ಮಾರುಕಟ್ಟೆಗೆ ಮತ್ತೊಂದು ಟಾಪ್ ಎಂಡ್ ಸ್ಮಾರ್ಟ್ ಫೋನ್ ನೀಡಿದ ಸೋನಿ..!
ಭಾರತೀಯ ಮಾರುಕಟ್ಟೆಯಲ್ಲಿ ನಾಪತ್ತೆಯಾದ ಸ್ಥಿತಿಯಲ್ಲಿದ್ದ ಜಪಾನ್ ಮೂಲದ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಸೋನಿ, ಮತ್ತೊಂದು ಸ್ಮಾರ್ಟ್ ಫೋನ್ ನೊಂದಿಗೆ ಮಾರುಕಟ್ಟೆಯನ್ನು ಪ್ರವೇಶ ಮಾಡಲು ಮುಂದಾಗಿದೆ. ಹೊಸದಾಗಿ ಸೋನಿ ಎಕ್ಸ್ ಪೀರಿಯಾ XZ2 ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಇದೊಂದು ಫಾಗ್ ಶಿಪ್ ಫೋನ್ ಆಗಲಿದ್ದು, 4K HDR ಗುಣಮಟ್ಟದ ಸಿನಿಮಾ ರೆಕಾರ್ಡಿಂಗ್ ಆಯ್ಕೆ ಹೊಂದಿರುವ ವಿಶ್ವದ ಮೊದಲ ಫೋನ್ ಎನ್ನಿಸಿಕೊಳ್ಳಲಿದೆ.

ಸೋನಿ ಎಕ್ಸ್ ಪೀರಿಯಾ XZ2 ಸ್ಮಾರ್ಟ್ ಫೋನ್ ದುಬಾರಿ ಬೆಲೆಗೆ ಮಾರಾಟವಾಗಲಿದ್ದು, ರೂ.72,990ಕ್ಕೆ ಲಭ್ಯವಿರಲಿದೆ. ಆಗಸ್ಟ್ 1 ರಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ. ಸೋನಿ ಸೆಂಟರ್ ಗಳು ಸೇರಿದಂತೆ ಎಲ್ಲಾ ಮಳಿಗೆಗಳಿಯೂ ಲಭ್ಯವಿರಲಿದೆ. ಸೋನಿ ಎಕ್ಸ್ ಪೀರಿಯಾ XZ2 ಸ್ಮಾರ್ಟ್ ಫೋನ್ 5.7 ಇಂಚಿನ FHD+ ಗುಣಮಟ್ಟದ ಟ್ರಲೂಮಿನಸ್ ಡಿಸ್ ಪ್ಲೇಯನ್ನು ಹೊಂದಿದೆ. ಅಲ್ಲದೇ ಇದು 18:9 ಅನುಪಾತದಿಂದ ಕೂಡಿದೆ ಎನ್ನಲಾಗಿದೆ. ಇದಕ್ಕೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸುರಕ್ಷತೆಯನ್ನು ನೀಡಲಾಗಿದೆ.
ಸೋನಿ ಎಕ್ಸ್ ಪೀರಿಯಾ XZ2 ಸ್ಮಾರ್ಟ್ ಫೋನಿನಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದು ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಅಲ್ಲದೇ 6 GB RAM ನೊಂದಿಗೆ ಕಾರ್ಯನಿರ್ವಹಿಸುವ ಈ ಪೋನಿನಲ್ಲಿ 64 GB ಇಂಟರ್ನಲ್ ಮೆಮೊರಿಯನ್ನು ಅಳವಡಿಸಲಾಗಿದೆ. ಇದಲ್ಲದೇ ಸೋನಿ ಎಕ್ಸ್ ಪೀರಿಯಾ XZ2 ಸ್ಮಾರ್ಟ್ ಫೋನಿನ ಮತ್ತೊಂದು ವಿಶೇಷತೆ ಎಂದರೆ 400 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.
ಇದಲ್ಲದೇ ಸೋನಿ ಎಕ್ಸ್ ಪೀರಿಯಾ XZ2 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ 19 MP ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದ್ದು, 3D ಸೆಲ್ಫಿ ತೆಗೆದುಕೊಳ್ಳಬಹುದಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನಿನಲ್ಲಿ ಉತ್ತಮ ಗುಣಮಟ್ಟದ 4K HDR ಗುಣಮಟ್ಟದ ಸಿನಿಮಾ ರೆಕಾರ್ಡಿಂಗ್ ಮಾಡಬಹುದಾಗಿದೆ.
ಇದಲ್ಲದೇ ಮುಂಭಾಗದಲ್ಲಿ ಸ್ಪೀಕರ್ ಅನ್ನು ನೀಡಲಾಗಿದ್ದು, ಗೂಗಲ್ ಲೆನ್ಸ್ ನಲ್ಲಿ ಮೊಬೈಲ್ ಜೋಡಿಸಿ ವಿಡಿಯೋಗಳನ್ನು ನೋಡಿದ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಧ್ವನಿಯನ್ನು ಕೇಳಬಹುದಾಗಿದೆ. ಸೋನಿ ಎಕ್ಸ್ ಪೀರಿಯಾ XZ2 ಸ್ಮಾರ್ಟ್ ಫೋನಿನೊಂದಿಗೆ ವೈರ್ ಲೈಸ್ ಚಾರ್ಚರ್ ಲಭ್ಯವಿದೆ.


Click it and Unblock the Notifications








