ಸ್ಪೈಸ್‌ನಿಂದ ಡ್ಯುಯೆಲ್ ಸಿಮ್ ಸ್ಮಾರ್ಟ್‌ಫೋನ್ ರೂ 2,599 ಕ್ಕೆ

Written By:

ಇಂಟೆಕ್ಸ್ ಹಾಗೂ ಸ್ಯಾಮ್‌ಸಂಗ್ ಕಡಿಮೆ ಮೌಲ್ಯದ ಫೋನ್‌ಗಳನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿದ್ದು ಈ ದಿಸೆಯಲ್ಲಿ ಪ್ರವೃತ್ತಿಸುತ್ತಿವೆ. ಈಗ ಇದರ ಸಾಲಿಗೆ ಸ್ಪೈಸ್ ಅನ್ನು ಕೂಡ ನಾವು ಸೇರಿಸಬಹುದಾಗಿದ್ದು ತನ್ನ ಕಡಿಮೆ ದರದ ಫೋನ್ ಆದ ರೈನ್‌ಬೋ ಎಮ್ -6111 ನೊಂದಿಗೆ ಇದು ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ.

ಈ ಫೋನ್ ರೂ 2599 ರ ಬೆಲೆಯನ್ನು ಹೊಂದಿದ್ದು, ಸಹೋಲಿಕ್. ಕಾಮ್‌ನಲ್ಲಿ ನಿಮಗೆ ಲಭ್ಯವಾಗಲಿದೆ. ಆನ್‌ಲೈನ್‌ನಲ್ಲಿ ಜುಲೈ 19 ರಿಂದ ಹೊಸ ಡಿವೈಸ್ ದೊರೆಯುತ್ತಿದೆ. ಸ್ಪೈಸ್ ಕೂಡ ನಿಧಾನವಾಗಿ ತನ್ನ ಮಾರುಕಟ್ಟೆಯ ಮೇಲೆ ಅಧಿಪತ್ಯವನ್ನು ಸ್ಥಾಪಿಸಹೊರಟಿದ್ದು ಕಡಿಮೆ ದರದಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಫೋನ್ ಅನ್ನು ನೀಡುವ ಇರಾದೆಯಲ್ಲಿದೆ. ಹಾಗೂ ನ್ಯೂ ಸ್ಪೈಸ್ ಎಮ್ -6111 ಕೂಡ ಇದಕ್ಕೆ ಹೊರತಾಗಿಲ್ಲ.

ಸ್ಪೈಸ್‌ನಿಂದ ಡ್ಯುಯೆಲ್ ಸಿಮ್ ಫೋನ್ ಅತ್ಯದ್ಭುತ ಕೊಡುಗೆ

ಈ ಡ್ಯುಯೆಲ್ ಸಿಮ್ ಫೋನ್ 4 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು 480x272 ಪಿಕ್ಸೆ‌ಲ್‌ಗಳೊಂದಿಗೆ ಬರುತ್ತಿದ್ದು ಇದರ ಪ್ರೊಸೆಸರ್ ಮತ್ತು RAM ಬಗ್ಗೆ ನಮಗೆ ಯಾವುದೇ ಮಾಹಿತಿ ದೊರೆತಿಲ್ಲ. ಇದು ಸೂಕ್ತವಾದ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದ್ದು, ಇದು ಗೂಗಲ್ ಆಂಡ್ರಾಯ್ಡ್ ಓಎಸ್ ಅನ್ನು ಹೊಂದಿಲ್ಲ ಆದರೂ ಫೋನ್ ತುಂಬಾ ಚೆನ್ನಾಗಿದೆ. ಇದು 1.3 ಎಂಪಿ ಯ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು ಇದು 1000mah ಬ್ಯಾಟರಿಯೊಂದಿಗೆ ಆಕರ್ಷಕವಾಗಿದೆ.

ಇದರಲ್ಲಿ ಸಂಪರ್ಕ ಅಂಶಗಳು ಜಿಪಿಆರ್‌ಎಸ್, ಬ್ಲೂಟೂತ್ ಡಬ್ಲ್ಯುಎಪಿ ಹೀಗೆ ಇತರವುಗಳಿಂದ ವೈವಿಧ್ಯಮಯವಾಗಿದೆ. ಇದು ನಾಲ್ಕು ಬಣ್ಣಗಳಲ್ಲಿ ಲಭ್ಯವಾಗಲಿದ್ದು ಗ್ರಾಹಕರಿಗೆ ತಮ್ಮ ಮೆಚ್ಚಿನ ಬಣ್ಣವನ್ನು ಇದರಲ್ಲಿ ಆಯ್ಕೆ ಮಾಡಲಿದೆ.

ಹೀಗೆ ನಿಮ್ಮ ಮನತಣಿಸಲಿರುವ ಅಂಶಗಳಿಂದ ಈ ಸ್ಮಾರ್ಟ್‌ಫೋನ್ ಆಕರ್ಷಕವಾಗಿದ್ದು ಗ್ರಾಹಕರಿಗೆ ಉತ್ತಮ ಫೋನ್ ಆಗಿ ದೊರೆಯುವುದು ಖಂಡಿತ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot