ಸ್ಪೈಸ್‌ ಮಿ-500 Vs ಐಬಾಲ್‌ ಆಂಡಿ 5ಸಿ

By Vijeth Kumar Dn
|

ಸ್ಪೈಸ್‌ ಮಿ-500 Vs ಐಬಾಲ್‌ ಆಂಡಿ 5ಸಿ
ಕಡಿಮೆ ದರದ ಉತ್ಪನ್ನಗಳಿಗೆ ಹೆಚ್ಚು ಆದ್ಯತೆ ನೀಡುವ ಭಾರತೀಯ ಗ್ರಾಹಕ ಮಾರುಕಟ್ಟೆಯಲ್ಲಿ ಬಜೆಟ್‌ ಸ್ನೇಹಿ ಸ್ಮಾರ್ಟ್‌ಫೋನ್ಸ್‌ಗಳು ಭಾರಿ ಯಶಸ್ಸು ಗಳಿಸುತ್ತಿದ್ದಂತೆ, ತಯಾರಕರುಗಳು ಗ್ರಾಹಕರನ್ನು ಹೆಚ್ಚು ಹೆಚ್ಚು ಆಕರ್ಶಿಸುವ ಸಲುವಾಗಿ ಅಗ್ಗದ ಬೆಲೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಈ ನಡುವೆ ಭಾರತೀಯ ಮಾರುಕಟ್ಟೆಗೆ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೋಟ್‌ ಬಂದ ನಂತರ ಕೊಂಚ ದೊಡ್ಡಗಾತ್ರದ ಫಾಬ್ಲೆಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಗ್ರಾಹಕರು ಸ್ಮಾರ್ಟ್‌ಫೋನ್ಸ್‌ ಬದಲಾಗಿ ಫಾಬ್ಲೆಟ್‌ಗಳತ್ತ ಮುಖ ಮಾಡಿದ್ದಾರೆ.

ಅಂದಹಾಗೆ ಈ ಸಾಲಿಗೆ ಇತ್ತೀಚೆಗೆ ಸ್ಥಳೀಯ ತಯಾರಕರುಗಳಾದ ಸ್ಪೈಸ್‌ ಹಾಗೂ ಐಬಾಲ್‌ ಸಂಸ್ಥೆಗಳು ನೂತನ ಬಜೆಟ್‌ ಸ್ನೇಹಿ ಫಾಬ್ಲೆಟ್‌ ಗಳಾದಂತಹ ಸ್ಟೆಲ್ಲರ್‌ ಹಾರಿಜಾನ್‌ ಮಿ-500 ಹಾಗೂ ಐಬಾಲ್‌ ಆಂಡಿ 5ಸಿ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಈ ಎರಡೂ ಫಾಬ್ಲೆಟ್‌ನಲ್ಲಿ ಯಾವುದನ್ನು ಖರೀದಿಸುವುದು ಎಂದು ಗೊಂದಲದಲ್ಲಿ ನೀವಿದ್ದರೆ ಅದಕ್ಕೂ ಮುನ್ನ ಇವೆರಡರ ನಡುವಿನ ಹೋಲಿಕೆಯನ್ನು ಒಮ್ಮೆ ಓದಿ ನೋಡಿ.

ಗಾತ್ರ ಹಾಗೂ ಸುತ್ತಳತೆ: ಐಬಾಲ್‌ ಆಂಡಿ 5c ಫಾಬ್ಲೆಟ್‌ನ ಸುತ್ತಳತೆಯ ಕುರಿತು ಸಂಸ್ಥೆ ಯಾವುದೇ ಮಾಹಿತೀ ನೀಡಿಲ್ಲ, ಅಂದಹಾಗೆ ಸ್ಫೈಸ್‌ ಸ್ಟೆಲ್ಲರ್‌ ಹಾರಿಜಾನ್‌ 143 x 77.4 x 10.5 mm ಸುತ್ತಳತೆಯೊಂದಿಗೆ 205 ಗ್ರಾಂ ತೂಕವಿದೆ.

ದರ್ಶಕ: ಎರಡೂ ಫಾಬ್ಲೆಟ್‌ಗಳಲ್ಲಿ 5 ಇಂಚಿನ ಟಚ್‌ಸ್ಕ್ರೀನ್‌ ದರ್ಶಕವಿದ್ದು 480 x 800 ಪಿಕ್ಸೆಲ್ಸ್‌ ಹೊಂದಿವೆ.

