Subscribe to Gizbot

ಎಕ್ಸಪೀರಿಯಾ ಐಯಾನ್‌ vs ಗ್ಯಾಲಾಕ್ಸಿ S3 vs ಹೆಚ್‌ಟಿಸಿ ವನ್‌ X

Posted By: Super
ಎಕ್ಸಪೀರಿಯಾ ಐಯಾನ್‌ vs ಗ್ಯಾಲಾಕ್ಸಿ S3 vs ಹೆಚ್‌ಟಿಸಿ ವನ್‌ X

2012ರ "ಗ್ರಾಹಕ ವಿದ್ಯುತ್‌ ಉಪಕರಣಗಳ ವಸ್ತುಪ್ರದರ್ಶನದಲ್ಲಿ" ಅನಾವರಣ ಗೊಂಡಂತಹ ಸೋನಿ ಎಕ್ಸಪೀರಿಯಾ ಐಯಾನ್‌ ಕೊನೆಗೂ ಭಾರತೀಯ ಮಾರುಕಟ್ಟೆಗೆ ಕಾಲಿರಿಸಿದೆ, ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೆ ಹೈ ಎಂಡ್‌ ಸ್ಮಾರ್ಟ್‌ಫೊನ್‌ಗಳಾದ ಸ್ಯಾಮ್ಸಂಗ್‌ ಗ್ಯಾಲಾಕ್ಸಿ S3 ಹಾಗೂ ಹೆಚ್‌ಟಿಸಿ ವನ್‌ X ಉತ್ತಮ ಜನಪ್ರಿಯತೆ ಪಡೆದಿದ್ದು ಈನಡುವೆ ಐಯಾನ್‌ ಯಾವರೀತಿ ಪೈಪೋಟಿ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಅಂದಹಾಗೆ ಸಾಕಷ್ಟು ಕತೂಹಲ ಹಾಗೂ ಜನಪ್ರಿಯತೆ ಗಳಿಸಿರುವ ಈ ನೂತನ ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳ ನಡುವಿನ ಹೋಲಿಕೆಯನ್ನು ಗಿಜ್ಬಾಟ್‌ ನಿಮಗಾಗಿ ತಂದಿದೆ ಒಮ್ಮೆ ಓದಿ ನೋಡಿ.

ವಿನ್ಯಾಸ: ಎಕ್ಸಪೀರಿಯಾ ಐಯಾನ್‌ 133 x 68 x 10.6 mm ಸುತ್ತಳತೆಯೊಂದಿಗೆ 144 ಗ್ರಾಂ ತೂಕವಿದೆ. ಗ್ಯಾಲಾಕ್ಸಿ S3 ಪ್ಲಾಸ್ಟಿಕ್‌ ಮೇಲ್ಮೆ ಹೊಂದಿದ್ದು 136.6 x 70.6 x 8.6mm ಹಾಗೂ 133 ಗ್ರಾಂ ತೂಕವಿದ್ದರೆ. ಹೆಚ್‌ಟಿಸಿ ವನ್‌ X, 130 ಗ್ರಾಂ ತೂಕ ಹಾಗೂ 134.8 x 69.9 x 8.9mm ಸುತ್ತಳತೆ ಹೊಂದಿದೆ.

ದರ್ಶಕ: ಎಕ್ಸಪೀರಿಯಾ ಐಯಾನ್‌ ನಲ್ಲಿ 4.6 ರಿಯಾಲಿಟಿ ದರ್ಶಕ ಹಾಗೂ 1280 x 720 ಪಿಕ್ಸೆಲ್‌ ಸೇರಿದಂತೆ 313 ppi ಪಿಕ್ಸೆಲ್‌ ಡೆನ್ಸಿಟಿ ಹೊಂದಿದೆ.

ಗ್ಯಾಲಾಕ್ಸಿ S3 ನಲ್ಲಿ 4.8-ಇಂಚಿನ ಸೂಪರ್‌ AMOLED ದರ್ಶಕ, 720 x 1280 ಪಿಕ್ಸೆಲ್ಸ್‌ ಹಾಗೂ 306 ppi ಪಿಕ್ಸೆಲ್‌ ಡೆನ್ಸಿಟಿಯೊಂದಿಗೆ ಗೊರಿಲ್ಲಾ ಗ್ಲಾಸ್‌ ರಕ್ಷಣೆ ಪಡೆದಿದೆ.

