ಅನಿರ್ದಿಷ್ಟ ಪೋಸ್ಟ್‌ಪೇಡ್ ಯೋಜನೆಗಳೊಂದಿಗೆ ಡೊಕೊಮೊ 3ಜಿ
ತನ್ನ ರೀಟೇಲ್ ಅಸ್ತಿತ್ವವನ್ನು ಹೆಚ್ಚಿಸುವ ಉದ್ದೇಶದಿಂದ ಕೊನೆಗೂ ಡೊಕೊಮೊ ಕರ್ನಾಟಕದಲ್ಲಿ 3ಜಿ ಯೋಜನೆಗಳನ್ನು ಲಾಂಚ್ ಮಾಡಿದೆ. ಏರ್‌ಟೆಲ್‌ನ 4 ಜಿ ಹೆಚ್ಚುಗಾರಿಕೆಯ ಎದುರು ಡೊಕೊಮೊದ ಈ ಯೋಜನೆ ತುಸು ಸಪ್ಪೆಯಾಗಿದ್ದರೂ ಡೊಕೊಮೊ ದೇಶದಲ್ಲಿ 19 ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅದಾಗ್ಯೂ, ಹಿಂದೆಂದಿಗಿಂತಲೂ ಉತ್ತಮವಾಗಿ, ಡೊಕೊಮೊ ತನ್ನ 3ಜಿ ನೆಟ್‌ವರ್ಕ್ ಕವರೇಜ್ ಮತ್ತು ಅಸ್ತಿತ್ವವನ್ನು 1000 ಸೆಲ್ ಸೈಟ್‌ಗಳಲ್ಲಿ ವರ್ಧಿಸಿದ್ದು ಈ ಸೇವೆಯನ್ನು ಇನ್ನಷ್ಟು ಹೆಚ್ಚಿಸುವ ಇರಾದೆ ಕಂಪೆನಿಗಿದೆ. ಕರ್ನಾಟಕದಾದ್ಯಂತ 53 ನಗರಗಳನ್ನು ತಲುಪುವ ಇರಾದೆ ಕಂಪೆನಿಗಿದ್ದು ಕೆಲವೊಂದು ಮುಖ್ಯ ಪ್ರದೇಶಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸುವ ಬಯಕೆ ಡೊಕೊಮೊದ್ದಾಗಿದೆ.

ಮುಖ್ಯ 10 ನಗರಗಳಾದ ಬೆಂಗಳೂರು, ಮೈಸೂರ್, ಮಂಗಳೂರು, ಮಣಿಪಾಲ, ಉಡುಪಿ, ಹುಬ್ಬಳ್ಳಿ, ಬೆಳಗಾಂ, ಧಾರವಾಡ, ಹೊಸ್ಪೇಟ್ ಮತ್ತು ಗುಲ್ಬರ್ಗಾದಲ್ಲಿ ತನ್ನ ಸೇವೆಯನ್ನು ಹೆಚ್ಚಿಸುವ ಮತ್ತು ಇನ್ನಷ್ಟು ಬಲಪಡಿಸುವ ಇರಾದೆ ಕಂಪೆನಿಯದ್ದಾಗಿದೆ. ತನ್ನ ಸಾಧನೆಯನ್ನು ಇನ್ನಷ್ಟು ಹೆಚ್ಚಿಸುವ ಯೋಜನೆಯನ್ನು ಕಂಪೆನಿ ಮಾಡಿದ್ದು ಅದು ಯಾವ ರೀತಿಯಲ್ಲಿ ಎಂಬುದನ್ನು ಅದು ಸ್ಪಷ್ಟಪಡಿಸಿಲ್ಲ.
ಕರ್ನಾಟಕ ವಲಯದ ಮುಖ್ಯಸ್ಥರಾದ ರೋಹಿತ್ ತಂಡಾನ್ ಹೇಳುವಂತೆ, ಸಣ್ಣ ಮತ್ತು ದೊಡ್ಡ ರಂಗಗಳಲ್ಲಿ ಹೆಚ್ಚುತ್ತಿರುವ ಮಾರುಕಟ್ಟೆ ಬೆಳವಣಿಗೆಯನ್ನು ಜಿಎಸ್‌ಎಮ್ ಹಾಗೂ ಸಿಡಿಎಮ್ ಪ್ಲಾಟ್‌ಫಾರ್ಮ್‌ಗಳಲ್ಲಿ ತಲುಪಿಸುವ ಯೋಜನೆ ನಮ್ಮದಾಗಿದ್ದು ಅದಕ್ಕಾಗಿ ನಾವು ಸಕ್ರಿಯಗೊಂಡಿದ್ದೇವೆ ಎಂದವರು ಹೇಳಿದ್ದಾರೆ.
ಇದೇ ಸಮಯದಲ್ಲಿ ಟಾಟಾ ಡೊಕೊಮೊ, ಇನ್ನಷ್ಟು ಉತ್ತಮ ಕೊಡುಗೆಗಳನ್ನು ಕರ್ನಾಟಕದ ಜನತೆಗೆ ಒದಗಿಸುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು ಇಲ್ಲಿನ ಜನತೆಯ ಬೆಂಬಲವೇ ನಮಗೆ ಇನ್ನಷ್ಟು ಸಾಧನೆಗಳನ್ನು ಮಾಡಲು ಪ್ರೇರೇಪಿಸುತ್ತಿದೆ ಎಂದು ರೋಹಿತ್ ತಂಡಾನ್ ತಿಳಿಸಿದ್ದಾರೆ. ಟಾಟಾ ಡೊಕೊಮೊ ಈಗ ಮಾರುಕಟ್ಟೆಯಲ್ಲಿ ಸ್ವಲ್ಪ ಮುಂದಿದ್ದು ಉತ್ತಮವಾಗಿ ಗ್ರಾಹಕರಿಗೆ ನೆರವಾಗುವ ನೆಟ್‌ವರ್ಕ್ ಆಗಿ ಪ್ರೇರಣೆಯನ್ನು ನೀಡುತ್ತಿದೆ.
ಪ್ರಸ್ತುತ ಡೊಕೊಮೊವು 3ಜಿಯ 100 ಎಮ್‌ಬಿ ಡೇಟಾವನ್ನು ಉಚಿತವಾಗಿ ನೀಡುತ್ತಿದ್ದು ಇದರ ಮೌಲ್ಯ ರೂ 155 ರೂಗಳಾಗಿದೆ. ಇದರಲ್ಲಿ ಗ್ರಾಹಕರು 1ಜಿಬಿ ಡೇಟಾವನ್ನು 30 ದಿನಗಳ ಕಾಲ ಪಡೆಯಬಹುದಾಗಿದೆ.


Click it and Unblock the Notifications








