ಸ್ವೈಪ್‌ನಿಂದ ಕಡಿಮೆ ಬೆಲೆಯ ಫ್ಯಾಬ್ಲೆಟ್ ಬಿಡುಗಡೆ
ಸ್ವೈಪ್ ಕಂಪೆನಿ ಮಾರುಕಟ್ಟೆಗೆ ಕಡಿಮೆ ಬೆಲೆಯ ಫ್ಯಾಬ್ಲೆಟ್ ಬಿಡುಗಡೆ ಮಾಡಿದೆ.ಸ್ವೈಪ್ ಹಲೊ ಫೋನ್ ಫ್ಯಾಬ್ಲೆಟ್ ಬಿಡುಗಡೆ ಮಾಡಿದ್ದು,6999 ರೂಪಾಯಿ ಬೆಲೆಯನ್ನು ನಿಗದಿಪಡಿಸಿದೆ.
ಫ್ಯಾಬ್ಲೆಟ್ 183x101x9 ಮಿ.ಮೀ ಗಾತ್ರವನ್ನು ಹೊಂದಿದ್ದು,235 ಗ್ರಾಂ ತೂಕವನ್ನು ಹೊಂದಿದೆ. ಡ್ಯುಯಲ್ ಸಿಮ್ ಫ್ಯಾಬ್ಲೆಟ್ ಇದಾಗಿದ್ದು ಒಂದು ಸಿಮ್ ಸ್ಲಾಟ್ 3ಜಿಗೆ ಬೆಂಬಲ ನೀಡಿದ್ದರೆ,ಇನ್ನೊಂದು ಸ್ಲಾಟ್ 2ಜಿಗೆ ಬೆಂಬಲ ನೀಡುತ್ತದೆ.6.5 ಇಂಚಿನ ಎಲ್‌ಸಿಡಿ ಸ್ಕ್ರೀನ್ ಹೊಂದಿರುವ ಫ್ಯಾಬ್ಲೆಟ್,ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್,1.3 GHz ಮೀಡಿಯಾ ಟೆಕ್ ಪ್ರೊಸೆಸರ್,ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 2 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಒಳಗೊಂಡಿದೆ.

ಸ್ವೈಪ್ ಹಲೊ ಫೋನ್
ವಿಶೇಷತೆ:
ಡ್ಯುಯಲ್ ಸಿಮ್(3ಜಿ +2ಜಿ)
6.5 ಇಂಚಿನ ಎಲ್‌ಸಿಡಿ ಸ್ಕ್ರೀನ್(800 x 480 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.3 GHz ಕೋರ್ ಮೀಡಿಯಾ ಟೆಕ್ ಪ್ರೊಸೆಸರ್
2 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್)
ಮುಂದುಗಡೆ ವಿಜಿಎ ಕ್ಯಾಮೆರಾ
512 ಎಂಬಿ ರ್‍ಯಾಮ್
4ಜಿಬಿ ಆಂತರಿಕ ಮೆಮೊರಿ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2800 mAh ಬ್ಯಾಟರಿ


Click it and Unblock the Notifications