ಹಾಗೂ ಹೆಚ್‌ಟಿಸಿ ವನ್‌ X ನಲ್ಲಿ 4.7-ಇಂಚಿನ ಸೂಪರ್‌ LCD 2 ಟಚ್‌ಸ್ಕ್ರೀನ್‌, 720 x 1280 ಪಿಕ್ಸೆಲ್ಸ್‌ ಹಾಗೂ 313 ppi ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಮೂರು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ 4.0 ಐಸ್‌ಕ್ರೀಮ್‌ ಸ್ಯಾಂಡ್ವಿಚ್‌ OS ಹೊಂದಿವೆ. ಅಂದಹಾಗೆ ಗ್ಯಾಲಾಕ್ಸಿ S3 ಹಾಗೂ ಹೆಚ್‌ಟಿಸಿ ಫೋನ್‌ಗಳು ನೂತನ ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಮಾದರಿಗೆ ಅಪ್ಗ್ರೇಡ್‌ ಆಗಲಿದೆ.

ಪ್ರೊಸೆಸರ್‌: ಎಕ್ಸಪೀರಿಯಾ ಐಯಾನ್‌ 1.5 GHz ಡ್ಯುಯೆಲ್‌ ಕೋರ್‌ ಕ್ವಾಲ್ಕಾಮ್‌ MSM8260 ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಹೊಂದಿದ್ದರೆಗ್ಯಾಲಾಕ್ಸಿ S3 ನಲ್ಲಿ 1.4 GHz ಕ್ವಾಡ್‌ಕೋರ್‌ ಕ್ಸೆನೊಸ್‌ 4 ಕ್ವಾಡ್‌ ಪ್ರೊಸೆಸರ್‌ ಹೊಂದಿದೆ ಹಾಗೂ ಹೆಚ್‌ಟಿಸಿ ವನ್‌ X ನಲ್ಲಿ NVIDIA ಟೆಗ್ರಾ 3 ಚಿಪ್‌ಸೆಟ್‌, ಕ್ವಾಡ್‌ಕೊರ್‌ 1.5 GHz ಒಳಗೊಂಡಿದೆ.

ಕ್ಯಾಮೆರಾ: ಸೋನಿ ಎಕ್ಸಪೀರಿಯಾ ಐಯಾನ್‌ ನಲ್ಲಿ 12 MP ಕ್ಯಾಮೆರಾ, LED ಫ್ಲಾಷ್‌ ಗಾಗೂ Exmor R ಸೆನ್ಸಾರ್‌ ಸೇರಿದಂತೆ ಮುಂಬದಿಯ 1.3 MP ಕ್ಯಾಮೆರಾದಿಂದ ಕೂಡಿದೆ.

ಗ್ಯಾಲಾಕ್ಸಿ S3 ನಲ್ಲಿ 8MP ಹಿಂಬದಿಯ ಕ್ಯಾಮೆರಾ ಇದ್ದು 3264×2448 ಪಿಕ್ಸೆಲ್ಸ್‌ ಸೇರಿದಂತೆ ಮುಂಬದಿಯ 1.9MP ಕ್ಯಾಮೆರಾ ಒಳಗೊಂಡಿದೆ.

ಹೆಚ್‌ಟಿಸಿ ವನ್‌ X ನಲ್ಲಿಯೂ ಕೂಡ 8-MP ಕ್ಯಾಮೆರಾ ಹಾಗೂ LED ಫ್ಲಾಷ್‌ ಸೇರಿದಂತೆ HD ವಿಡಿಯೋ ರೆಕಾರ್ಡಿಂಗ್‌ ಎಕ್ಸಪೀರಿಯಾ ಐಯಾನ್‌ ನಂತೆಯೆ ಮುಂಬದಿಯ 1.3 MP ಕ್ಯಾಮೆರಾ ಹೊಂದಿದೆ.

