Home
ಮೊಬೈಲ್

23ಎಂಪಿ ಕ್ಯಾಮೆರಾದ ಸೋನಿ ಎಕ್ಸ್‌ಪೀರಿಯಾ XA2 ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆ

By Gizbot Bureau

ಜಪಾನ್ ಮೂಲದ ಮೊಬೈಲ್ ತಯಾರಿಕಾ ಕಂಪೆನಿ ಸೋನಿ ತನ್ನ ಮತ್ತೊಂದು ನೂತನ ಸ್ಮಾರ್ಟ್ ಫೋನ್ ಎಕ್ಸ್ ಪೀರಿಯಾ ಎಕ್ಸ್ಎ2 ಪ್ಲಸ್ ನ್ನು ಅಧಿಕೃತವಾಗಿ ಲಂಡನ್ ನಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಬ್ಲಾಗ್ ನಲ್ಲಿ ತಿಳಿಸಿದೆ.ಇದು ಈ ವರ್ಷದ ಜನವರಿಯಲ್ಲಿ ಬಿಡುಗಡೆಗೊಂಡಿರುವ ಎಕ್ಸ್ ಪೀರಿಯಾ ಎಕ್ಸ್ಎ2 ಮತ್ತು ಎಕ್ಸ್ಪೀರಿಯಾ ಎಕ್ಸ್ಎ ಅಲ್ಟ್ರಾ ಫೋನ್ ಗಳ ಮುಂದುವರಿದ ವರ್ಷನ್ ಆಗಿದೆ.

23ಎಂಪಿ ಕ್ಯಾಮೆರಾದ ಸೋನಿ ಎಕ್ಸ್‌ಪೀರಿಯಾ XA2 ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆ

ಸದ್ಯ ಇದರ ಬೆಲೆ ಎಷ್ಟಿರಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲದಿದ್ದರೂ ಕೂಡ ಮಧ್ಯಮ ವರ್ಗದವರ ಬಜೆಟ್ ಗೆ ಸರಿಹೊಂದುವ ಫೋನ್ ಇದಾಗಿದೆ ಎಂಬುದು ಖಚಿತ. ಈಗಾಗಲೇ ಬ್ಲಾಗ್ ಗಳು ತಿಳಿಸುತ್ತಿರುವಂತೆ ಸೋನಿ ಎಕ್ಸ್ ಪೀರಿಯಾ ಎಕ್ಸ್ಎ ಪ್ಲಸ್ ಎರಡು ವಿಭಿನ್ನ ವೇರಿಯಂಟ್ ನಲ್ಲಿ ಲಭ್ಯವಾಗುತ್ತದೆ. ಒಂದು 4ಜಿಬಿ ಮೆಮೊರಿ ಜೊತೆಗೆ 32ಜಿಬಿ ಇಂಟರ್ನಲ್ ಸ್ಟೋರೇಜ್ ಮತ್ತೊಂದು 6ಜಿಬಿ ಮೆಮೊರಿ ಮತ್ತು 64 ಜಿಬಿ ಇಂಟರ್ನಲ್ ಸ್ಟೋರೇಜ್ ನ ಆಯ್ಕೆಯಾಗಿರುತ್ತದೆ.

6 ಇಂಚ್ ಫುಲ್ HD + ಡಿಸ್‌ಪ್ಲೇ

6 ಇಂಚ್ ಫುಲ್ HD + ಡಿಸ್‌ಪ್ಲೇ

ಈ ಸ್ಮಾರ್ಟ್ ಫೋನ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 630 ಪ್ರೊಸೆಸರ್ ನ್ನು ಹೊಂದಿದೆ. ಇದು 6-ಇಂಚಿನ ಫುಲ್ HD + ಸ್ಕ್ರೀನ್ ಡಿಸ್ಲ್ಪೇ ಜೊತೆಗೆ 18:9 ಅನುಪಾತವನ್ನು ಹೊಂದಿದೆ ಮತ್ತು ಸ್ಕ್ರೀನಿನ ಆಯಸ್ಸು ಹೆಚ್ಚಿಸುವ ದೃಷ್ಟಿಯಿಂದ ಸ್ಕ್ರೀನಿಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ನ ಕೋಟಿಂಗ್ ನ್ನು ಮಾಡಲಾಗಿದೆ.