ಪ್ರೊಸೆಸರ್‌: ಈ ವಿಭಾಗದಲ್ಲಿ ಸ್ಟೆಲ್ಲರ್‌ ಹಾರಿಜಾನ್‌ 1GHz ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಹೊಂದಿದ್ದರೆ, ಆಂಡಿ 5c ನಲ್ಲಿ 1GHz ಕಾರ್ಟೆಕ್ಸ್‌ A9 ಪ್ರೊಸೆಸರ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಎರಡೂ ಫಾಬ್ಲೆಟ್‌ಗಳಲ್ಲಿ ಆಂಡ್ರಾಯ್ಡ್‌ 4.0 ಐಸ್‌ಕ್ರೀಮ್‌ ಸ್ಯಾಂಡ್ವಿಚ್‌ ಆಪರೇಟಿಂಗ್‌ ಸಿಸ್ಟಂ ಹೊಂದಿವೆ.

ಕ್ಯಾಮೆರಾ: ಈ ವಿಭಾಗದಲ್ಲಿಯೂ ಕೂಡ ಎರಡೂ ಫಾಬ್ಲೆಟ್‌ಗಳಲ್ಲಿ 5MP ಹಿಂಬದಿಯ ಕ್ಯಾಮೆರಾ ಇದ್ದು, ಆಟೋ ಫೋಕಸ್‌ ಹಾಗೂ LED ಫ್ಲಾಷ್‌ ಸೇರಿದಂತೆ ವಿಡಿಯೋ ಕರೆಗಾಗಿ 0.3MPನ ಮುಂಬದಿಯ ಕ್ಯಾಮೆರಾ ಹೊಂದಿದೆ.

ಸ್ಟೋರೇಜ್‌: ಎರೆಡೂ ಫಾಬ್ಲೆಟ್‌ಗಳಲ್ಲಿ 4GB ಆಂತರಿಕ ಮೆಮೊರಿಯೊಂದಿಗೆ 512MB RAM ಹೊಂದಿವೆ. ಹಾಗೂ ಎರಡೂ ಫಾಬ್ಲೆಟ್‌ಗಳಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಸೌಲಭ್ಯವಿದ್ದು 32GB ವರೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.

ಕನೆಕ್ಟಿವಿಟಿ: ಈ ವಿಚಾರದಲ್ಲೂ ಕೂಡ ಎರಡೂ ಫಾಬ್ಲೆಟ್‌ಗಳು 3G, ಬ್ಲೂಟೂತ್‌, Wi-Fi 802.11 b/g/n ಹಾಗೂ ಮೈಕ್ರೋ USB 2.0 ಹೊಂದಿವೆ.

ಬ್ಯಾಟರಿ: ಸ್ಟೆಲ್ಲರ್‌ ಹಾರಿಜಾನ್‌ನಲ್ಲಿ 2,400 mAh ಸಾಮರ್ತ್ಯದ ಬ್ಯಾಟರಿ ಇದ್ದರೆ, ಇಬಾಲ್‌ ಆಂಡಿ 5c ನಲ್ಲಿ 2,300 mAh Li-ion ಬ್ಯಾಟರಿ ಹೊಂದಿದೆ.

ಬೆಲೆ: ಖರೀದಿಸುವುದಾದರೆ ಈ ಬಜೆಟ್‌ ಸ್ನೇಹಿ ಫಾಬ್ಲೆಟ್ಸ್‌ಗಳಾದ ಸ್ಪೈಸ್‌ ಸ್ಟೆಲ್ಲರ್‌ ಹಾರಿಜಾನ್‌ ಮಿ-500 ಹಾಗೂ ಐಬಾಲ್‌ ಆಂಡಿ 5ಸಿ ರೂ.12,499 ಹಾಗೂ 12,999 ರೂ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

Read In English...

<strong>ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೋಟ್‌ 2 vs ನೋಕಿಯಾ ಲೂಮಿಯಾ 920</strong>ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೋಟ್‌ 2 vs ನೋಕಿಯಾ ಲೂಮಿಯಾ 920

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X