ಮೆಮೊರಿ: ಭಾರತದಲ್ಲಿ ಈ ಎಲ್ಲಾ ಫೊನ್‌ಗಳು 16GB ಆಂತರಿಕ ಸ್ಟೋರೇಜ್‌ ಮಾದರಿಗಳಲ್ಲಿ ಲಭ್ಯವಿದೆ. ಅಂದಹಾಗೆ ಹೆಚ್‌ಟಿಸಿ ವನ್‌ Xನಲ್ಲಿ ಮೈಕ್ರೋ SD ಕಾರ್ಡ್‌ ಸೌಲಭ್ಯ ವಿಲ್ಲ ಹಾಗೂ ಎಕ್ಸಪೀರಿಯಾ ಐಯಾನ್‌ ಮತ್ತು ಗ್ಯಾಲಾಕ್ಸಿ S3 ಫೋನ್‌ಗಳನ್ನು ಮೈಕ್ರೋ SD ಕಾರ್ಡ್‌ ಸ್ಲಾಟ್‌ ಮೂಲಕ 32GB ವರೆಗೂ ಮೆಮೊರಿ ವಿಸ್ತರಿಸ ಬಹುದಾಗಿದೆ..

ಕನೆಕ್ಟಿವಿಟಿ: ಈ ವಿಭಾಗದಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳಲ್ಲಿ Wi-Fi 802.11 b/g/n, Wi-Fi ಡೈರೆಕ್ಟ್‌, DLNA, Wi-Fi ಹಾಟ್‌ಸ್ಪಾಟ್‌, A2DP ಬ್ಲೂಟೂತ್‌ ಹಾಗೂ ಮೈಕ್ರೋ USB 2.0 ಸೇರಿದಂತೆ USB ಆನ್‌ ದಿ ಗೋ ಹೊಂದಿವೆ.

ಬ್ಯಾಟರಿ: ಎಕ್ಸಪೀರಿಯಾ ಐಯಾನ್‌ ನಲ್ಲಿ 1900 mAh Li-ion ಬ್ಯಾಟರಿ ಇದ್ದು 10 ಗಂಟೆಗಳ ಟಾಕ್‌ಟೈಮ್‌ 400 ಸ್ಟ್ಯಾಂಡ್ ಬೈ ನೀಡುತ್ತದೆ, ಹೆಚ್‌ಟಿಸಿ ವನ್‌ X ನಲ್ಲಿ Li-ion 1800mAh ಬ್ಯಾಟರಿ ಇದ್ದು 8 ಗಂಟೆಗಳ ಟಾಕ್‌ಟೈಮ್‌ ನೀಡುತ್ತದೆ.

ಗ್ಯಾಲಾಕ್ಸಿ S3 ನಲ್ಲಿ ಹೆಚ್ಚಿನ ಸಾಮರ್ತ್ಯದ Li-Ion 2050mAh ಬ್ಯಾಟರಿ ಇದ್ದು 12 ಗಂಟೆಗಳ ಟಾಕ್‌ಟೈಮ್‌ ಹಾಗೂ 790 ಗಂಟೆಗಳ ಸ್ಟ್ಯಾಂಡ್‌ಬೈ ನೀಡುತ್ತದೆ..

ಬೆಲೆ: ಖರೀದಿಸುವ ವಿಚಾರದಲ್ಲಿ ಎಕ್ಸಪೀರಿಯಾ ಐಯಾನ್‌ ರೂ. 36,999 , ಗ್ಯಾಲಾಕ್ಸಿ S3 16 GB ರೂ. 38,400 ಹಾಗೂ ಹೆಚ್‌ಟಿಸಿ ವನ್‌ X ಕೊಂಚ ಕಡಿಮೆ ಯಾಗಿದ್ದು ರೂ 36,099 ಬೆಲೆಯಲ್ಲಿ ಲಭ್ಯವಿದೆ. ಗ್ಯಾಲಾಕ್ಸಿ S3 ಯ 32 GB ಮಾದರಿಯನ್ನು ಇತ್ತೀಚೆಗಷ್ಟೇ 41,500 ರೂ. ಬೆಲೆಗೆ ಬಿಡುಗಡೆ ಮಾಡಲಾಗಿದೆ.

Read In English...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot