Home
ಮೊಬೈಲ್

ಸೋನಿ ಎಕ್ಸ್‌ಪೀರಿಯಾ ಎಮ್ 2 ಈಗಲೇ ಕಾಯ್ದಿರಿಸಿ

By Shwetha

ಜಪಾನ್ ಮೂಲದ ಸ್ಮಾರ್ಟ್‌ಫೋನ್ ತಯಾರಿಕೆಯು ಸೋನಿಯ ಹೊಸ ಕೊಡುಗೆಯಾದ ಎಮ್ 2 ಡ್ಯುಯೆಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಈ ಫೋನ್ ಅನ್ನು ಮುಂಚಿತವಾಗಿ ನೀವು ಫ್ಲಿಪ್‌ಕಾರ್ಟ್‌ ಮೂಲಕ ಕಾಯ್ದಿರಿಸಬಹುದು. ಕೇವಲ 20,999 ರೂ.ಗೆ ಸೋನಿ ಎಕ್ಸ್‌ಪೀರಿಯಾದ ಹೊಸ ಆವೃತ್ತಿ ಎಮ್ 2 ಅನ್ನು ಈಗಲೇ ಆರ್ಡರ್ ಮಾಡುವ ಅವಕಾಶ ನಿಮ್ಮದಾಗಲಿದೆ.

ಸರಳ ಫೀಚರ್‌ಗಳು, ಪೋಟೋ ಕ್ಯಾಪ್ಚರಿಂಗ್ ಗುಣಮಟ್ಟ ಹೀಗೆ ಹತ್ತು ಹಲವು ಅಂಶಗಳಿಂದ ಪೂರ್ಣಗೊಂಡಿರುವ ಒಂದು ಉತ್ತಮ ಹ್ಯಾಂಡ್‌ಸೆಟ್ ಇದಾಗಿದ್ದು, ನಿಮ್ಮ ಮನಸ್ಸಿಗೆ ತೃಪ್ತಿಯನ್ನು ಒದಗಿಸುವಂತೆ ಇದು ನಿಮ್ಮ ಸಂಗಾತಿಯಾಗುತ್ತದೆ. ಸೋನಿ ಕಂಪೆನಿಯ ಎಕ್ಸ್‌ಪೀರಿಯಾ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆಯುತ್ತಿರುವ ಬೆನ್ನಲ್ಲೇ ಇನ್ನೊಂದು ವಿಶೇಷ ಫೋನ್ ಅನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯನ್ನು ಕಂಪೆನಿ ಮಾಡಿದೆ.

ಸೋನಿ ಎಕ್ಸ್‌ಪೀರಿಯಾ ಎಮ್ 2 ಈಗಲೇ ಕಾಯ್ದಿರಿಸಿ

ಸಾಕಷ್ಟು ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಎಮ್ 2 ಡ್ಯುಯೆಲ್ ಸಿಮ್‌ನಲ್ಲಿ 4.8 ಇಂಚು ಸಾಮರ್ಥ್ಯದ ಟಚ್ ಸ್ಕ್ರೀನ್ ಡಿಸ್‌ಪ್ಲೇ ಇದ್ದು ಇದರ ರೆಸಲ್ಯೂಶನ್ 960 x 540 ಪಿಕ್ಸೆಲ್‌ಗಳಾಗಿವೆ. ಈ ಫೋನ್ ಇನ್ನಷ್ಟು ಅಂಶಗಳನ್ನು ಒಳಗೊಂಡಿದ್ದು ಅವುಗಳನ್ನು ಹಂತಹಂತವಾಗಿ ಕೆಳಗೆ ಗಮನಿಸಿ.

* 1.2 ಜಿಎಚ್‌ಜೆಡ್ ಕ್ವಾಡ್ - ಕೋರ್ ಕ್ವಾಲ್‌ಕಮ್ ಸ್ನಾಪ್‌ಡ್ರಾಗನ್ (ಎಮ್‌ಎಸ್‌ಎಮ್ 8226) ಪ್ರೊಸೆಸರ್‌ನೊಂದಿಗೆ ರೂಪಿತಗೊಂಡಿದೆ.

