ಎಕ್ಸ್‌ಪೀರಿಯಾ ಟಿ2 ಅಲ್ಟ್ರಾ ನಿರೀಕ್ಷಿತ ಫೋನ್ ಹೇಗೆ?

By Shwetha
|

ಸ್ಯಾಮ್‌ಸಂಗ್ ಹಾಗೂ ಆಪಲ್‌ನ ಮೆಚ್ಚುಗೆಯನ್ನು ಹೊರತುಪಡಿಸಿ, ಇವುಗಳದ್ದೇ ವೇಗದಲ್ಲಿ ಡಿವೈಸ್ ಅನ್ನು ಮಾರುಕಟ್ಟೆಗೆ ತರುವಂತಹ ಛಾತಿ ಉಳ್ಳ ಕಂಪೆನಿಯಾಗಿದೆ ಸೋನಿ. ಹೊಸ ಫೀಚರ್ ಮತ್ತು ಅನ್ವೇಷಣೆಗಳನ್ನು ಮಾಡುತ್ತಾ ಗ್ರಾಹಕರ ಮನತಣಿಸುವಂತೆ ಡಿವೈಸ್ ಅನ್ನು ಲಾಂಚಿಂಗ್ ಮಾಡುವ ಸಾಮರ್ಥ್ಯ ಸೋನಿಗಿದೆ.

ಪೈಪೋಟಿ ಮತ್ತು ಮುನ್ನಗ್ಗಬೇಕೆಂದಿರುವ ಛಲದೊಂದಿಗೆ ಸೋನಿ ಕಂಪೆನಿ ಹೊಸದಾಗಿ ನ್ಯೂ ಎಕ್ಸ್‌ಪೀರಿಯಾ ಟಿ2 ವನ್ನು ಲಾಂಚ್ ಮಾಡಿದೆ. ಇದೇ ಡಿವೈಸ್ ಅಡಿಯಲ್ಲಿ ಬರುವ ಇತರ ಕಂಪೆನಿ ಫೋನ್‌ಗಳಿಗೆ ಭರ್ಜರಿ ಪೈಪೋಟಿಯನ್ನು ನೀಡುವ ತಾಕತ್ತು ಸೋನಿಯ ಈ ಡಿವೈಸ್‌ಗಿದೆ ಎಂಬುದು ಮಾರುಕಟ್ಟೆಯ ತಾಜಾ ಮಾಹಿತಿಯಾಗಿದೆ.

ಝೆಡ್ ಅಲ್ಟ್ರಾದ ಕಡಿಮೆ ಮೌಲ್ಯದ ಫೋನ್ ಆದ ನ್ಯೂ ಎಕ್ಸ್‌ಪೀರಿಯಾ ಟಿ2 ಅತ್ಯಪೂರ್ಣ ಫೀಚರ್ ಮತ್ತು ಫೋನ್ ಕ್ವಾಲಿಟಿಯೊಂದಿಗೆ ಸೋನಿ ಪ್ರಿಯರ ಮನಗೆಲ್ಲಲಿದೆ. ಇದರ ಮೂಲ ಝೆಡ್ ಅಲ್ಟ್ರಾಗೆ ಹೋಲಿಸಿದಾಗ ನ್ಯೂ ಎಕ್ಸ್‌ಪೀರಿಯಾ ಟಿ2 ನಲ್ಲಿ ಕೆಲವೊಂದು ಕೊರತೆಗಳನ್ನು ನಮಗೆ ಕಾಣಬಹುದಾಗಿದೆ.

ಇಂದಿನ ಲೇಖನದಲ್ಲಿ ನ್ಯೂ ಎಕ್ಸ್‌ಪೀರಿಯಾ ಟಿ2 ಕುರಿತ ಸಂಪೂರ್ಣ ಮಾಹಿತಿಯನ್ನು ನಾವು ನೀಡಲಿದ್ದು ನಿಮ್ಮೆಲ್ಲಾ ಪ್ರಶ್ನೆಗಳಿಗೆ ತಕ್ಕುದಾದ ಉತ್ತರವನ್ನು ಈ ಲೇಖನ ನೀಡಲಿದೆ.ಹಾಗಿದ್ದರೆ ಸ್ಲೈಡ್‌ಗಳತ್ತ ನಿಮ್ಮ ನೋಟ ಹರಿಯಲಿ ಮತ್ತು ನಿಮ್ಮೆಲ್ಲಾ ಪ್ರಶ್ನೆಗಳಿಗೆ ತಕ್ಕ ಉತ್ತರ ದೊರೆಯಲಿ.

