ಸೋನಿ Experia P ಆಂಡ್ರಾಯ್ಡ್ ಫೋನ್ ಬರಲಿದೆ

By Varun
|
ಸೋನಿ Experia P ಆಂಡ್ರಾಯ್ಡ್ ಫೋನ್ ಬರಲಿದೆ

ಸೋನಿ ಮೊಬೈಲ್ ತನ್ನ ಹೊಸ ಸ್ಮಾರ್ಟ್ ಫೋನ್ ಆದ ಸೋನಿ Experia P ಮಾಡಲ್ ಅನ್ನು ಮುಂದಿನ ವಾರ ಭಾರತಕ್ಕೆ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಂದಿದೆ. ಫೆಬ್ ತಿಂಗಳಲ್ಲಿ ನಡೆದ ವಿಶ್ವ ಮೊಬೈಲ್ ಕಾಂಗ್ರೆಸ್ ನಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆ ಗಳಿಸಿದ್ದ ಈ ಫೋನ್ 26,000 ರೂಪಾಯಿಗೆ ಬರಲಿದೆಯಂತೆ.

ಈ ಫೋನಿನ ಫೀಚರುಗಳು ಈ ರೀತಿ ಇವೆ:

  • 4 ಇಂಚ್ ತರಚು ನಿರೋಧಕ ಡಿಸ್ಪ್ಲೇ, 960 x 540 ರೆಸಲ್ಯೂಶನ್ ನೊಂದಿಗೆ

  • ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ

  • 8 ಮೆಗಾ ಪಿಕ್ಸೆಲ್ ಕ್ಯಾಮರಾ, LED ಫ್ಲಾಶ್ ಹಾಗು ಆಟೋ ಫೋಕಸ್ ನೊಂದಿಗೆ

  • 1GHz ಪ್ರೋಸೆಸರ್

  • 1GB ರಾಮ್

  • 16 GB ಆಂತರಿಕ ಮೆಮೊರಿ

  • GPRS, wi-fi, NFC ,ಬ್ಲೂಟೂತ್

  • ಸ್ಟೀರಿಯೋ FM ರೇಡಿಯೋ, 3.5 mm ಆಡಿಯೋ ಜ್ಯಾಕ್

  • MP3, MP4 ಪ್ಲೇಯರ್

ಇದಷ್ಟೇ ಅಲ್ಲದೆ ವೆಬ್ ಬ್ರೌಸಿಂಗ್ ಮಾಡುವಾಗ ಡಿಸ್ಪ್ಲೇ ಮುಟ್ಟದೆ, ಕೇವಲ ಸಂಜ್ಞೆ ಮೂಲಕ ಸ್ಕ್ರಾಲ್ ಆಗುವ ಫ್ಲೋಟಿಂಗ್ ಟಚ್ ಡಿಸ್ಪ್ಲೇ ಕೂಡಾ ಹೊಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X