ಒಂದು ಕ್ಯಾಚೀ ಹ್ಯಾಂಡ್‌ಸೆಟ್ ಆಗಿ ಎಕ್ಸ್‌ಪೀರಿಯಾ T2 ಅಲ್ಟ್ರಾ

By Shwetha
|

ಸ್ಯಾಮ್‌ಸಂಗ್ ಆಪಲ್‌ ನಂತರ ಅತ್ಯಾಕರ್ಷಕ ಭಾರೀ ಬೆಲೆಯ ಹ್ಯಾಂಡ್‌ಸೆಟ್ ಆಗಿ ಗಮನ ಸೆಳೆಯುವಂಥದ್ದು ಸೋನಿಯಾಗಿದೆ. ಇದು ಮಾರುಕಟ್ಟೆಯಲ್ಲಿ ಇತರ ಹೈ ಬ್ರ್ಯಾಂಡ್ ಫೋನ್‌ಗಳಿಗೆ ಭರ್ಜರಿ ಪೈಪೋಟಿಯನ್ನು ನೀಡುತ್ತಿದ್ದು ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸ್ಥಾನವನ್ನು ಸ್ಥಾಪಿಸುವ ಕೈಂಕರ್ಯದಲ್ಲಿ ತೊಡಗಿದೆ.

ಹೆಚ್ಚು ಉತ್ಪತ್ತಿಯನ್ನು ಮತ್ತು ಪ್ರಸಿದ್ಧಿಯನ್ನು ಪಡೆಯುತ್ತಿರುವ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡೇ ಸೋನಿ ನ್ಯೂ ಎಕ್ಸ್‌ಪೀರಿಯಾ T2 ಆಲ್ಟ್ರಾ ಫ್ಯಾಬ್ಲೆಟ್ ಡಿವೈಸ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಇದೇ ಫ್ಯಾಬ್ಲೆಟ್ ವರ್ಗದಲ್ಲಿ ಬರುವ ಉಳಿದವುಗಳನ್ನು ಇದು ಮಕಾಡೆ ಮಲಗಿಸುವುದು ಖಚಿತವಾಗಿದೆ.

ಮಧ್ಯಮ ಕ್ರಮಾಂಕ ದರವನ್ನು ಮನದಲ್ಲಿಟ್ಟುಕೊಂಡೇ T2 ಅಲ್ಟ್ರಾವನ್ನು ಲಾಂಚ್ ಮಾಡಿರುವ ಸೋನಿ ಹಿಂದೆ ಬಿಡುಗಡೆ ಮಾಡಿರುವ ಎಕ್ಸ್‌ಪೀರಿಯಾ Z ಅಲ್ಟ್ರಾಕ್ಕಿಂತ ಹೆಚ್ಚಿನ ಭಿನ್ನತೆಯನ್ನು ಇದಕ್ಕೆ ಸೇರಿಸಿದೆ. ಇದರ ಸಂಪೂರ್ಣ ಮಾಹಿತಿಯನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ನಿಮಗೆ ನೀಡುತ್ತಿದ್ದು ಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

#1

#1

ವಿನ್ಯಾಸ ಮತ್ತು ಡಿಸ್‌ಪ್ಲೇ
T2 ಅಲ್ಟ್ರಾವನ್ನು ನೀವು ಸೂಕ್ಷ್ಮವಾಗಿ ಗಮನಿಸಿದಾಗ, ಕಳೆದ ಬಾರಿ ಬಿಡುಗಡೆ ಮಾಡಿದ z ಅಲ್ಟ್ರಾಗೆ ಸಮನಾದ ರೀತಿಯಲ್ಲಿ ಈ ಫ್ಯಾಬ್ಲೆಟ್ ಇದೆ. ಇದು ಲೈಟ್ ವೈಟ್ ಆಗಿದ್ದು ಕೈಯಲ್ಲಿ ಹಿಡಿದುಕೊಳ್ಳಲು ಮಜಬೂತಾಗಿದೆ. ಇದರ ಹಿಂಭಾಗವನ್ನು ಎಂದಿನಂತೆ ಗ್ಲಾಸ್ ಕೇಸಿಂಗ್‌ನಿಂದ ಮಾಡಿದ್ದು, ನಿಮ್ಮ ಪಾಕೆಟ್‌ನಲ್ಲಿ ಇದು ಚೆನ್ನಾಗಿ ಕೂರುತ್ತದೆ.

