ಸೋನಿ ಎಕ್ಸ್‌ಪೀರಿಯಾ Z1 ವಿಶೇಷತೆವುಳ್ಳ ಫೋನ್ ಹೇಗೆ?

By Shwetha
|

ಮೊಬೈಲ್ ಫೋನ್‌ಗಳ ಇತಿಹಾಸವನ್ನು ಕೆದಕುತ್ತಾ ಹೋದರೆ ಹೆಜ್ಜೆಗುರುತನ್ನು ಊಹಿಸುವುದು ತುಸು ಕಷ್ಟವೇ ಸರಿ. ಅಷ್ಟೊಂದು ಸಾಧನೆಗಳನ್ನು ಈ ಜಂಗಮವಾಣಿ ಸಾಧಿಸಿದೆ. ಮೊದಲೆಲ್ಲಾ ಫೀಚರ್ ಪೋನ್‌ಗಳು ಮಾಡುತ್ತಿದ್ದ ಕಮಾಲನ್ನು ನಂತರದ ಆವೃತ್ತಿಯಾಗಿರುವ ಸ್ಮಾರ್ಟ್‌ಫೋನ್‌ಗಳು ಮಾಡುತ್ತಿವೆ.

ಹೌದು ಅತ್ಯಾಧುನಿಕ ಓಎಸ್‌ಗಳಿಂದ ಬಳಕೆದಾರರಲ್ಲಿ ತನ್ನ ಉತ್ಪನ್ನದ ಗರಿಮೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಸ್ಮಾರ್ಟ್‌ಫೋನ್‌ಗಳು ಇಂದು ಅತ್ಯಾಧುನಿಕವಾಗಿ ಮಾರುಕಟ್ಟೆಯಲ್ಲಿ ಪೈಫೋಟಿಯನ್ನು ಒಡ್ಡುತ್ತಿವೆ. ಖರೀದಿಸುವುದಾದರೆ ಸ್ಮಾರ್ಟ್‌ಫೋನ್ ಖರೀದಿಯನ್ನೇ ಮಾಡಬೇಕೆಂಬ ತೀರ್ಮಾನವನ್ನು ಗ್ರಾಹಕರಲ್ಲಿ ಮೂಡುವಂತೆ ಈ ಫೋನ್‌ಗಳು ಮಾಡುತ್ತಿವೆ.

ಇನ್ನು ಸ್ಮಾರ್ಟ್‌ಫೋನ್ ಕಂಪೆನಿಗಳತ್ತ ನಾವು ಮುಖ ಮಾಡುವುದಾದರೆ ಹೆಚ್ಚು ಮುಂದಿನ ಸ್ಥಾನದಲ್ಲಿರುವುದು ಆಪಲ್ ಮತ್ತು ಸ್ಯಾಮ್‌ಸಂಗ್ ಆಗಿದೆ. ಇವೆರಡೂ ಕಂಪೆನಿಗಳು ತಮ್ಮ ಉತ್ಪಾದನೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದೇ ರೀತಿಯ ಅನುಸರಣೆಯನ್ನು ಅನುಸರಿಸಿಕೊಂಡು ಬರುತ್ತಿವೆ. ಇದೇ ಸಾಲಿಗೆ ಸೇರಲಿರುವ ಇನ್ನೊಂದು ಜಪಾನೀ ಕಂಪೆನಿ ಸೋನಿಯಾಗಿದೆ. ಸೋನಿಯು ಇತ್ತೀಚೆಗೆ ನ್ಯೂ ಎಕ್ಸ್‌ಪೀರಿಯಾ Z1 ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಿದ್ದು ಸದ್ಯಕ್ಕೆ ಸದ್ದು ಮಾಡುತ್ತಿರುವ ಎಚ್‌ಟಿಸಿ ಒನ್ ಮಿನಿ ಹಾಗೂ ಗ್ಯಾಲಕ್ಸಿ ಎಸ್4 ಮಿನಿಗೆ ಭರ್ಜರಿ ಪೈಪೋಟಿಯನ್ನು ನೀಡುತ್ತಿದೆ.

ಹಾಗಿದ್ದರೆ ನ್ಯೂ ಎಕ್ಸ್‌ಪೀರಿಯಾ Z1 ನಲ್ಲಿ ಅಂತಹ ವಿಶೇಷತೆ ಏನಿದೆ ಎಂಬುದನ್ನು ಮನಗಾಣುವ ತುಡಿತ ನಿಮ್ಮಲ್ಲಿದ್ದರೆ ಈ ಸ್ಲೈಡ್‌ಗಳತ್ತ ಗಮನ ಹರಿಸಿ.

#1

#1

ಈಗ ಹೆಚ್ಚು ಉತ್ಪನ್ನಗಳಲ್ಲಿ ಬಳಕೆಯಲ್ಲಿರುವ ಮಿನಿ ಪದವನ್ನು ಬಳಸದೆ ಸೋನಿಯು ಕಾಂಪ್ಯಾಕ್ಟ್ ಪದವನ್ನು ತನ್ನ ಉತ್ಪನ್ನದ ಡಿವೈಸ್‌ಗಳಲ್ಲಿ ಬಳಸುತ್ತಿದೆ. ಹಿಂದಿನ ಎಕ್ಸ್‌ಪೀರಿಯಾ Z1 ವನ್ನು ಹೋಲುವಂತೆ ಸದ್ಯದ ಸೋನಿ ನ್ಯೂ ಎಕ್ಸ್‌ಪೀರಿಯಾ Z1 ಕಂಡುಬಂದಿದೆ. ಇದು ನಾಲ್ಕು ಉನ್ನತ ಬಣ್ಣಗಳಲ್ಲಿ ಬಂದಿದ್ದು ಕಪ್ಪು, ಬಿಳಿ, ಪಿಂಕ್ ಮತ್ತು ಲಿಂಬೆಯ ಬಣ್ಣದಲ್ಲಿವೆ.

