ಸ್ಪೈಸ್ 5 ಇಂಚ್ ಆಂಡ್ರಾಯ್ಡ್ 4.0 ಫೋನ್ ಬಂದಿದೆ

Posted By: Varun
ಸ್ಪೈಸ್ 5 ಇಂಚ್ ಆಂಡ್ರಾಯ್ಡ್ 4.0 ಫೋನ್ ಬಂದಿದೆ

ಭಾರತದ ಮೊಬೈಲ್ ಉತ್ಪಾದಕ ಸ್ಪೈಸ್, ಇತ್ತೀಚೆಗೆ ಸ್ಮಾರ್ಟ್ ಫೋನುಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದ್ದು,ಈಗೀಗ ಆಂಡ್ರಾಯ್ಡ್ ಆಧಾರಿತ ಫೋನುಗಳನ್ನು ಹೊರತರುತ್ತಿದೆ.

ನೆನ್ನೆ ಸ್ಪೈಸ್ ಎರಡು ಆಂಡ್ರಾಯ್ಡ್ 4.0 ಆಧಾರಿತ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಿದ್ದು, ಸ್ಟೆಲ್ಲಾರ್ ಹೊರೈಜನ್ Mi-500 ಹಾಗು ಸ್ಪೈಸ್ ಸ್ಟೆಲ್ಲಾರ್ ಕ್ರೇಜ್ MI-355 ಎಂದು ಹೆಸರಿಡಲಾಗಿದೆ. ಎರಡೂ ಫೋನುಗಳಲ್ಲಿ Netqin ಎಂಬ ವೈರಸ್ ವಿರೋಧಿ ತಂತ್ರಾಂಶ ಪ್ರೀ ಲೋಡೆಡ್ ಆಗಿದ್ದು, ದ್ವಿಸಿಮ್ ಹೊಂದಿವೆ.

ಈ ಎರಡೂ ಫೋನುಗಳ ಫೀಚರುಗಳು ಈ ರೀತಿ ಇದೆ:

1) ಸ್ಟೆಲ್ಲಾರ್ ಹೊರೈಜನ್ Mi-500

 • 5 ಇಂಚು ಕೆಪಾಸಿಟಿವ್ ಟಚ್ ಸ್ಕ್ರೀನ್

 • ಆಂಡ್ರಾಯ್ಡ್ 4.0 ಆಪರೇಟಿಂಗ್ ಸಿಸ್ಟಮ್

 • 1 GHz ಸ್ನಾಪ್ಡ್ರಾಗನ್ ಪ್ರೋಸೆಸರ್

 • 512 MB ರಾಮ್

 • ಆಂತರಿಕ ಮೆಮೊರಿ 4 ಗಬ್

 • 32 GB ಗೆ ವಿಸ್ತರಿಸಬಹುದಾದ ಮೆಮೊರಿ

 • 5 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ (ಆಟೋಫೋಕಸ್ ಹೊಂದಿದೆ)

 • ಒಂದು ವಿಜಿಎ ​​ಮುಂಬದಿಯ ಕ್ಯಾಮರಾ

 • SRS ಆಡಿಯೋ

 • ಬ್ಲೂಟೂತ್, ವೈಫೈ, ಜಿಪಿಎಸ್

 • 2150 mAh ಬ್ಯಾಟರಿ
 

ಸ್ಟೆಲ್ಲಾರ್ ಹೊರೈಜನ್ Mi-500 ಸ್ಮಾರ್ಟ್ ಫೋನಿನ ಬೆಲೆ 11,999 ರೂಪಾಯಿ.

 

2) ಸ್ಪೈಸ್ ಸ್ಟೆಲ್ಲಾರ್ ಕ್ರೇಜ್ MI-355

 • 3.5 ಇಂಚಿನ ಕೆಪಾಸಿಟಿವ್ ಟಚ್ ಸ್ಕ್ರೀನ್

 • ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ (ಆಂಡ್ರಾಯ್ಡ್ 4.0 ಗೆ ಅಪ್ಗ್ರೇಡ್ ಮಾಡಬಹುದು)

 • 800 MHz ಪ್ರೋಸೆಸ್ಸೋರ್

 • 5 ಮೆಗಾಪಿಕ್ಸೆಲ್ ಕ್ಯಾಮೆರಾ

 • 0.3 ಮೆಗಾಪಿಕ್ಸೆಲ್ ಮುಂಬದಿ ಕ್ಯಾಮೆರಾ

 • ಬ್ಲೂಟೂತ್, ವೈಫೈ, ಜಿಪಿಎಸ್

 • 1420 mAh ಬ್ಯಾಟರಿ
 

ಸ್ಪೈಸ್ ಸ್ಟೆಲ್ಲಾರ್ ಕ್ರೇಜ್ MI-355 ನ ಬೆಲೆ 6,499 ರೂಪಾಯಿ.

 

ಈ ಎರಡೂ ಸ್ಮಾರ್ಟ್ ಫೋನುಗಳು ಈ ತಿಂಗಳ ಕೊನೆಯ ಭಾಗದಲ್ಲಿ ಮಾರುಕಟ್ಟೆಗೆ ಬರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot