Home
ಮೊಬೈಲ್

5,599 ರೂ.ಗೆ ಸ್ಪೈಸ್ ಸಂಸ್ಥೆಯ ಮೊದಲ 'ಆಂಡ್ರಾಯ್ಡ್ ಗೊ' ಆವೃತ್ತಿ ಸ್ಮಾರ್ಟ್‌ಫೋನ್ ಬಿಡುಗಡೆ!

By Bhaskar N J

ದೇಶೀಯ ಸ್ಮಾರ್ಟ್‌ಫೋನ್ ನಿರ್ಮಾಣ ಸಂಸ್ಥೆ ಟ್ರಾನ್ಸಿಶನ್ ಹೋಲ್ಡಿಂಗ್ಸ್ ಒಡೆತನದ ಸ್ಪೈಸ್ ಕಂಪೆನಿ ಭಾರತದಲ್ಲಿ ಆಂಡ್ರಾಯ್ಡ್ ಓರಿಯೊ ಗೋ ಆವೃತ್ತಿಯ ನೂತನ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ ಗೊ ಬೆಂಬಲಿತ ಸ್ಮಾರ್ಟ್‌ಫೋನ್ ಫುಲ್‌ ವ್ಯೂವ್ ಡಿಸ್‌ಪ್ಲೇ ಹಾಗೂ ಗ್ರಾಹಕರನ್ನು ಆಕರ್ಷಸಲು ಸೋಶಿಯಲ್ ಶೇರ್ ಕೀಯನ್ನು ಈ ಫೋನ್ ಹೊಂದಿದೆ.

ಸ್ಪೈಸ್ ಕಂಪೆನಿಯ ನೂತನ ಆಂಡ್ರಾಯ್ಡ್ ಓರಿಯೊ ಗೋ ಆವೃತ್ತಿಗೆ 'ಸ್ಪೈಸ್ ಎಫ್311' ಎಂಬ ಹೆಸರನ್ನು ಇಡಲಾಗಿದ್ದು, 'ಸ್ಪೈಸ್ ಎಫ್311' ಸ್ಮಾರ್ಟ್‌ಫೋನ್ ಕಪ್ಪು, ರೋಸ್ ಗೋಲ್ಡ್, ಮತ್ತು ಫ್ಯಾಂಟಮ್ ಕೆಂಪು ಬಣ್ಣಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ. ಹಾಗಾಗಿ, ಭಾರತದಲ್ಲಿ ಲಭ್ಯವಿರುವ ಆಂಡ್ರಾಯ್ಡ್ ಗೋ ಮಾದರಿಯ ಕೆಲವೇ ಕೆಲವು ಸ್ಮಾರ್ಟ್‌ಪೋನ್‌ಗಳಲ್ಲಿ ಇದು ಕೂಡ ಒಂದಾಗಿದೆ.

5,599 ರೂ.ಗೆ ಸ್ಪೈಸ್ ಸಂಸ್ಥೆಯ ಮೊದಲ 'ಆಂಡ್ರಾಯ್ಡ್ ಗೊ' ಆವೃತ್ತಿ ಸ್ಮಾರ್ಟ್‌ಫೋನ್

ಭವಿಷ್ಯದಲ್ಲಿ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅಭಿವೃದ್ದಿ ಹೊಂದುವ ದೃಷ್ಟಿಯಿಂದ ಆಂಡ್ರಾಯ್ಡ್ ಗೊ ಮಾದರಿಯ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿರುವುದಾಗಿ ಸ್ಪೈಸ್ ಸಂಸ್ಥೆ ತಿಳಿಸಿದೆ. ಹಾಗಾದರೆ, ಸ್ಪೈಸ್ ಸಂಸ್ಥೆಯಿಂದ ಬಿಡುಗಡೆಯಾಗುತ್ತಿರುವ ಚೊಚ್ಚಲ 'ಆಂಡ್ರಾಯ್ಡ್ ಗೊ' ಸ್ಮಾರ್ಟ್‌ಫೋನಿನ ಫೀಚರ್ಸ್ ಮತ್ತು ಬೆಲೆಯ ಮಾಹಿತಿಯನ್ನು ಮುಂದೆ ತಿಳಿಯಿರಿ.

'ಸ್ಪೈಸ್ ಎಫ್311' ಡಿಸ್‌ಪ್ಲೇ!

'ಸ್ಪೈಸ್ ಎಫ್311' ಡಿಸ್‌ಪ್ಲೇ!