#2

#2

ಇನ್ನೂ ಸ್ವಲ್ಪ ನಿಖರವಾಗಿ ಹೇಳಬೇಕೆಂದರೆ, ಸೋನಿ ಎಕ್ಸ್‌ಪೀರಿಯಾ Z1 ಕಾಂಪ್ಯಾಕ್ಟ್ ತನ್ನದೇ ಹಿಂದಿನ ಆವೃತ್ತಿಯಾದ ಎಕ್ಸ್‌ಪೀರಿಯಾ Z1 ನ ಪಡಿಯಚ್ಚಿನಂತಿದೆ. ಇದರ ಸಿಂಗಲ್ ಪೀಸ್ ಅಲ್ಯುಮಿನಿಯಮ್ ಫ್ರೇಮ್ ಒಂದು ಹೊಸ ಲುಕ್ ಅನ್ನು ಡಿವೈಸ್‌ಗೆ ನೀಡಿದೆ. ಎರಡು ತುಂಡು ಗಾಜುಗಳ ನಡುವೆ ಪ್ಲಾಸ್ಟಿಕ್ ಚೌಕಟ್ಟಿರುವ ಫೋನ್ ಅನ್ನು ಕೂರಿಸಿದಂತೆ ಸೋನಿ ಎಕ್ಸ್‌ಪೀರಿಯಾ Z1 ಕಂಡುಬಂದಿದೆ.

#3

#3

ಇದರ ಅಳತೆಯು 127 x 64.9 x 9.55 mm ಆಗಿದ್ದು ನಿಮ್ಮ ಕೈಯಲ್ಲಿ ಬೆಚ್ಚಗೆ ಕೂರುವ ಸೆಟ್ ಇದಾಗಿದೆ. 4.3 ಇಂಚಿನ ಸ್ಕ್ರೀನ್ ಅನ್ನು ಸೋನಿ ಎಕ್ಸ್‌ಪೀರಿಯಾ Z1 ನೀಡುತ್ತಿದ್ದು ಇದರ ಪಿಕ್ಸೆಲ್ ರೆಸಲ್ಯೂಶನ್ 1280 x 720 ಆಗಿದೆ. ಇದು ಪೂರ್ಣ ರೂಪದ ಎಚ್‌ಡಿ ಗುಣಮಟ್ಟವನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಒಟ್ಟಾರೆ ಸೋನಿ ಎಕ್ಸ್‌ಪೀರಿಯಾ Z1 ಐಫೋನ್ 4 ಮತ್ತು ಐಫೋನ್ 4 ಎಸ್ ಶ್ರೇಣಿಯಲ್ಲಿದೆ.

#4

#4

ಫೋನ್‌ ಪರದೆಯನ್ನು ಸ್ಕ್ರಾಚ್ ಮತ್ತು ಬೆರಳಚ್ಚು ಬೀಳಂತೆ ತಯಾರಿಸಲಾಗಿದ್ದು ನಿಮ್ಮ ಹಸ್ತದಲ್ಲಿ ಮಜಬೂತಾಗಿ ಕೂರುವಂತಿದೆ. ಪೋನ್‌ನ ಎಡಭಾಗದಲ್ಲಿ ಮೈಕ್ರೋಎಸ್‌ಡಿ, ಸಿಮ್ ಚಾರ್ಜರ್ ಕಂಡುಬಂದಿದ್ದು ಬಲಭಾಗದಲ್ಲಿ ಪವರ್ ಬಟನ್, ವಾಲ್ಯೂಮ್ ರೋಕರ್ ಮತ್ತು ಕ್ಯಾಮೆರಾ ಇದೆ.

#5

#5

ಈ ಡಿವೈಸ್‌ನಲ್ಲಿ ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಚಾಲನೆಯಾಗುತ್ತಿದ್ದು 2.2GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 (ಕ್ವಾಡ್ ಕೋರ್) 2ಜಿಬಿ RAM ಮತ್ತು 16ಜಿಬಿ ROM ಇದರಲ್ಲಿದೆ. ಇನ್ನು ಕ್ಯಾಮೆರಾ ಸಾಮರ್ಥ್ಯ 20.7ಎಮ್‌ಪಿ ರಿಯರ್ ಫೇಸಿಂಗ್ ಕ್ಯಾಮೆರಾ ಇದರಲ್ಲಿದ್ದು ಆಟೋ ಫೋಕಸ್ ಎಲ್‌ಇಡಿ ಫ್ಲ್ಯಾಶ್ ಫೋನ್‌ನಲ್ಲಿದೆ. ಇದರ ಮುಂಭಾಗ ಕ್ಯಾಮೆರಾ ಸಾಮರ್ಥ್ಯ 2 ಎಮ್‌ಪಿಯಾಗಿದೆ.

<center><iframe width="100%" height="360" src="//www.youtube.com/embed/274Z_Bmien4?feature=player_detailpage" frameborder="0" allowfullscreen></iframe></center>

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X