Home
ಮೊಬೈಲ್

ಸದ್ದಿಲ್ಲದೇ ಬಿಡುಗಡೆಗೆ ಸಿದ್ಧವಾಗಿದೆ ಸೋನಿ ಟಾಪ್ ಎಂಡ್ ಸ್ಮಾರ್ಟ್ ಫೋನ್..!

By Srinidhi

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸೋನಿ ಅಬ್ಬರವೂ ಕಡಿಮೆಯಾಗುತ್ತಾ ಸಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ಕಳೆದ ಕೆಲವು ದಿನಗಳಿಂದ ಸೋನಿ ಯಾವುದೇ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡದೆ ಇರುವುದು ಈ ವಾದಕ್ಕೆ ಸಾಕ್ಷಿಯನ್ನು ನೀಡುತ್ತಿದೆ. ಆದರೆ ಮೂಲಗಳ ಪ್ರಕಾರ ಸೋನಿ ಸದ್ದಿಲ್ಲದೇ ಟಾಪ್ ಎಂಡ್ ಸ್ಮಾರ್ಟ್ ಫೋನ್ ವೊಂದನ್ನು ಲಾಂಚ್ ಮಾಡಲು ಮುಂದಾಗಿದೆ.

ಬಿಡುಗಡೆಗೆ ಸಿದ್ಧವಾಗಿದೆ ಸೋನಿ ಟಾಪ್ ಎಂಡ್ ಸ್ಮಾರ್ಟ್ ಫೋನ್..!

ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ವಿಶೇಷತೆಗಳನ್ನು ಹೊಂದಿರುವ ಸೋನಿ ಎಕ್ಸ್ ಪೀರಿಯಾ XZ3 ಸ್ಮಾರ್ಟ್ ಪೋನ್ ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಈಗಾಗಲೇ ಸೋನಿ ಎಕ್ಸ್ ಪೀರಿಯಾ XZ3 ಸ್ಮಾರ್ಟ್ ಪೋನ್ ನಿರ್ಮಾಣ ಹಂತವನ್ನು ಪೂರೈಸಿದ್ದು, ಲಾಂಚ್ ಆಗುವ ಸನಿಹದಲ್ಲಿದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್ ಫೋನ್ ಕುರಿತ ಸಂಪೂರ್ಣ ಮಾಹಿತಿಯೂ ಮುಂದಿನಂತಿದೆ.

ಆಂಡ್ರಾಯ್ಡ್ ಪಿ:

ಆಂಡ್ರಾಯ್ಡ್ ಪಿ:

ಮೂಲಗಳ ಪ್ರಕಾರ ಸೋನಿ ಎಕ್ಸ್ ಪೀರಿಯಾ XZ3 ಸ್ಮಾರ್ಟ್ ಪೋನ್ ಆಂಡ್ರಾಯ್ಡ್ ಪಿ ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಿಗೆ ಸಾಕಷ್ಟು ಸ್ಪರ್ಧೆಯನ್ನು ನೀಡಲಿದ್ದು, ಇದಕ್ಕಾಗಿಯೇ ಹಲವು ಹೊಸ ವಿಶೇಷತೆಗಳನ್ನು ಒಳಗೊಂಡಿದೆ.

ಮೊದಲ 18:9 ಫೋನ್:

ಮೊದಲ 18:9 ಫೋನ್:

ಸೋನಿ ಲಾಂಚ್ ಮಾಡುತ್ತಿರುವ ಮೊದಲ 18:9 ಅನುಪಾತದ ಡಿಸ್ ಪ್ಲೇಯನ್ನು ಹೊಂದಿರುವ ಫೋನ್ ಎನ್ನುವ ಖ್ಯಾತಿಗೆ ಸೋನಿ ಎಕ್ಸ್ ಪೀರಿಯಾ XZ3 ಸ್ಮಾರ್ಟ್ ಪೋನ್ ಪಾತ್ರವಾಗಲಿದ್ದು, 5.9 ಇಂಚಿನ QHD+ ಗುಣಮಟ್ಟದ ಡಿಸ್ ಪ್ಲೇ ಇದಾಗಲಿದೆ. ಉತ್ತಮವಾದ ವಿಡಿಯೋ ಕ್ವಾಲಿಟಿ ಮತ್ತು ಉತ್ತಮ ಗೇಮಿಂಗ್ ಕ್ವಾಲಿಟಿಯನ್ನು ಈ ಸ್ಮಾರ್ಟ್ ಫೋನ್ ಹೊಂದಿದೆ ಎನ್ನಲಾಗಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಮಾರುಕಟ್ಟೆಯಲ್ಲಿ ಟಾಪ್ ಪ್ರೋಸೆಸರ್ ಎನ್ನಿಸಿಕೊಂಡಿರುವ ಸ್ನಾಪ್ ಡ್ರಾಗನ್ 845 ಚಿಪ್ ಸೆಟ್ ಅನ್ನು ಸೋನಿ ಎಕ್ಸ್ ಪೀರಿಯಾ XZ3 ಸ್ಮಾರ್ಟ್ ಪೋನಿನಲ್ಲಿ ಅಳವಡಿಸಲಾಗಿದ್ದು, ಇದು 2.7GHz ವೇಗವನ್ನು ಹೊಂದಿದೆ. ಇದರೊಂದಿಗೆ ಆಡ್ರಿನೋ 630 GPUವನ್ನು ನೀಡಲಾಗಿದೆ. ಹೀಗಾಗಿ ಹೆಚ್ಚಿನ ಗಾಫಿಕ್ಸ್ ಅನ್ನು ಲೀಲಾಜಾಲವಾಗಿ ಬಳಕೆ ಮಾಡಿಕೊಳ್ಳಬಹುದು.

ಡ್ಯುಯಲ್ ಕ್ಯಾಮೆರಾ ಸೆಟಪ್:

ಡ್ಯುಯಲ್ ಕ್ಯಾಮೆರಾ ಸೆಟಪ್:

ಸೋನಿ ಎಕ್ಸ್ ಪೀರಿಯಾ XZ3 ಸ್ಮಾರ್ಟ್ ಪೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದ್ದು, 19 MP ಮತ್ತು 13MP ಲೆನ್ಸ್ ಅನ್ನು ಹೊಂದಿದ್ದು, 4K ವಿಡಿಯೋ ರೆಕಾರ್ಡಿಂಗ್ ಸೇರಿಂದತೆ ಹಲವು ಆಯ್ಕೆಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 13 MP ಕ್ಯಾಮೆರಾವನ್ನು ನೀಡಲಾಗಿದೆ.

ಶೀಘ್ರವೇ ಲಾಂಚ್:

ಶೀಘ್ರವೇ ಲಾಂಚ್:

ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳು ಸದ್ದು ಮಾಡುತ್ತಿದ್ದು, ಅವುಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಸೋನಿ ಎಕ್ಸ್ ಪೀರಿಯಾ XZ3 ಸ್ಮಾರ್ಟ್ ಪೋನ್ ಅನ್ನು ಲಾಂಚ್ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಿದೆ. ಮುಂದಿನ ತಿಂಗಳ ಅಂತ್ಯದಲ್ಲಿ ಈ ಸ್ಮಾರ್ಟ್ ಫೋನ್ ಲಾಂಚ್ ಆಗುವ ಸಾಧ್ಯತೆ ಇದೆ.

Best Mobiles in India

English summary
Sony xperia XZ3 with 18:9 Display, snapdragon 845. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+