fps ನಲ್ಲಿ 1080p ವಿಡಿಯೋ ರೆಕಾರ್ಡಿಂಗ್ ಹಾಗು ಆಟೋಫೋಕಸ್)

  • ಮುಂಬದಿಯ ಕ್ಯಾಮರಾ: VGA

ಇದರ ಬೆಲೆ 36,999 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X