400 ಜಿಬಿವರೆಗೂ ವಿಸ್ತರಣೆ ಅವಕಾಶ

400 ಜಿಬಿವರೆಗೂ ವಿಸ್ತರಣೆ ಅವಕಾಶ

ಈಗಾಗಲೇ ತಿಳಿಸಿರುವಂತೆ ಇದು ಎರಡು ವೇರಿಯಂಟ್ ನ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಾಗುತ್ತದೆ ಮತ್ತು ಅದನ್ನು 400 ಜಿಬಿ ಯವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹೆಚ್ಚಿಸಿಕೊಳ್ಳಲು ಅವಕಾಶವಿರುತ್ತದೆ. ಇದು ಆಂಡ್ರಾಯ್ಡ್ ಓರಿಯೋ ಔಟ್-ಆಫ್-ದಿ-ಬಾಕ್ಸ್ ಆಪರೇಟಿಂಗ್ ಸಿಸ್ಟಮ್ ಮುಖಾಂತರ ರನ್ ಆಗುತ್ತದೆ . ಸೋನಿ ಎಕ್ಸ್ ಪೀರಿಯಾ ಎಕ್ಸ್ಎ ಪ್ಲಸ್ ಒಂದೇ ಸಿಮ್ ಮತ್ತು ಎರಡು ಸಿಮ್ ಕಾರ್ಡ್ ಆಯ್ಕೆಯಲ್ಲಿ ಲಭ್ಯವಿದೆ.

23ಎಂಪಿ ಕ್ಯಾಮೆರಾ

23ಎಂಪಿ ಕ್ಯಾಮೆರಾ

ಕ್ಯಾಮರಾ ವಿಚಾರವನ್ನು ಪ್ರಸ್ತಾಪಿಸುವುದಾದರೆ 23ಎಂಪಿ ಹಿಂಭಾಗದ ಕ್ಯಾಮರಾವಿದ್ದು ಇದು ಹೈಬ್ರಿಟ್ ಆಟೋಫೋಕಸ್, 4ಕೆ ವೀಡಿಯೋ ರೆಕಾರ್ಡಿಂಗ್ ಗೆ ಅವಕಾಶ ಮತ್ತು f/2.0 ದ್ಯುತಿರಂಧ್ರವನ್ನು ಹೊಂದಿದೆ. ಇದು 120ಎಫ್ ಪಿಸಿ ಸ್ಲೋ ಮೋಷನ್ ವೀಡಿಯೋ ರೆಕಾರ್ಡಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ. ಮುಂಭಾಗದಲ್ಲಿ ಎಕ್ಸ್ ಪೀರಿಯಾ ಎಕ್ಸ್ ಎ 2 ಪ್ಲಸ್ 8ಎಂಪಿ ಕ್ಯಾಮರಾವನ್ನು ಒಳಗೊಂಡ ಸೆಲ್ಫೀ ಕ್ಯಾಮರಾವನ್ನು ಹೊಂದಿದೆ ಮತ್ತು 120 ಡಿಗ್ರಿ ಸೂಪರ್ ವೈಡ್ ಆಂಗಲ್ ಮತ್ತು f/2.4 ದ್ಯುತಿರಂಧ್ರವನ್ನು ಒಳಗೊಂಡಿರುತ್ತದೆ.

ಕನೆಕ್ಟಿವಿಟಿ

ಕನೆಕ್ಟಿವಿಟಿ

ಕನೆಕ್ಟಿವಿಟಿ ವಿಚಾರವನ್ನು ಹೇಳುವುದಾದರೆ, ಎಕ್ಸ್ ಪೀರಿಯಾ ಎಕ್ಸ್ ಎ ಪ್ಲಸ್ LTE, ವೈ-ಫೈ, ಬ್ಲೂಟೂತ್ 5.0, NFC, ಮತ್ತು ಯುಎಸ್ ಬಿ ಟೈಪ್-ಸಿ ಯನ್ನು ಒಳಗೊಂಡಿದೆ. ಇದು ಹಿಂಭಾಗದಲ್ಲಿ ವೇಗದ ಆಕ್ಸಿಸ್ ಹೊಂದಲು ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಕೂಡ ಹೊಂದಿದೆ. ಸ್ಮಾರ್ಟ್ ಫೋನಿನ ತೂಕ 205 ಗ್ರಾಂ ಆಗಿದ್ದು, ಸುತ್ತಳತೆ 157x75x9.6ಎಂಎಂ ಆಗಿದೆ.

ಉತ್ತಮ ಬ್ಯಾಟರಿ

ಉತ್ತಮ ಬ್ಯಾಟರಿ

ಎಕ್ಸ್ ಪೀರಿಯಾ ಎಕ್ಸ್ಎ2 ಪ್ಲಸ್ 3580mAH ಬ್ಯಾಟರಿಯನ್ನುಹೊಂದಿದೆ. ಈ ಫೋನ್ 4 ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ ಅವುಗಳೆಂದರೆ ಕಪ್ಪು, ಬೆಳ್ಳಿಯ ಬಣ್ಣ, ಚಿನ್ನದ ಬಣ್ಣ ಮತ್ತು ಹಸಿರು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗುತ್ತದೆ. ನಿಮ್ಮ ಬಜೆಟ್ ಮತ್ತು ಇದರ ವೈಶಿಷ್ಟ್ಯಗಳು ನಿಮಗೂ ಇಷ್ಟವಾದರೆ ತಡ ಮಾಡುವ ಅಗತ್ಯವಿಲ್ಲ. ಖರೀದಿಸಲು ರೆಡಿಯಾಗಬಹುದು.

Best Mobiles in India

English summary
Sony Xperia XA2 Plus mid-range phone with 23MP primary announced in London. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+