#1

#1

ಎಕ್ಸ್‌ಪೀರಿಯಾ ಟಿ2 ಅಲ್ಟ್ರಾವನ್ನು ಫಕ್ಕನೆ ನೋಡಿದಾಗ ಈಗಷ್ಟೇ ಬಿಡುಗಡೆಯಾದ ಝೆಡ್ ಅಲ್ಟ್ರಾಗೆ ಇದು ಸಮಾನವಾಗಿದ್ದಂತೆ ಕಂಡುಬರುತ್ತದೆ. ಇದು ತುಂಬಾ ಭಾರವಾಗಿಲ್ಲ ಮತ್ತು ಸ್ವಲ್ಪ ದೊಡ್ಡ ಮಾದರಿಯಲ್ಲಿದ್ದಂತೆ ಕಂಡುಬರುತ್ತದೆ. ನಿಮ್ಮ ಜೇಬಿನಲ್ಲಿ ಸರಿಯಾಗಿ ಹೊಂದಿಕೆಯಾಗುವಂತೆ ಫೋನ್‌ನ ಆಕಾರವಿದೆ. ಡಿವೈಸ್‌ನ ಬಲಭಾಗದಲ್ಲಿ ಪವರ್ ಬಟನ್ ಇದ್ದು ಆರಾಮದಾಯಕವಾಗಿದೆ.

#2

#2

ಡಿವೈಸ್ ಆಕರ್ಷಕ ವಿನ್ಯಾಸದಲ್ಲಿ ಬಂದಿದ್ದು ಡೈ ಹಾರ್ಡ್ ಬ್ಯಾಟರಿ ಫೋನ್‌ನಲ್ಲಿದೆ. ಈ ಫೋನ್ ಸೋನಿ ಅಭಿಮಾನಿಗಳ ಮನಸೆಳೆಯುವಂತಿದ್ದು ಕ್ಯಾಮೆರಾ ಧೂಳು ಮತ್ತು ನೀರು ಪ್ರತಿಶೋಧಕ ಶಕ್ತಿಯಿಂದ ವೈಶಿಷ್ಟ್ಯಪೂರ್ಣವಾಗಿದೆ.

#3

#3

ಇದು ಬ್ರಾವಿಯಾ ಎಂಜಿನ್ 2 ತಂತ್ರಜ್ಞಾನದೊಂದಿಗೆ ಬಂದಿದ್ದು 720p IPS ಎಲ್‌ಸಿಡಿ ಡಿಸ್‌ಪ್ಲೇ ಮೊಬೈಲ್‌ನಲ್ಲಿದೆ. ಜೆಲ್ಲಿ ಬೀನ್ ಓಎಸ್ 4.3 ಇದರಲ್ಲಿ ಚಾಲನೆಯಾಗುತ್ತಿದ್ದು, ಸಿಂಗಲ್ ಹ್ಯಾಂಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದ್ದು 8 ಜಿಬಿ ಆಂತರಿಕ ಮೆಮೊರಿ ಫೋನ್‌ನಲ್ಲಿದೆ ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 32ಜಿಬಿಗೆ ವಿಸ್ತರಿಸಬಹುದಾಗಿದೆ. ಬ್ಯಾಟರಿ ಸಾಮರ್ಥ್ಯ 3400 ಆಗಿದೆ.

#4

#4

ಇದು 6.44 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಪ್ರಿಡೆಸಸರ್ ಅನ್ನು ಮೊತ್ತ ಮೊದಲ ಬಾರಿಗೆ ಬಳಸುತ್ತಿದೆ. ಇದರ RAM ಸಾಮರ್ಥ್ಯ 3 ಜಿಬಿಯಾಗಿದ್ದು, ಈ ಡಿವೈಸ್ ಒಂದು ಶಕ್ತಿಯುತ ಮೆಶೀನ್ ಆಗಿದೆ ಎಂಬುದಕ್ಕೆ ಬೇರೆ ಪುರಾವೆ ಬೇಕಿಲ್ಲ.

#5

#5

ಸೋನಿ ಎಕ್ಸ್‌ಪೀರಿಯಾ ಟಿ2 ಅಲ್ಟ್ರಾದ ಪ್ರಾಥಮಿಕ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದೆ. ಸೆಟ್‌ನ ಕ್ಯಾಮೆರಾ ಬಳಸಲು ಆರಾಮದಾಯಕವಾಗಿದ್ದು ಸುಲಭವಾಗಿದೆ. ಇದರ ವೀಡಿಯೋ ರೆಕಾರ್ಡಿಂಗ್ 1080p ರೆಸಲ್ಯೂಶನ್ ಅನ್ನು ನೀಡಲಿದ್ದು ಫ್ರಂಟ್ ಕ್ಯಾಮೆರಾ ಸಾಮರ್ಥ್ಯ 720p ಆಗಿದೆ.

<center><iframe width="100%" height="510" src="//www.youtube.com/embed/HsNanSMPqbE" frameborder="0" allowfullscreen></iframe></center>

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X