Home
ಮೊಬೈಲ್

ಟೈಪಿಂಗ್ ಅನ್ನು ಸೂಪರ್ ಫಾಸ್ಟ್ ಆಗಿಸುವ ಸ್ವಿಫ್ಟ್ ಕೀ

By Shwetha

ಸ್ವಿಫ್ಟ್ ಕೀ ಆಂಡ್ರಾಯ್ಡ್‌ನ ಜನಪ್ರಿಯ ಕೀಬೋರ್ಡ್ ಅಪ್ಲಿಕೇಶನ್ ಆಗಿರುವ ಇದು, ನಿಮ್ಮ ಟೈಪಿಂಗ್ ಅನ್ನು ವೇಗಗೊಳಿಸುತ್ತದೆ. ಇದೀಗ ಈ ಕೀ ಎಲ್ಲಾ ಬಳಕೆದಾರರಿಗೆ ಸಂಪೂರ್ಣ ಉಚಿತವಾಗಿದೆ.

2012 ರಲ್ಲಿ ಲಾಂಚ್ ಆದ ಈ ಅಪ್ಲಿಕೇಶನ್ ಗೂಗಲ್ ಪ್ಲೇನಲ್ಲಿ ಹೆಚ್ಚು ಮಾರಾಟವಾಗುವ ಪಾವತಿ ಅಪ್ಲಿಕೇಶನ್ ಆಗಿದ್ದು ಇದೀಗ ಬಳಕೆದಾರರಿಗೆ ಉಚಿತವಾಗಿದೆ. ಯಾವಾಗಲೂ ಈ ಅಪ್ಲಿಕೇಶನ್‌ಗೆ ದರವನ್ನು ನಿಗದಿ ಪಡಿಸುತ್ತಿದ್ದ ಕಂಪೆನಿ ಈ ಬದಲಾವಣೆಯಿಂದ ಸ್ವಲ್ಪ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗಿದೆ. ಆದರೆ ಬಳಕೆದಾರರು ಈ ಉಚಿತವಾಗಿರುವ ಕೀ ಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದಾಗಿದ್ದು ಉಚಿತವಾಗಿ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಆಂಡ್ರಾಯ್ಡ್‌ನ ಜನಪ್ರಿಯ ಸ್ವಿಫ್ಟ್‌ಕೀ ಈಗ ಉಚಿತ!

ಆದರೆ ಬಳಕೆದಾರರು ತಮ್ಮ ಕೀಬೋರ್ಡ್‌ಗಾಗಿ ಹೊಸ ಥೀಮ್‌ಗಳನ್ನು ಖರೀದಿಸುವುದು ಕಡ್ಡಯವಾಗಿದೆ. ಥೀಮ್ಸ್‌ಗಳು ಸ್ವಿಫ್ಟ್‌ಕೀ ಯ ಹೆಚ್ಚು ವಿನಂತಿಸಲಾದ ಫೀಚರ್‌ಗಳಾಗಿದ್ದು, ಇದನ್ನು ಬಳಕೆದಾರರು ಖರೀದಿಸಬೇಕಾಗುತ್ತದೆ ಎಂದು ಕಂಪೆನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ಜೊ ಬ್ರೈಡ್‌ವುಡ್ ತಿಳಿಸಿದ್ದಾರೆ.

ವಿನಂತಿಗಳೊಂದಿಗೆ ನಾವು ಇನ್ನಷ್ಟನ್ನು ತೊಡಗಿಸಬಹುದಾಗಿದ್ದು ಇದರಿಂದ ಇನ್ನಷ್ಟು ದೊಡ್ಡ ಸಾಧನೆಗಳನ್ನು ಮಾಡಬಹುದಾಗಿದೆ ಎಂದು ಬ್ರೈಡ್‌ವುಡ್ ಹೇಳಿದ್ದು ಇದು ದೀರ್ಘ ಕಾಲದಿಂದ ಚಲಾವಣೆಯಲ್ಲಿದ್ದ ದೊಡ್ಡ ಕೋರಿಕೆಯಾಗಿದೆ ಅಪ್ಲಿಕೇಶನ್‌ನ ಒಳಗೆ ಸ್ವಿಫ್ಟ್‌ ಕೀ ಸ್ಟೋರ್ ಅನ್ನು ನಾವು ಹೊಂದಿರುವುದರಿಂದ ಇದು ನಮ್ಮ ಸಾಧನೆಗೆ ಖಂಡಿತ ಬೆಂಬಲ ನೀಡುತ್ತದೆ ಎಂದವರು ಹೇಳಿದ್ದಾರೆ.

ಸ್ಟೋರ್ 30 ಹೊಸ ಥೀಮ್‌ಗಳನ್ನು ಸೇರಿಸಿದ್ದು, ಇದು ಉಚಿತ ಹಾಗೂ ಪಾವತಿ ಇವೆರಡೂ ಆಯ್ಕೆಗಳನ್ನು ಒಳಗೊಂಡಿವೆ. ಥೀಮ್‌ಗಳ ಪ್ಯಾಕ್ ಅನ್ನು ಬಳಕೆದಾರರು ಖರೀದಿಸಬಹುದಾಗಿದ್ದು, ಈಗಾಗಲೇ ಅಪ್ಲಿಕೇಶನ್‌ಗೆ ಪಾವತಿ ಮಾಡಿದವರು ಸ್ವಯಂಚಾಲಿತವಾಗಿ 10 ಥೀಮ್‌ಗಳ "ಪ್ರೀಮಿಯರ್ ಪ್ಯಾಕ್" ಅನ್ನು ಪಡೆಯುತ್ತಾರೆ.

ಸ್ವಿಫ್ಟ್ ಕೀಯ ಇತ್ತೀಚಿನ ಆವೃತ್ತಿ ಹೊಸ ಎಮೋಜಿ ಬೆಂಬಲ ಮತ್ತು ಎಮೋಜಿ ಪ್ರಿಡಕ್ಷನ್ ಅನ್ನು ಆಂಡ್ರಾಯ್ಡ್ 4.1 ಮತ್ತು ಹೆಚ್ಚಿನದಕ್ಕೆ ಒದಗಿಸುತ್ತದೆ. ಕೀಬೋರ್ಡ್‌ನ ಮೇಲ್ಭಾಗದಲ್ಲಿ ಇರಿಸಿರುವಂತಹ ಆಯ್ಕೆಯ ಸಂಖ್ಯೆ ಸಾಲು ಕೂಡ ಲಭ್ಯವಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+