ಮಹಿಳೆಯ ರಕ್ಷಣೆಗೆ ಬಂದಿದೆ ಫೈಟ್‌ಬ್ಯಾಕ್‌ ಅಪ್ಲಿಕೇಶನ್‌

Posted By: Staff

 

ಮಹಿಳೆಯ ರಕ್ಷಣೆಗೆ ಬಂದಿದೆ ಫೈಟ್‌ಬ್ಯಾಕ್‌ ಅಪ್ಲಿಕೇಶನ್‌

ಮಹಿಳೆಯರಿಗೆ ಒಂದು ಗುಡ್‌ನ್ಯೂಸ್‌. ನಗರದಲ್ಲಿ ಸಂಚರಿಸುವ ಮಹಿಳೆಯರ ರಕ್ಷಣೆಗಾಗಿ ಟೆಕ್‌ ಮಹೀಂದ್ರಾ ಒಂದು 'ಫೈಟ್‌ಬ್ಯಾಕ್‌ 'ಅಪ್ಲಿಕೇಶನ್‌ ತಯಾರಿಸಿದೆ. ಈ ಅಪ್ಲಿಕೇಶನ್‌ ಮುಖಾಂತರ ತೊಂದರೆಯಲ್ಲಿರುವ ವ್ಯಕ್ತಿ ಒಂದು ಸಿಂಗಲ್‌ ಬಟನ್‌ ಪ್ರೆಸ್‌ ಮಾಡಿದ್ರೆ ಸಾಕು ತೊಂದರೆಯಲ್ಲಿದ್ದರೆ ಆ ವ್ಯಕ್ತಿಯ ಸ್ಥಳವನ್ನು ಪತ್ತೆಹಚ್ಚಬಹುದು. ಈ ಅಪ್ಲಿಕೇಷನ್‌ ನಿಮ್ಮ ಸ್ಥಳವನ್ನು ಜಿಪಿಎಸ್‌ ಮುಖಾಂತರ ಪತ್ತೆಹಚ್ಚಿ ಆಪ್ತರಿಗೆ ಮೆಸೆಜ್‌ ಕಳುಹಿಸುತ್ತದೆ.

ನೀವು ಫೈಟ್‌ ಬ್ಯಾಕ್‌ ಸೈಟ್‌ಗೆ ಹೋಗಿ ಜಾಯಿನ್‌ ಆಗಿ ನಿಮ್ಮ ಐದು ಜನ ಆಪ್ತರ ಮೊಬೈಲ್‌ ನಂ ಮತ್ತು ಇಮೇಲ್‌ ಐಡಿಯನ್ನು ಇದರಲ್ಲಿ ನಮೂದಿಸಬೇಕು. ಒಂದು ವೇಳೆ ನೀವು ಫೇಸ್‌ಬುಕ್‌ ಲಾಗಿನ್‌ ಆದ್ರೆ ನೀವು ತೊಂದರೆಯಲ್ಲಿದ್ದಾಗ ಈ ಅಪ್ಲಿಕೇಶನ್‌ ಬಳಸಿದರೆ ನಿಮ್ಮ ಫೇಸ್‌ಬುಕ್‌ನಲ್ಲೂ ನಿಮ್ಮ ಮಾಹಿತಿ ಪೊಸ್ಟ್‌ ಆಗುತ್ತದೆ.

ಈ ಆಪ್ಲಿಕೇಶನ್‌ನ್ನು ಟೆಕ್‌ ಮಹೀಂದ್ರ ಒಂದು ವರ್ಷ ಹಿಂದೆ ಬಿಡುಗಡೆ ಮಾಡಿತ್ತು. ಆದ್ರೆ ಒಂದು ವರ್ಷಕ್ಕೆ 100 ರೂಪಾಯಿ ನೀಡಿ ಚಂದದಾರರಾದ್ರೆ ಆದ್ರೆ ಮಾತ್ರ ನೀವು ಈ ಆಪ್ಲಿಕೇಶನ್‌ ಬಳಸಬಹುದಿತ್ತು. ಈಗ ದೆಹಲಿ ಗ್ಯಾಂಗ್‌ ರೇಪ್‌ ನಡೆದ ಬಳಿಕ ಟೆಕ್‌ ಮಹೀಂದ್ರಾ ಈ ಆಪ್ಲಿಕೇಶನ್‌ ಉಚಿತವಾಗಿ ನೀಡಿದೆ. ನಿಮಗೆನಾದ್ರೂ ಈ ಆಪ್ಲಿಕೇಶನ್‌ ಇಷ್ಟವಾಗಿ ಫೈಟ್‌ಬ್ಯಾಕ್‌ ವೆಬ್‌ಸೈಟ್‌ ನೋಡಬೇಕಾದ್ರೆ ಇಲ್ಲಿ ಕ್ಲಿಕ್ಕಿಸಬಹುದು

ಮಹೀಂದ್ರ ಫೈಟ್‌ಬ್ಯಾಕ್‌ ಅಪ್ಲಿಕೇಶನ್‌

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot