ಸ್ವೈಪ್ 5.0 ಆಕರ್ಷಕ ಸ್ಮಾರ್ಟ್‌ಫೋನ್ ಹೇಗೆ

By Shwetha
|

ಕ್ಯಾಲಿಫೋರ್ನಿಯಾ ಆಧಾರಿತ ಸ್ವೈಪ್ ಕಂಪೆನಿ ಸ್ವೈಪ್ 5.0 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು ಇದರ ಬೆಲೆ ಭಾರತದಲ್ಲಿ 8,999 ರೂಪಾಯಿಗಳಾಗಿವೆ. ಡ್ಯುಯೆಲ್ ಸಿಮ್ ಅನ್ನು ಹೊಂದಿರುವ ಸ್ವೈಪ್ ಕನೆಕ್ಟ್ 5.0 ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಚಾಲನೆಯಾಗುತ್ತಿದೆ. ಮತ್ತು ಇದು 5 ಇಂಚಿನ ಕ್ಯುಎಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದ್ದು ಒನ್ ಗ್ಲಾಸ್ ಸೊಲ್ಯೂಶನ್ ಗ್ಲಾಸ್ ತಂತ್ರಜ್ಞಾನ ಆಧಾರಿತವಾಗಿದೆ.

ಇದರ ಇನ್ನಷ್ಟು ಮಾಹಿತಿಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಿಮಗೆ ತಿಳಿಸಲಾಗುತ್ತಿದ್ದು ನಿಮಗೆ ಸ್ವೈಪ್ 5.0 ಕುರಿತು ಬಹಳಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ.

#1

#1

ಇದರಲ್ಲಿ ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಚಾಲನೆಯಾಗುತ್ತಿದ್ದು 5 ಇಂಚಿನ ಕ್ಯುಎಚ್‌ಡಿ ಡಿಸ್‌ಪ್ಲೇ ಮತ್ತು ಒನ್ ಗ್ಲಾಸ್ ತಂತ್ರಜ್ಞಾನವನ್ನು ಹೊಂದಿದೆ. ಇದರಲ್ಲಿ 1.3 GHZ ಕ್ವಾಡ್ ಕೋರ್ ಪ್ರೊಸೆಸರ್ ಇದ್ದು 1 ಜಿಬಿ RAM ಅನ್ನು ಫೋನ್ ಒಳಗೊಂಡಿದೆ.

#2

#2

ಕ್ಯಾಮೆರಾ
ಸ್ವೈಪ್ 5.0 ಸ್ಮಾರ್ಟ‌್‌ಫೋನ್‌ನ ರಿಯರ್ ಕ್ಯಾಮೆರಾ ಸಾಮರ್ಥ್ಯ 8 ಮೆಗಾಪಿಕ್ಸೆಲ್‌ಗಳಾಗಿದ್ದು ಮುಂಭಾಗ ಕ್ಯಾಮೆರಾ ಸಾಮರ್ಥ್ಯ 3.2 ಮೆಗಾಪಿಕ್ಸೆಲ್ ಆಗಿದೆ. ಡಿವೈಸ್‌ನ ಬಿಲ್ಟ್ ಇನ್ ಮೆಮೊರಿ 8ಜಿಬಿಯಾಗಿದ್ದು ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿಕೊಂಡು ವಿಸ್ತರಿಸಬಹುದಾಗಿದೆ.

#3

#3

ಸಂಪರ್ಕ ವ್ಯವಸ್ಥೆ
ಸ್ವೈಪ್ 5.0 ಸ್ಮಾರ್ಟ್‌ಫೋನ್ 3ಜಿ, ವೈಫೈ 802.11, ಬ್ಲೂಟೂತ್ ಅನ್ನು ಒಳಗೊಂಡಿದೆ. ಇದರ ಬ್ಯಾಟರಿ ಸಾಮರ್ಥ್ಯ 1950mAh polymer - ion ಬ್ಯಾಟರಿ ಆಗಿದ್ದು ಇದರ ಗಾತ್ರ 148X74X8.9 ಎಮ್‌ಎಮ್ ಮತ್ತು ತೂಕ 135 ಗ್ರಾಮ್‌‌ಗಳಾಗಿವೆ. ಇದು ಉಚಿತ ಸ್ಕ್ರೀನ್ ಗಾರ್ಡ್‌ನೊಂದಿಗೆ ಬಂದಿದ್ದು ಫ್ಲಿಪ್ ಕವರ್ ಮತ್ತು ಪ್ರೀಮಿಯಮ್ ಬಿಸಿನೆಸ್ ನ್ಯಾವಿಗೇಟರ್ ಅನ್ನು ಒಳಗೊಂಡಿದೆ ಇದರ ಬೆಲೆ ರೂ. 1,499 ಗಳಾಗಿದೆ.

#4

#4

ಸ್ವೈಪ್ 5.0 ಅವಲೋಕನ
ಒಂದು ಉತ್ತಮ ಸ್ಮಾರ್ಟ್‌ಫೋನ್ ಆಗಿ ಗ್ರಾಹಕರ ಮನಸೆಳೆಯಲಿರುವ ಸ್ವೈಪ್ 5.0 ನಿಮಗೆ ಅತ್ಯಾಧುನಿಕ ತಂತ್ರಜ್ಞಾನದ ಬಗೆಗಿನ ಪ್ರತಿಯೊಂದು ಮಾಹಿತಿಯನ್ನು ನೀಡುತ್ತದೆ. ಈ ಫೋನ್ ಡ್ಯುಯೆಲ್ ಸಿಮ್ ಅನ್ನು ಬೆಂಬಲಿಸುತ್ತಿದ್ದು ಸ್ಮಾರ್ಟ್ ತಂತ್ರಜ್ಞಾನಕ್ಕೆ ಅನುಗುಣವಾಗಿ ಆಕರ್ಷಕವಾಗಿದೆ.

#5

ಸ್ವೈಪ್ 5.0 ಸ್ಮಾರ್ಟ್‌ಫೋನ್

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X