ಸೋನಿ ಏಕ್ಸ್‌ಪೀರಿಯಾ XZ ಪ್ರೀಮಿಯಮ್ ಫಸ್ಟ್ ಲುಕ್ ವಿಡಿಯೋ..!!
ಟಾಪ್ ಎಂಟ್ ಸ್ಮಾರ್ಟ್‌ಫೋನ್‌ಗಳು ಈ ಪಟ್ಟಿಯಲ್ಲಿ LG ಮತ್ತು ಸ್ಯಾಮ್‌ಸಂಗ್ ನಂತರದಲ್ಲಿ ಸೋನಿ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಸದ್ದು ಶುರುವಾಗಿದೆ.
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ದಿನಕ್ಕೊಂದು ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗುತ್ತಿದೆ. ಬಜೆಟ್ ಸ್ಮಾರ್ಟ್‌ಫೋನ್‌ಗಳು, ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳ ಹಾಗೂ ಟಾಪ್ ಎಂಟ್ ಸ್ಮಾರ್ಟ್‌ಫೋನ್‌ಗಳು ಈ ಪಟ್ಟಿಯಲ್ಲಿವೆ. LG ಮತ್ತು ಸ್ಯಾಮ್‌ಸಂಗ್ ನಂತರದಲ್ಲಿ ಸೋನಿ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಸದ್ದು ಶುರುವಾಗಿದೆ.

ಓದಿರಿ: ಈ ಸ್ಟೋರಿ ನೋಡಿದ ಮೇಲೆ ನೀವು ಉಬರ್ ಬುಕ್ ಮಾಡೊದು ಡೌಟ್..!!!
ಸದ್ಯ ಇದೇ ಮಾದರಿಯಲ್ಲಿ ಜೂನ್ 12 ರಂದು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಸೋನಿ ಏಕ್ಸ್‌ಪೀರಿಯಾ XZ ಪ್ರೀಮಿಯಮ್ ಫಸ್ಟ್ ಲುಕ್ ವಿಡಿಯೋವನ್ನು ನಿಮಗಾಗಿ ಕನ್ನಡದಲ್ಲಿ ನೀಡುವ ಪ್ರಯತ್ನವನ್ನು ನಾವಿಲ್ಲಿ ಮಾಡಿದ್ದೇವೆ. ಈ ಫೋನ್ ವಿನ್ಯಾಸ, ಕ್ಯಾಮೆರಾ ಮುಂತಾದವುಗಳ ಬಗ್ಗೆ ವಿವರವನ್ನು ನೀಡಿದ್ದೇವೆ.
ಇಲ್ಲಿದೇ ನೋಡಿ ಸೋನಿ ಏಕ್ಸ್‌ಪೀರಿಯಾ XZ ಪ್ರೀಮಿಯಮ್ ಫಸ್ಟ್ ಲುಕ್ :
ಓದಿರಿ: ಶೀಘ್ರವೇ 4G VoLTE ಸಪೋರ್ಟ್ ಜಿಯೋ ಫೀಚರ್ಫೋನ್ ಬಿಡುಗಡೆ ..!!! ಬೆಲೆ ಕುರಿತ ಸಂಪೂರ್ಣ ಮಾಹಿತಿ..!!
ವಿಶ್ವದ ಮೊದಲ 4K HDR ಡಿಸ್‌ಪ್ಲೇ ಹೊಂದಿರುವ ಸೋನಿ ಏಕ್ಸ್‌ಪೀರಿಯಾ XZ ಪ್ರೀಮಿಯಮ್ ಸ್ಮಾರ್ಟ್‌ಫೋನಿನಲ್ಲಿ 4GB RAM ಇದ್ದು, 64 GB ಇಂಟರ್ನಲ್ ಮೆಮೊರಿಯಿದ್ದು, ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ಸ್ನಾಪ್‌ಡ್ರಾಗನ್ 835 ಚಿಪ್‌ಸೆಟ್ ಕಾಣಬಹುದಾಗಿದೆ. ಈ ಪೋನ್ ಜೂನ್ 12ಕ್ಕೆ ಮಾರುಕಟ್ಟೆಗೆ ಬರಲಿದ್ದು, ಬೆಲೆ ರೂ.59,990 ಆಗಿದೆ.


Click it and Unblock the Notifications