'ಸ್ಪೈಸ್ ಎಫ್311' ಸ್ಮಾರ್ಟ್‌ಫೋನ್ 5.45 ಇಂಚುಗಳ ಫುಲ್ ವ್ಯೂ ಡಿಸ್‌ಪ್ಲೇಯನ್ನು ಹೊಂದಿದೆ. ಭಾರತದಲ್ಲಿ ಈ ವರೆಗೂ ಬಿಡುಗಡೆಯಾಗಿರುವ ಆಂಡ್ರಾಯ್ಡ್ ಗೊ ಮಾದರಿಯ ಫೋನ್‌ಗಳಲ್ಲಿಯೇ ಇದು ದೊಡ್ಡ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್ ಆಗಿದೆ. ಆದರೆ, 19:9ರ ಅನುಪಾತದ ಇದರ ಡಿಸ್‌ಪ್ಲೇ ಕೇವಲ 480x960 ಪಿಕ್ಸೆಲ್ಸ್ ಸಾಮರ್ಥ್ಯದ್ದಾಗಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಆಂಡ್ರಾಯ್ಡ್ 8.0 ಓರಿಯೋ ಗೋ ಮಾದರಿದ ಈ ಸ್ಮಾರ್ಟ್‌ಫೋನ್ 64 ಬಿಟ್ ಕ್ವಾಡ್ ಕೋರ್ 1.1GHz MediaTek ಮೀಡಿಯಾ ಟೆಕ್ ಪ್ರೊಸೆಸರ್ ಜತೆಗೆ Mali-T720 MP1 GPUವನ್ನು ಹೊಂದಿದೆ. 1GB RAM 16GB ಇಂಟರ್ನಲ್ ಸ್ಟೋರೆಜ್ ಹೊಂದಿರುವ ಈ ಫೋನಿನ ಮೆಮೆರಿಯನ್ನು ಮೈಕ್ರೋ ಎಸ್‌ಡಿ ಕಾರ್ಡ್ ಲಗತ್ತಿಸಿ 32GB ವರೆಗೂ ವರ್ಧಿಸಬಹುದು .

ಕ್ಯಾಮೆರಾ ಮತ್ತು ಬ್ಯಾಟರಿ?

ಕ್ಯಾಮೆರಾ ಮತ್ತು ಬ್ಯಾಟರಿ?

'ಸ್ಪೈಸ್ ಎಫ್311' ಸ್ಮಾರ್ಟ್‌ಫೋನನಿನಲ್ಲಿ 5 MP ಸೆಲ್ಫಿ ಕ್ಯಾಮೆರಾ ಹಾಗೂ 5 MP ರಿಯರ್ ಕ್ಯಾಮೆರಾಗಳನ್ನು ನಾವು ಕಾಣಬಹುದಾಗಿದೆ. ಹಿಂಬದಿ ಕ್ಯಾಮೆರಾದ ಜೊತೆಗ ಆಟೋಫೋಕಸ್ ಲೆನ್ಸ್, LED ಫ್ಲ್ಯಾಶ್ ಅನ್ನು ನೀಡಲಾಗಿದೆ. ಇನ್ನು ಡ್ಯುಯಲ್ ಸಿಮ್ ಸಪೋರ್ಟೆಡ್ ಹೊಂದಿರುವ ಈ ಸ್ಮಾರ್ಟ್‌ಫೋನ್ 2400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ರೋಸ್ ಗೋಲ್ಡ್, ಬ್ಲ್ಯಾಕ್ ಮತ್ತು ಫಾಟಂ ರೆಡ್ ಬಣ್ಣಗಳಲ್ಲಿ ಬಿಡುಗಡೆಯಾಗಿರುವ 'ಸ್ಪೈಸ್ ಎಫ್311' ಸ್ಮಾರ್ಟ್‌ಫೋನ್ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ. ಇನ್ನು 4G ವೋಲ್ಟ್, ವೈಫೈ ಮತ್ತು ಬ್ಲೂಟೂತ್, ಜಿಪಿಎಸ್/ ಎ-ಜಿಪಿಎಸ್, ಮೈಕ್ರೋ-ಯುಸ್‌ಬಿ ಮತ್ತು 3.5mm ಹೆಡ್‌ಫೋನ್ ಜಾಕ್‌ನಂತಹ ಫೀಚರ್ಸ್ ಸ್ಮಾರ್ಟ್‌ಫೋನಿನಲ್ಲಿವೆ.

ಬೆಲೆ ಮತ್ತು ಮಾರಾಟ.!

ಬೆಲೆ ಮತ್ತು ಮಾರಾಟ.!

ಸ್ಪೈಸ್ ಸಂಸ್ಥೆಯಿಂದ ಬಿಡುಗಡೆಯಾಗುತ್ತಿರುವ ಚೊಚ್ಚಲ 'ಆಂಡ್ರಾಯ್ಡ್ ಗೊ' ಸ್ಮಾರ್ಟ್‌ಫೋನಿನ ಬೆಲೆ 5,599 ರೂಪಾಯಿಗಳಾಗಿವೆ. ಆಂಡ್ರಾಯ್ಡ್ ಗೊ ಆಧರಿತ ನೋಕಿಯಾ 1, ಮೈಕ್ರೋಮ್ಯಾಕ್ಸ್ ಭಾರತ್ ಗೊ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆದಿರುವ ಈ ಪೋನ್ ಒಂದು ವರ್ಷದ ಗ್ಯಾಂಟಿಯೊಂದಿಗೆ ಭಾರತದ ಮಾರುಕಟ್ಟೆಯನ್ನು ಈಗಾಗಲೇ ಪ್ರವೇಶಿಸಿದೆ.

Best Mobiles in India

English summary
Spice F311 Android Go Smartphone With 'Full View' Display, Fingerprint Sensor Launched in India: Price, Specifications. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+