* ಆಡ್ರೇನೋ 505 ಜಿಪಿಯು ಇದ್ದು 1 ಜಿಬಿ RAM ನೊಂದಿಗೆ ಬೆರೆತುಕೊಂಡಿದೆ.

* ಆಂಡ್ರಾಯ್ಡ್ 4.3 (ಜೆಲ್ಲಿ ಬೀನ್) ಓಎಸ್‌ನಲ್ಲಿ ಎಮ್ 2 ನಿರ್ವಹಣೆ ಸಾಧ್ಯ.

* ಸೋನಿ ತನ್ನ ಇತ್ತೀಚಿನ ಎಲ್ಲಾ ಡಿವೈಸ್‌ಗಳಿಗೆ ಕಿಟ್‌ಕ್ಯಾಟ್ ಅಪ್‌ಡೇಟ್ ಮಾಡುತ್ತಿದ್ದು. ಈ ಫೋನ್‌ಗೂ ಕಿಟ್‌ಕ್ಯಾಟ್ ಆವೃತ್ತಿ ಸದ್ಯದಲ್ಲೇ ಬರಲಿದೆ.

* ಎಮ್ 2 ನ ಡ್ಯುಯೆಲ್ ಕ್ಯಾಮೆರಾ 8 ಎಮ್‌ಪಿಯಾಗಿದ್ದು ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಸಂಪುರ್ಣಗೊಳ್ಳಲಿದೆ. ಈ ಕ್ಯಾಮರಾವು ಎಕ್ಸ್‌ಮರ್ ಆರ್‌ಎಸ್ ಸೆನ್ಸಾರ್ ಅನ್ನು ಬಳಸಿದ್ದು ಇದರಿಂದ 1080 ಗುಣಮಟ್ಟದಲ್ಲಿ ವೀಡಿಯೋ ಶೂಟ್ ಮಾಡಬಹುದು.

* ಎಮ್‌ 2 ನಲ್ಲಿ ಆಂತರಿಕ ಸಂಗ್ರಹಣಾ ಸಾಮರ್ಥ್ಯ 8 ಜಿಬಿ ಇದ್ದು ಇದನ್ನು ಮೈಕ್ರೋ ಎಸ್‌ಡಿ ಮೂಲಕ 39 ಜಿಬಿಗೆ ವಿಸ್ತರಿಸಬಹುದು.

* ಸಂಪರ್ಕ ಆಯ್ಕೆಗಳು ಸಾಮಾನ್ಯವಾಗಿದೆ ಅದೆಂದರೆ 3G ಎಚ್‌ಎಸ್‌ಪಿಎ+, ವೈಫೈ 820.11 ಬಿ/ಜಿ/ಎನ್, ಬ್ಲೂಟೂತ್ 4.0, ಜಿಪಿಎಸ್ ಮತ್ತು ಎನ್‌ಎಫ್‌ಸಿ ಯನ್ನು ಇದು ಒಳಗೊಂಡಿದೆ.

* ಡ್ಯುಯೆಲ್ ಸಿಮ್ ಬೆಂಬಲ ಇದಕ್ಕಿದೆ ಎಂಬುದು ಈ ಫೋನ್‌ಗಿರುವ ಇನ್ನೊಂದು ವಿಶೇಷತೆಯಾಗಿದೆ.

ಈ ಸ್ಮಾರ್ಟ್‌ಫೋನ್ 8.64ಎಮ್ಎಮ್ ದಪ್ಪಗಿನ ಆಕಾರವನ್ನು ಹೊಂದಿದ್ದು ತೂಕ 148 ಗ್ರಾಮ್ಸ್ ಆಗಿದೆ. ಬ್ಯಾಟರಿ ಸಾಮರ್ಥ್ಯ 2300 ಎಮ್‌ಎಎಚ್ ಆಗಿದೆ. ಇಲ್ಲಿ ನೀವು ಈ ಡಿವೈಸ್‌ನ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಬಹುದು.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+