ಮಾರುಕಟ್ಟೆಗೆ ಲಗ್ಗೆ ಇಟ್ಟ ಬ್ರಾಂಡೆಡ್ ಡ್ಯುಯಲ್ ಕ್ಯಾಮೆರಾ ಫೋನ್: ಲಾಂಚಿಂಗ್ ಆಫರ್ ರೂ.3999ಕ್ಕೆ ಮಾರಾಟ..!

|

ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್‌ಪೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ಮಾದರಿಯಲ್ಲಿ ಅತೀ ಕಡಿಮೆ ಬೆಲೆ ಡ್ಯುಯಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ವೊಂದನ್ನು ಬಿಡುಗಡೆ ಮಾಡಿದೆ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಸ್ವೈಪ್. ಈಗಾಗಲೇ ಮಾರುಕಟ್ಟೆಯಲ್ಲಿ ಬಜೆಟ್ ಸ್ಮಾರ್ಟ್‌ಫೋನ್‌ಗಳ ಹಾವಳಿಯೂ ಅಧಿಕವಾಗಿದ್ದು, ಈ ಸಂದರ್ಭದಲ್ಲಿ ಡ್ಯುಯಲ್ ಕ್ಯಾಮೆರಾ ಫೋನ್ ಹೊಸ ಅಲೆಯನ್ನು ಹುಟ್ಟಿಸಲಿದೆ.

ಮಾರುಕಟ್ಟೆಗೆ ಲಗ್ಗೆ ಇಟ್ಟ ಬ್ರಾಂಡೆಡ್ ಡ್ಯುಯಲ್ ಕ್ಯಾಮೆರಾ ಫೋನ್:

ಈಗಾಗಲೇ ಮಾರುಕಟ್ಟೆಗೆ ಹಲವು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ ಸ್ವೈಪ್ ಕಂಪನಿ, ಈ ಬಾರಿ ಎಲೈಟ್ ಡ್ಯುಯಲ್ ಸ್ಮಾರ್ಟ್‌ಫೋನ್‌ ಅನ್ನು ಪರಿಚಯ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದು, ರೂ.3999ಕ್ಕೆ ಡ್ಯುಯಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಗ್ರಾಹಕರ ಕೈಗೆ ಇಟ್ಟಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಎಲೈಟ್ ಡ್ಯುಯಲ್ ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗದ್ದು, 8MP + 2MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಸೆಲ್ಪಿಗಾಗಿ ಫ್ಲಾಷ್ ಲೈಟ್ ಸಹ ಕೊಡಲಾಗಿದೆ.

1GB RAM- 8GB ಮೆಮೊರಿ:

1GB RAM- 8GB ಮೆಮೊರಿ:

ಎಲೈಟ್ ಡ್ಯುಯಲ್ ಸ್ಮಾರ್ಟ್‌ಫೋನ್‌ ನಲ್ಲಿ 1.3GHz ವೇಗದ ಪ್ರೋಸೆಸರ್ ನೊಂದಿಗೆ 1GB RAM ಮತ್ತು 8GB ಇಂಟರ್ನಲ್ ಮೆಮೊರುನ್ನು ನೋಡಲಾಗಿದೆ. ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 32GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಸಾಧ್ಯತೆಯನ್ನು ನೀಡಲಾಗಿದೆ.

4G VoLTE

4G VoLTE

ಎಲೈಟ್ ಡ್ಯುಯಲ್ ಸ್ಮಾರ್ಟ್‌ಫೋನ್‌ 4G VoLTE ಸಪೋರ್ಟ್‌ ಮಾಡಲಿದ್ದು, ನೀವು ಜಿಯೋ ಸಿಮ್‌ ಅನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಉತ್ತಮವಾದ ವಾಯ್ಸ್ ಕಾಲ್ ಮಾಡಬಹುದಾಗಿದೆ.

ಆಂಡ್ರಾಯ್ಡ್ 7:

ಆಂಡ್ರಾಯ್ಡ್ 7:

ಇದಲ್ಲದೇ ಎಲೈಟ್ ಡ್ಯುಯಲ್ ಸ್ಮಾರ್ಟ್‌ಫೋನ್‌ ನಲ್ಲಿ ಆಂಡ್ರಾಯ್ಡ್ 7 ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದ್ದು, ಮೂರು ಬಣ್ಣದಲ್ಲಿ ದೊರೆಯಲಿದೆ. ಗೋಲ್ಡ್, ಸಿಲ್ವರ್ ಮತ್ತು ಬ್ಲಾಕ್ ಬಣ್ಣದಲ್ಲಿ ಲಭ್ಯವಿರಲಿದೆ.

Bike-Car ಜಾತಕ ಹೇಳುವ ಆಪ್..!
3000 mAh ಬ್ಯಾಟರಿ:

3000 mAh ಬ್ಯಾಟರಿ:

ಎಲೈಟ್ ಡ್ಯುಯಲ್ ಸ್ಮಾರ್ಟ್‌ಫೋನ್‌ ನಲ್ಲಿ ನೀವು ದೊಡ್ಡ ಬ್ಯಾಟರಿಯನ್ನು ನೋಡಬಹುದಾಗಿದ್ದು, ಕಂಪನಿಯ ಪ್ರಕಾರ 3000 mAh ಬ್ಯಾಟರಿ ಎರಡು ದಿನಗಳ ಬ್ಯಾಕಪ್ ನೀಡಲಿದೆ ಎನ್ನಲಾಗಿದೆ. ಮಾರ್ಚ್ 8 ರಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

Best Mobiles in India

English summary
Swipe Elite Dual is India’s most affordable Dual Camera Phone at Rs. 3999. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X