Subscribe to Gizbot

ಸೂಪರ್ ಫಾಸ್ಟ್ ಚಾರ್ಜಿಂಗ್ ಡಿವೈಸ್ ಅಲ್ಟ್ರಾಪ್ಯಾಕ್

Written By:

ಇಲೆಕ್ಟ್ರಾನಿಕ್ ಉತ್ಪನ್ನಗಳು ಮೊಬೈಲ್ ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಬ್ಲೂಟೂತ್ ಹೆಡ್‌ಫೋನ್‌ಗಳಲ್ಲಿ ಎಷ್ಟೇ ಸಾಧನೆಗಳನ್ನು ಮಾಡಿದ್ದರೂ ಸಾಧಿಸದೇ ಉಳಿದಿದ್ದ ಒಂದು ಕಾರ್ಯವೆಂದರೆ ಬ್ಯಾಟರಿ ಲೈಫ್ ಅನ್ನು ಉಳಿಸುವುದು. ಪ್ರತಿಯೊಂದು ಇಲೆಕ್ಟ್ರಾನಿಕ್ ಉಪಕರಣಗಳ ಜೀವನಾಡಿ ಎಂದೇ ಕರೆಯಿಸಿಕೊಂಡಿರುವ ಬ್ಯಾಟರಿಯು ದೀರ್ಘ ಕಾಲ ಬರುವುದು ಈಗ ತುಸು ಕಷ್ಟವೇ.

ಅಪರಿಮಿತ ಅಪ್ಲಿಕೇಶನ್‌ಗಳು, ಮತ್ತು ಆಟಗಳ ಮೋಜಿನಿಂದಾಗಿ ಇಂದಿನ ಯುಗದಲ್ಲಿ ಫೋನ್‌ನ ಬ್ಯಾಟರಿಯನ್ನು ಉಳಿಸುವುದು ಸವಾಲಿನ ಕೆಲಸವಾಗಿದೆ. ಆದರೆ ತಕ್ಕಮಟ್ಟಿಗಿನ ಬ್ಯಾಟರಿ ಉಳಿಸುವಿಕೆ ಸೇವೆಯನ್ನು ಈಗ ಒದಗಿಸುವ ಯೋಜನೆಯನ್ನು ರೂಪಿಸಲಾಗಿದ್ದು ಇದು ಖಂಡಿತ ಪ್ರಯೋಜನಕಾರಿ ಎಂದೆನಿಸಲಿದೆ. ಯುಎನ್‌ಯು ನ ಅಲ್ಟ್ರಾಪ್ಯಾಕ್ ಒಂದು ಬ್ಯಾಟರಿ ಪ್ಯಾಕ್ ಆಗಿದ್ದು, ಇದನ್ನು ಕೇವಲ ಹದಿನೈದು ನಿಮಿಷಗಳು ಚಾರ್ಜ್ ಮಾಡಿದರೂ ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳಿಗೆ ಆವಶ್ಯಕವಾಗಿರುವ ಚಾರ್ಜ್ ಅನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.

ನಿಮ್ಮ ಸ್ಮಾರ್ಟ್‌ಫೋನ್ ಜೀವನಾಧಾರ ಅಲ್ಟ್ರಾಪ್ಯಾಕ್

ಬಳಕೆದಾರರು ಹೋಗುವ ಕಡೆಗೆಲ್ಲಾ ಈ ಅಲ್ಟ್ರಾಪ್ಯಾಕ್ ಅನ್ನು ಒಯ್ಯಬಹುದಾಗಿದ್ದು, ಗಂಟೆಯ ಅರ್ಧಭಾಗದಷ್ಟು ಇದರ ಚಾರ್ಜಿಂಗ್‌ಗಾಗಿ ನೀವು ವಿನಿಯೋಗಿಸಿದಲ್ಲಿ ನಿಮ್ಮ ಫೋನ್‌ನ ಜೀವಾಧಾರ ಸಮಸ್ಯೆಯಿಲ್ಲದೆ ನಡೆಯುತ್ತಿರುತ್ತದೆ. ನಿಮಗೆ ಚಿಂತೆ ಮಾಡುವ ಅವಶ್ಯಕತೆ ಕೂಡ ಇರುವುದಿಲ್ಲ.

ಇನ್ನು ಹೋಲಿಕೆ ಮಾಡಹೊರಟಾಗ, ಐಫೋನ್ 5 ಎಸ್ ಅನ್ನು ಗೋಡೆಯ ಸಾಕೆಟ್ ಅನ್ನು ಬಳಸಿ 1-2 ಗಂಟೆಗಳ ಚಾರ್ಜ್ ಮಾಡಿದರೆ ಎಲ್ಲಿಗೆ ಬೇಕಾದರೂ ಕೊಂಡೊಯ್ಯುಬಹುದು ಎಂಬುದು ಬಳಕೆದಾರರ ವರದಿಗಳಿಂದ ತಿಳಿದುಬಂದಿರುವಂತಹ ಅಂಶವಾಗಿದೆ. ಆದರೆ ನೀವು ಪ್ರಯಾಣದಲ್ಲಿದ್ದಾಗ ಇದು ಉತ್ತಮ ಆಯ್ಕೆಯಾಗಿರುವುದಿಲ್ಲ.

ಅಲ್ಟ್ರಾಪ್ಯಾಕ್‌ನ ಸೂಪರ್ ಫಾಸ್ಟ್ ಚಾರ್ಜಿಂಗ್ ಅಲ್ಟ್ರಾ ಎಕ್ಸ್ ಎಂಬ ಚಾರ್ಜಿಂಗ್ ತಂತ್ರಜ್ಞಾನದಿಂದಾಗಿ ಬಂದಿರುವಂಥದ್ದಾಗಿದ್ದು, ಇದಕ್ಕಾಗಿ ವಿಶೇಷ ರೀತಿಯ ಎ ಪ್ಲಸ್ ಲಿಥಿಯಮ್ ಪಾಲಿಮರ್ ಬ್ಯಾಟರಿಯನ್ನು ಬಳಸಲಾಗಿದ್ದು ಇದು ಸಾಮಾನ್ಯ ಚಾರ್ಜಿಂಗ್ ವೇಗವನ್ನು 8 ಪಟ್ಟು ಹೆಚ್ಚಿಸುತ್ತದೆ. ಇದು ಡಿವೈಸ್‌ ಅನ್ನು ಜಗತ್ತಿನ ವೇಗವಾದ ಸ್ವಯಂ ಚಾರ್ಜಿಂಗ್ ಬ್ಯಾಟರಿ ಪ್ಯಾಕ್ ಆಗಿ ರೂಪಿಸಿದೆ ಎಂದು ಯುಎನ್‌ಯು ತಿಳಿಸಿದೆ.

English summary
This article tells about Super fast battery pack can fully charge your phone in 15 minutes.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot