3ಜಿಬಿ RAM ಉಳ್ಳ ಸೋನಿಯ ಅತ್ಯಾಧುನಿಕ ಡಿವೈಸ್ ಜೆಡ್ 3 ಪ್ಲಸ್ ಲಾಂಚ್
ಜಪಾನ್‌ನ ಮೊಬೈಲ್ ತಯಾರಿಕಾ ಕಂಪೆನಿ ಸೋನಿ, ಎಕ್ಸ್‌ಪೀರಿಯಾ ಜೆಡ್ 3 ಪ್ಲಸ್ ಎಂದು ನಾಮಕರಣವಾಗಿರುವ, ಎಕ್ಸ್‌ಪೀರಿಯಾ ಜೆಡ್4 ಅನ್ನು ಸೋನಿ ಇತ್ತೀಚೆಗೆ ತಾನೇ ಲಾಂಚ್ ಮಾಡಿದ್ದು ಇದು ಸೋನಿಯ ಓಮ್ನಿ ಬ್ಯಾಲೆನ್ಸ್ ಗ್ಲಾಸ್ ಬ್ಯಾಕ್ ಮತ್ತು ಅಲ್ಯುಮಿನಿಯಮ್ ಫ್ರೇಮ್‌ನೊಂದಿಗೆ ಬಂದಿದೆ. ಡ್ಯುಯಲ್ ಸಿಮ್ ಡಿವೈಸ್ ಇದಾಗಿದೆ.
ಶಾಕ್ ನಿರೋಧಕ ಕ್ಯಾಪ್ ಅನ್ನು ಡಿವೈಸ್ ಪಡೆದುಕೊಂಡಿದ್ದು ಸೈಬರ್ ಶಾಟ್ ತಂತ್ರಜ್ಞಾನವನ್ನು ಡಿವೈಸ್ ಒಳಗೊಂಡಿದೆ. ಇದರಿಂದ ಬಳಕೆದಾರರು ಇನ್ನಷ್ಟು ಉತ್ತ ಫೋಟೋಗಳನ್ನು ತೆಗೆಯಬಹುದಾಗಿದೆ. ಇಂದಿನ ಲೇಖನದಲ್ಲಿ ಡಿವೈಸ್ ಕುರಿತಾದ ಇನ್ನಷ್ಟು ಆಸಕ್ತಿಕಾರಕ ಅಂಶಗಳನ್ನು ತಿಳಿದುಕೊಳ್ಳೋಣ.

ಡಿಸ್‌ಪ್ಲೇ
LDAC ಆಡಿಯೊ ಕಂಪ್ರೆಶನ್ ಕೊಡೇಕ್‌ನೊಂದಿಗೆ ಫೋನ್ ಬಂದಿದ್ದು ಧೂಳು ಮತ್ತು ನೀರು ಪ್ರತಿರೋಧಕ ಸಾಮರ್ಥ್ಯವನ್ನು ಇದು ಪಡೆದಿದೆ. ಹೆಚ್ಚು ಗುಣಮಟ್ಟದ ವೈರ್‌ಲೆಸ್ ಮ್ಯೂಸಿಕ್ ಪ್ಲೇಬ್ಯಾಕ್ ಅನ್ನು ಇದು ಹೊಂದಿದೆ. 5.2 ಇಂಚಿನ ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ ಜೊತೆಗೆ ಲೈವ್ ಕಲರ್ ಎಲ್‌ಇಡಿ ಎಕ್ಸ್ ರಿಯಾಲಿಟಿ ಎಂಜಿನ್ ಅನ್ನು ಡಿವೈಸ್ ಹೊಂದಿದೆ.

ಪ್ರೊಸೆಸರ್
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್ ಜೊತೆಗೆ ಅಡ್ರೆನೊ 430 ಜಿಪಿಯುವನ್ನು ಫೋನ್ ಒಳಗೊಂಡಿದ್ದು 3ಜಿಬಿ RAM ಡಿವೈಸ್‌ನಲ್ಲಿದೆ.

ಸಂಗ್ರಹಣಾ ಸಾಮರ್ಥ್ಯ
ಫೋನ್ 32 ಜಿಬಿ ಬಿಲ್ಟ್ ಇನ್ ಪವರ್ ಅನ್ನು ಫೋನ್ ಹೊಂದಿದ್ದು, ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ಇದನ್ನು ವಿಸ್ತರಿಸಬಹುದು. ಆಂಡ್ರಾಯ್ಡ್ ಲಾಲಿಪಪ್ 5.0 ವನ್ನು ಫೋನ್ ಪಡೆದುಕೊಂಡಿದ್ದು ಆಂಡ್ರಾಯ್ಡ್ ಎಮ್‌ಗೆ ಇದನ್ನು ಅಪ್‌ಗ್ರೇಡ್ ಮಾಡಬಹುದು.

ಕ್ಯಾಮೆರಾ ಮತ್ತು ಬ್ಯಾಟರಿ
ಫೋನ್‌ನ ಪ್ರಾಥಮಿಕ ಕ್ಯಾಮೆರಾ 20.7ಎಮ್‌ಪಿ ಆಗಿದ್ದು, ಮುಂಭಾಗ ಕ್ಯಾಮೆರಾ 5.1 ಎಮ್‌ಪಿಯಾಗಿದೆ. ಫೋನ್ 4ಜಿ ಎಲ್‌ಟಿಇ/3ಜಿ, ವೈಫೈ, ಬ್ಲ್ಯೂಟೂತ್, ಎಫ್‌ಎಮ್ ರೇಡಿಯೊವನ್ನು ಒಳಗೊಂಡಿದೆ.ಫೋನ್ 2930mAh ಬ್ಯಾಟರಿಯನ್ನು ಒಳಗೊಂಡಿದ್ದು ಸ್ಟಿಮಿನಾ ಮೋಡ್ ಅನ್ನು ಹೊಂದಿದೆ. ಇದರಲ್ಲಿ ತ್ವರಿತ ಚಾರ್ಜ್ ಮೋಡ್ ಇದ್ದು ಬ್ಯಾಟಿ ಕಾರ್ಯಕ್ಷಮತೆಯನ್ನು ಇದು ವರ್ಧಿಸುತ್ತದೆ. ಇದು ತ್ವರಿತ ಚಾರ್ಜಿಂಗ್ ವೈಶಿಷ್ಟ್ಯತೆಯನ್ನು ಹೊಂದಿದ್ದು 5.5 ಗಂಟೆಗಳಲ್ಲಿ ಫೋನ್ ಚಾಲನೆಯಾಗುವಂತೆ ಮಾಡುತ್ತದೆ.

ಬೆಲೆ ಮತ್ತು ಬಣ್ಣ
ಫೋನ್ ಬಿಳಿ, ಕಪ್ಪು, ಕಾಪರ್ ಮತ್ತು ಆಕ್ವಾ ಗ್ರೀನ್ ಬಣ್ಣಗಳಲ್ಲಿ ಬರುತ್ತಿದ್ದು, ಬೆಲೆ ರೂ 55,990 ಆಗಿದೆ. ಜೂನ್ 26 ಕ್ಕೆ ಡಿವೈಸ್ ಲಭ್ಯವಾಗಲಿದೆ. ಫೋನ್ ರೂ 3,490 ರ ಬೆಲೆಯ ಸ್ಕ್ರೀನ್ ಪ್ರೊಟೆಕ್ಟರ್‌ನೊಂದಿಗೆ ಬಂದಿದೆ.


Click it and Unblock the Notifications