#2

#2

ಪ್ರೊಸೆಸರ್, ಸಾಫ್ಟ್‌ವೇರ್ ಮತ್ತು ಬ್ಯಾಟರಿ

T2 ಅಲ್ಟ್ರಾ ಟ್ರಿಮ್ಯುಲೇನಿಯಸ್ ತಂತ್ರಜ್ಞಾನದೊಂದಿಗೆ ಬಂದಿದ್ದು 720p ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಇದರಲ್ಲಿದೆ. ಇದರ ಹೊಳೆಯುವ ನೋಟ ಫೋನ್‌ಗೆ ಇನ್ನಷ್ಟು ಆಕರ್ಷಕ ನೋಟವನ್ನು ನೀಡಿದೆ. ಇದರಲ್ಲಿ ಆಂಡ್ರಾಯ್ಡ್ ಜೆಲ್ಲಿ ಬೀನ್ ಓಸ್ 4.3 ಚಾಲನೆಯಾಗುತ್ತಿದ್ದು, ಆಂಡ್ರಾಯ್ಡ್‌ನ ಸ್ಕಿನ್ಡ್ ಆವೃತ್ತಿ ಇದಾಗಿದೆ. ಇದು ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ ಸೋಕ್ ಕ್ಲಾಕ್‌ಡ್ 1.4Ghz, ಆಡ್ರೆನೋ 305 ಗ್ರಾಫಿಕ್ಸ್ ಇದರಲ್ಲಿದೆ. ಇದು 8ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವನ್ನು ನೀಡಿದ್ದು, ಬಳಕೆದಾರರಿಗೆ 4.68 ಜಿಬಿ ಮಾತ್ರ ಲಭ್ಯವಿದೆ.

#3

#3

ಕ್ಯಾಮೆರಾ

ಇದು 13 ಮೆಗಾಪಿಕ್ಸೆಲ್‌ಗಳ ಸ್ನ್ಯಾಪರ್‌ನೊಂದಿಗೆ, ಸೋನಿಯ ಸಾಂಪ್ರದಾಯಿಕ ಕೊಡುಗೆಯಾದ ಕ್ಯಾಮೆರಾ ಸೆನ್ಸಾರ್ ಅನ್ನು ನೀಡಿದೆ. ಇದರ ಕ್ಯಾಮೆರಾವು ಬಳಸಲು ಸುಲಭವಾಗಿದ್ದು ಹೆಚ್ಚಿನ ಚಿತ್ರ ಗುಣಮಟ್ಟವನ್ನು ನೀಡಿದೆ. ಇದರ ವೀಡಿಯೋ ರೆಕಾರ್ಡಿಂಗ್ 1080 ಪಿ ರೆಸಲ್ಯೂಶನ್ ಅನ್ನು ನೀಡುತ್ತಿದ್ದು ಮುಂಭಾಗದಲ್ಲಿ 720p ಯನ್ನು ನೀಡುತ್ತಿದೆ.

#4

#4

ಕೊನೆಯ ಮಾತುಗಳು
T2 ಅಲ್ಟ್ರಾ ಸೋನಿ ಎಕ್ಸ್‌ಪೀರಿಯಾದ ದೊಡ್ಡ ಡಿವೈಸ್ ಆಗಿದ್ದು, ನಿಜವಾಗಿಯೂ ಪರಿಪೂರ್ಣ ಹ್ಯಾಂಡ್‌ಸೆಟ್ ಇದಾಗಿದೆ. ಇದು ಸಂಪೂರ್ಣ ಆಕರ್ಷಕ ನೋಟವನ್ನು ನಿಮಗೆ ನೀಡುತ್ತಿದ್ದು ಬ್ಯಾಟರಿ ಸಾಮರ್ಥ್ಯ ಕೂಡ ಚೆನ್ನಾಗಿದೆ.

#5

ವೀಡಿಯೋ

ಸೋನಿ ಎಕ್ಸ್‌ಪೀರಿಯಾ T2 ಅಲ್ಟ್ರಾ ಕುರಿತ ಹೆಚ್ಚಿನ ಮಾಹಿತಿಯನ್ನು ಕೆಳಗಿನ ವೀಡಿಯೋ ಪ್ರದರ್ಶಿಸುತ್ತಿದ್ದು ನಿಮಗಿದನ್ನು ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X