Home
ಮೊಬೈಲ್

ಸೋನಿ ಸ್ಮಾರ್ಟ್‌ಫೋನ್‌ ಖರೀದಿಸಲು ಇದು ಸುಸಮಯ..! ಬೆಲೆಯಲ್ಲಿ ಭಾರೀ ಕಡಿತ..!

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿರುವ ಸೋನಿ ಲಾಂಚ್ ಮಾಡಿರುವ ಸ್ಮಾರ್ಟ್ ಫೋನ್ ಗಳು ಮತ್ತೊಮ್ಮೆ ಬಳಕೆದಾರರಿಗೆ ಹತ್ತಿರವಾಗಲಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಂಡಿರುವ ಸೋನಿ ಎಕ್ಸ್ ಪೀರಿಯಾ XZ1 ಮತ್ತು ಸೋನಿ ಎಕ್ಸ್ ಪೀರಿಯಾ XZ ಪ್ರೀಮಿಯಮ್ ಸ್ಮಾರ್ಟ್ ಫೋನ್ ಗಳ ಬೆಲೆಯನ್ನು ಸೋನಿ ಕಡಿಮೆ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ದರ ಸಮರಕ್ಕೆ ತನ್ನದೆ ಕೊಡುಗೆಯನ್ನು ನೀಡಲು ಮುಂದಾಗಿದೆ.

ಸೋನಿ ಸ್ಮಾರ್ಟ್‌ಫೋನ್‌ ಖರೀದಿಸಲು ಇದು ಸುಸಮಯ..! ಬೆಲೆಯಲ್ಲಿ ಭಾರೀ ಕಡಿತ..!

ಸದ್ಯ ಮಾರುಕಟ್ಟೆಯಲ್ಲಿ ಚೀನಾ ಸ್ಮಾರ್ಟ್ ಫೋನ್ ಗಳ ಬೇಡಿಕೆಯೂ ಹೆಚ್ಚಾಗಿರುವ ಹಿನ್ನಲೆಯಲ್ಲಿ ಬೇರೆ ಎಲ್ಲಾ ಟಾಪ್ ಎಂಡ್ ಸ್ಮಾರ್ಟ್ ಫೋನ್ ಕಂಪನಿಗಳು ತಮ್ಮ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಇಳಿಕೆಯನ್ನು ಮಾಡುವ ಮೂಲಕ ಬಳಕೆದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿವೆ, ಇದೇ ಮಾದರಿಯಲ್ಲಿ ಸೋನಿ ಸಹ ರನ್ನ ಬೇಡಿಕೆಯನ್ನು ಅಧಿಕ ಮಾಡಿಕೊಳ್ಳುವ ಸಲುವಾಗಿ ಹೊಸ ಮಾದರಿಯಲ್ಲಿ ದರಗಳನ್ನು ಪ್ರಕಟಿಸಿದೆ.

ಸೋನಿ ಎಕ್ಸ್ ಪೀರಿಯಾ XZ1 ಮತ್ತು ಸೋನಿ ಎಕ್ಸ್ ಪೀರಿಯಾ XZ ಪ್ರೀಮಿಯಮ್ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ರೂ.10000ವನ್ನು ಕಡಿಮೆ ಮಾಡಿದ್ದು, ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಅನ್ನು ಮಾರಾಟ ಮಾಡಲು ಮುಂದಾಗಿದೆ. ರೂ.34,990 ಹಾಗೂ ರೂ.39,990ಕ್ಕೆ ಸದ್ಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ ಫೋನ್ ಗಳು ಮಾರಾಟವಾಗುತ್ತಿವೆ.

ಈ ಹಿಂದೆ ಸೋನಿ ಎಕ್ಸ್ ಪೀರಿಯಾ XZ1 ಮತ್ತು ಸೋನಿ ಎಕ್ಸ್ ಪೀರಿಯಾ XZ ಪ್ರೀಮಿಯಮ್ ಸ್ಮಾರ್ಟ್ ಫೋನ್ ಗಳು ಕ್ರಮವಾಗಿ ರೂ.44,990 ಹಾಗೂ ರೂ.49,990ಕ್ಕೆ ಮಾರಾಟವಾಗುತ್ತಿದ್ದವು ಎನ್ನಲಾಗಿದೆ.

ಇದೇ ಮಾದರಿಯಲ್ಲಿ ಸೋನಿ ಎಕ್ಸ್ ಪೀರಿಯಾ XA1 ಮತ್ತು ಎಕ್ಸ್ ಪೀರಿಯಾ XA1 Plus ಸ್ಮಾರ್ಟ್ ಫೋನ್ ಬೆಲೆಯಲ್ಲಿಯೂ ಕಡಿತವನ್ನು ಮಾಡಿದ್ದು, ಖರೀದಿಸುವವರಿಗೆ ಈ ಸ್ಮಾರ್ಟ್ ಫೋನ್ ಗಳ ಮೇಲೆ ರೂ. 5000 ಕಡಿತವನ್ನು ಘೋಷಣೆ ಮಾಡಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಸದ್ಯ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಸೋನಿ ಬೆಸ್ಟ್ ಆಯ್ಕೆ ಎನ್ನಲು ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ.

ಈಗಾಗಲೇ ಮಾರುಕಟ್ಟೆಯಲ್ಲಿ ಚೀನಾ ಸ್ಮಾರ್ಟ್ ಫೋನ್ ಗಳ ಹಾವಳಿಯೂ ಹೆಚ್ಚಾಗಿದ್ದು, ಸೋನಿ ಸ್ಮಾರ್ಟ್ ಫೋನ್ ಗಳನ್ನು ಕೇಳುವವರಿಲ್ಲ, ಈ ಹಿನ್ನಲೆಯಲ್ಲಿ ಬೇಡಿಕೆ ಸೃಷ್ಟಿಸಿಕೊಳ್ಳಲು ಈ ಮಾದರಿಯಲ್ಲಿ ಬೆಲೆ ಕಡಿತವನ್ನು ಮಾಡಲಿದೆ ಎನ್ನಲಾಗಿದೆ.

Best Mobiles in India

English summary
Sony Xperia XZ1, Xperia XZ Premium get Rs 10,000 price cut in India. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+