Subscribe to Gizbot

ನೋಕಿಯಾC7ಗೆ ಸಿಂಬಿಯನ್ ಬೆಲ್ಲೆ ಆಪರೇಟಿಂಗ್ ಸಿಸ್ಟಮ್

Posted By:
ನೋಕಿಯಾC7ಗೆ ಸಿಂಬಿಯನ್ ಬೆಲ್ಲೆ ಆಪರೇಟಿಂಗ್ ಸಿಸ್ಟಮ್

ಸಾಕಷ್ಟು ಜನರು ಯಾವುದಾದರೂ ವಸ್ತುಗಳನ್ನು ಕೊಳ್ಳಬೇಕೆಂದರೆ ಕಂಪನಿ ಬ್ರಾಂಡ್ ಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಾರೆ, ಅದರಲ್ಲೂ ನೋಕಿಯಾ ಬ್ರಾಂಡ್ ಜನರ ನಂಬಿಕೆಯನ್ನು ಗಳಿಸಿರುವುದರಿಂದ ಹೆಚ್ಚಿನವರು ನೋಕಿಯಾ ಬ್ರಾಂಡ್ ವಸ್ತುಗಳನ್ನೇ ಕೊಳ್ಳಬಯಸುತ್ತಾರೆ. ನೋಕಿಯಾ ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ವಾಸಿಯಾಗಿರುವ ಕಂಪನಿ. ಇದೀಗ ನೋಕಿಯಾ ಹಳೆಯ ಮಾಡಲ್ ಫೋನ್ ಗಳಲ್ಲಿ ಸಿಂಬಿಯನ್ ಅನ್ನಾ ಪ್ಲಾಟ್ ಫಾರ್ಮ್ ಬದಲು ಹೊಸದಾದ ಹೊಸ ಸಿಂಬಿಯನ್ ಬೆಲ್ಲೆ ಪರಿಷ್ಕ್ರತ ಆಯಾಮವನ್ನು ಬಳಸಲಾಗುವುದು ಎಂದು ಘೋಷಿಸಿದೆ.

ನೋಕಿಯಾದ ಹೊಸ ಮಾಡಲ್ 'ನೋಕಿಯಾ 701'ರಲ್ಲಿ ಸಿಂಬಿಯನ್ ಬೆಲ್ಲೆ ಆಯಾವನ್ನು ಬಳಸಿದ್ದು ಇದನ್ನು ಹಳೆಯ ನೋಕಿಯಾ C7 ಗೆ ಹೋಲಿಸಿದಾಗ ನೋಕಿಯಾ 701 ಕಾರ್ಯವೈಖರಿಯಲ್ಲಿ ಮುಂದಿದೆ. ಈ ಹೊಸ ಆಯಾಮವನ್ನು ಅಳವಡಿಸಿಕೊಳ್ಳಬೇಕು ಎಂದು ಬಯಸಿದವರು ಇದನ್ನು ಪಡೆದುಕೊಳ್ಳಬಹುದಾಗಿದ್ದು , ಅದಕ್ಕಾಗಿ ಫಿಯೋನೆಕ್ಸ್ ಸಾಧನವನ್ನು ಬಳಸಿ ಫೋನ್ ನಲ್ಲಿ ಫ್ಲಾಶ್ ಬರುವಂತೆ ಮಾಡಿ ಸಿಂಬಿಯನ್ ಬೆಲ್ಲೆ ಆಪರೇಟಿಂಗ್ ಸಿಸ್ಟಮ್ ಅಳವಡಿಸಿ ಕೊಳ್ಳಬಹುದಾಗಿದೆ.

ಯಾವುದೇ ನೋಕಿಯಾ ಮೊಬೈಲ್ ಸಿಂಬಿಯನ್ ಬೆಲ್ಲೆ ಆಪರೇಟಿಂಗ್ ಸಿಸ್ಟಮ್ ಗೆ ಬದಲಾಯಿಸಬೇಕಾದರೆ ಅದರಲ್ಲಿ ಸಿಂಬಿಯನ್ ಅನ್ನಾ ಫ್ಲಾರ್ಮ್ ಕಡ್ಡಾಯವಾಗಿದೆ.ನೊಕಿಯಾ C7 ತುಂಬಾ ಜನರ ಮೆಚ್ಚಿನ ಫೋನ್ ಆಗಿದ್ದು 117.3 mm x 56.8 mm x 10.5 mm ಡೈಮೆಂಶನ್ ಮತ್ತು 130 ಗ್ರಾಂ ತೂಕ ಹೊಂದಿದೆ. ಇದರಲ್ಲಿ ARM ಪ್ರೊಸೆಸರ್ ಬಳಸಲಾಗಿದೆ, ಈಗ ಇದನ್ನು ಸಿಂಬಿಯನ್ ಬೆಲ್ಲೆ ಆಪರೇಟಿಂಗ್ ಸಿಸ್ಟಮ್ ಗೆ ಬದಲಾಯಿಸ ಬಹುದಾದರಿಂದ ಇದರ ಗುಣ ಮಟ್ಟ ಹೆಚ್ಚಿ ಇದರ ಬಳಕೆದಾರರಿಗೆ ಮತ್ತಷ್ಟು ಖುಷಿ ತರಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot