ಸೋನಿಗೆ ಸರಿಸಾಟಿಯೇ ಇಲ್ಲ: ಸಾಕ್ಷಿಯಾದ ಸ್ಮಾರ್ಟ್‌ಫೋನ್ ಇಲ್ಲಿದೆ...!
ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ಮಾದರಿಯಲ್ಲಿ ಸೋನಿ ಹೊಸದೊಂದು ಪ್ರಿಮಿಯಮ್ ಸ್ಮಾರ್ಟ್‌ಫೋನ್‌ವೊಂದನ್ನು ಲಾಂಚ್ ಮಾಡಿದೆ. ಸೋನಿ ಎಕ್ಸ್‌ಪೀರಿಯಾ XZ3 ಸ್ಮಾರ್ಟ್‌ಫೋನ್ ಹೊಸ ಮಾದರಿಯಲ್ಲಿ ಕಾಣಿಸಿಕೊಂಡಿದ್ದು, ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಈ ಹಿಂದೆ ಕಾಣಿಸಿಕೊಂಡಿದ್ದ ಸೋನಿ ಎಕ್ಸ್‌ಪೀರಿಯಾ XZ2 ಸ್ಮಾರ್ಟ್‌ಫೋನಿನ ಮುಂದುವರೆದ ಆವೃತ್ತಿಯೂ ಇದಾಗಿದೆ. ಸೋನಿ ಎಕ್ಸ್‌ಪೀರಿಯಾ XZ3 ಸ್ಮಾರ್ಟ್‌ಫೋನ್ ತನ್ನದೇ ಆದ ವಿಶೇಷತೆಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಎನ್ನಿಸಿಕೊಂಡಿರುವ ಆಯ್ಕೆಗಳನ್ನು ಇದರಲ್ಲಿ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೂ ಮುಂದಿದೆ.

ಲಾಂಚ್:
ಸದ್ಯ ಜರ್ಮನಿಯ ಬರ್ಲಿನ್ ನಗರದಲ್ಲಿ ನಡೆಯುತ್ತಿರುವ IFA 2018 ಕಾರ್ಯಕ್ರಮದಲ್ಲಿ ಸೋನಿ ಎಕ್ಸ್‌ಪೀರಿಯಾ XZ3 ಸ್ಮಾರ್ಟ್‌ಫೋನ್ ಸ್ಮಾರ್ಟ್‌ಫೋನ್ ಲಾಂಚ್ ಆಗಿದ್ದು, ಈ ತಿಂಗಳ ಅಂತ್ಯದ ವೇಳೆಗೆ ವಿವಿಧ ಧೇಶಗಳ ಮಾರುಕಟ್ಟೆಗಳಲ್ಲಿ ಕಾಣಿಸಿಕೊಳ್ಳಲಿದೆ. ಭಾರತೀಯ ಮಾರುಕಟ್ಟೆಯಲ್ಲಿಯೂ ಶೀಘ್ರವೇ ಈ ಸ್ಮಾರ್ಟ್‌ಪೋನ್ ಲಭ್ಯವಿರಲಿದೆ.


ಆಂಡ್ರಾಯ್ಡ್ ಪೈ:
ಸೋನಿ ಎಕ್ಸ್‌ಪೀರಿಯಾ XZ3 ಸ್ಮಾರ್ಟ್‌ಫೋನ್ ಸದ್ಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಟಾಪ್ ಎಂಡ್ ಆಂಡ್ರಾಯ್ಡ್ ಆವೃತ್ತಿಯಾದ ಆಂಡ್ರಾಯ್ಡ್ ಪೈನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಪ್ರೋಸೆಸರ್ ಎನ್ನಿಸಿಕೊಂಡಿರುವ ಸ್ನಾಪ್‌ಡ್ರಾಗನ್ 845 ಪ್ರೊಸೆಸರ್ ಅನ್ನು ಒಳಗೊಂಡಿದೆ.

ವಿಶೇಷತೆಗಳು:
ಸೋನಿ ಎಕ್ಸ್‌ಪೀರಿಯಾ XZ3 ಸ್ಮಾರ್ಟ್‌ಫೋನಿನಲ್ಲಿ 6 ಇಂಚಿನ QHD+ HDR OLED Triluminos ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದಲ್ಲದೇ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಇದರಲ್ಲಿ ನೀಡಲಾಗಿದೆ. ಇದಲ್ಲದೇ IP65/68 ಜಲ ಮತ್ತು ಧೂಳು ನಿರೋಧಕವನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.

ಹಾರ್ಡ್‌ವೇರ್:
ಇದಲ್ಲದೇ ಸೋನಿ ಎಕ್ಸ್‌ಪೀರಿಯಾ XZ3 ಸ್ಮಾರ್ಟ್‌ಫೋನಿನಲ್ಲಿ 4GB RAM ಹಾಗೂ 64GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 512 GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಕ್ಯಾಮೆರಾ:
ಸೋನಿ ಎಕ್ಸ್‌ಪೀರಿಯಾ XZ3 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 19MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರಲ್ಲಿ 960fps ಸೂಪರ್ ಸ್ಲೋ ಮೋಷನ್ ವೀಡಿಯೋ ರೆಕಾರ್ಡ್ ಮಾಡಬಹುದಾಗಿದೆ. FHD ಮತ್ತು HD ಗುಣಮಟ್ಟದ ವೀಡಿಯೋವನ್ನು ರೆಕಾರ್ಡ್ ಮಾಡುವುದಲ್ಲದೇ ಮುಂಭಾಗದಲ್ಲಿ 13MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇದರೊಂದಿಗೆ AI(ಕೃತಕ ಬುದ್ದಿಮತ್ತೆ)ಯನ್ನು ಅಳವಡಿಸಲಾಗಿದೆ.

ನಾಲ್ಕು ಬಣ್ಣ:
ಬ್ಲ್ಯಾಕ್, ವೈಟ್ ಸಿಲ್ವರ್, ಫೋರೆಸ್ಟ್ ಗ್ರೀನ್, ಬಾರ್ಡೆಕ್ಸ್ ರೆಡ್ ಸೇರಿದಂತೆ ನಾಲ್ಕು ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ. ಅಲ್ಲದೇ 3330mAh ಬ್ಯಾಟರಿಯನ್ನು ನೀಡಲಾಗಿದೆ. ಇದಲ್ಲದೇ ವೇಗದ ಚಾರ್ಜಿಂಗ್‌ಗಾಗಿ ಕ್ವಿಕ್ ಚಾರ್ಜ್ 3.0 ಸೋನಿ ಎಕ್ಸ್‌ಪೀರಿಯಾ XZ3 ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ.


Click it and Unblock the Notifications



