Home
ಮೊಬೈಲ್

3000 ಅಗ್ಗ! 100MP ಬ್ಯಾಕ್ ಕ್ಯಾಮೆರಾ.. 50MP ಸೆಲ್ಫಿ ಕ್ಯಾಮೆರಾ.. ಕಡಿಮೆ ಬೆಲೆಗೆ ಸೊಗಸಾದ ಫೋನ್!

ಅಮೆಜಾನ್‌ ಹಬ್ಬದ ದಿನಗಳಲ್ಲಿ ಮಾತ್ರವಲ್ಲದೆ ಸಾಮಾನ್ಯ ದಿನಗಳಲ್ಲಿಯೂ ಬೊಂಬಾಟ್ ಆಫರ್‌ಗಳನ್ನು ನೀಡುತ್ತದೆ. ಹೀಗಾಗಿಯೇ, ಆನ್‌ಲೈನ್‌ ಶಾಪಿಂಗ್‌ ಪ್ರಿಯರ ಫೆವರೇಟ್‌ ತಾಣ ಎನಿಸಿಕೊಂಡಿದೆ. ಪ್ರಸ್ತುತ, ಟೆಕ್ನೋ ಕ್ಯಾಮನ್ 30 5G (Tecno Camon 30 5G) ಫೋನಿನ ಬೆಲೆಯನ್ನು ಇಳಿಕೆ ಮಾಡಿದೆ. ನಿಮಗೆ ಶೇ.18 ರಷ್ಟು ಡಿಸ್ಕೌಂಟ್‌ ಸಿಗುತ್ತದೆ. ಜೊತೆಗೆ, ಶೇ.10 ರಷ್ಟು ಕ್ಯಾಶ್‌ಬ್ಯಾಕ್‌ ಮತ್ತು ಎಕ್ಸ್‌ಚೇಂಜ್ ಆಫರ್‌ ಲಭ್ಯವಿದೆ. ನೀವು, 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಈ ಫೋನನ್ನು ಖರೀದಿಸಬಹುದು. ಬನ್ನಿ, ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಟೆಕ್ನೋ ಕ್ಯಾಮನ್ 30 5G ಮೊಬೈಲ್ ಈ ವರ್ಷದ ಮೇ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಇದು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ನೀವು, ಸಾಲ್ಟ್ ವೈಟ್ ಮತ್ತು ಬಾಲಾಸ್ಟಿಕ್ ಡಾರ್ಕ್ ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನ್ 100 ಮೆಗಾಪಿಕ್ಸೆಲ್ ಮುಖ್ಯ ಮತ್ತು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 6.78 ಇಂಚಿನ ಡಿಸ್ಪ್ಲೇ, 256GB ಸ್ಟೋರೇಜ್‌, 5000mAh ಬ್ಯಾಟರಿ ಮತ್ತು 70W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

3000 ಅಗ್ಗ! 100MP ಬ್ಯಾಕ್ ಕ್ಯಾಮೆರಾ.. 50MP ಸೆಲ್ಫಿ ಕ್ಯಾಮೆರಾ.. ಯಾವ ಫೋನ್?

ಟೆಕ್ನೋ ಕ್ಯಾಮನ್ 30 5G ಬೆಲೆ ಮತ್ತು ಆಫರ್‌ಗಳು

ಕಂಪನಿಯು ಟೆಕ್ನೋ ಕ್ಯಾಮನ್ 30 5G ಫೋನಿನ 8GB RAM+256GB ಸ್ಟೋರೇಜ್‌ ರೂಪಾಂತರವನ್ನು 2,999 ರೂ.ಗೆ ಬಿಡುಗಡೆ ಮಾಡಿತ್ತು. 12GB RAM+256GB ಸ್ಟೋರೇಜ್‌ ಆಯ್ಕೆಯು 26,999 ರೂ.ಗೆ ಲಭ್ಯವಿದೆ. ಪ್ರಸ್ತುತ, ಅಮೆಜಾನ್‌ನಲ್ಲಿ ಈ ಎರಡೂ ರೂಪಾಂತರಗಳ ಮೇಲೆ 3000 ರೂ. ಕೂಪನ್ ರಿಯಾಯಿತಿ ನೀಡಲಾಗುತ್ತಿದೆ. ಡಿಸ್ಕೌಂಟ್‌ ಬಳಿಕ, ಈ ಫೋನ್‌ 19,999 ರೂ. ಮತ್ತು 23,999 ರೂ.ಗೆ ಲಭ್ಯವಿದೆ. ಜೊತೆಗೆ, 10% ಕ್ಯಾಶ್‌ಬ್ಯಾಕ್‌ ಮತ್ತು ಎಕ್ಸ್‌ಚೇಂಜ್ ಆಫರ್‌ ಸಹ ಲಭ್ಯವಿದೆ.

ಟೆಕ್ನೋ ಕ್ಯಾಮನ್ 30 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ?

ಟೆಕ್ನೋ ಕ್ಯಾಮನ್ 30 5G ಮೊಬೈಲ್ 6.78 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ಪೂರ್ಣ ಹೆಚ್‌ಡಿ ಪ್ಲಸ್ LTPS ಅಮೋಲೆಡ್ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 1080 x 2436 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು 120Hz ರಿಫ್ರೆಶ್ ದರ ಮತ್ತು 1200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಹೊಂದಿದೆ.

ಪ್ರೊಸೆಸರ್ ಯಾವುದು?

ಕಂಪನಿಯು ಟೆಕ್ನೋ ಕ್ಯಾಮನ್ 30 5G ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಇದನ್ನು 4 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ ಹೈ ಓಎಸ್‌ 14ನಲ್ಲಿ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ, ಈ ಫೋನ್ ಮಾಲಿ G610 ಜಿಪಿಯು ಹೊಂದಿದೆ.

3000 ಅಗ್ಗ! 100MP ಬ್ಯಾಕ್ ಕ್ಯಾಮೆರಾ.. 50MP ಸೆಲ್ಫಿ ಕ್ಯಾಮೆರಾ.. ಯಾವ ಫೋನ್?

ಸ್ಟೋರೇಜ್ ಆಯ್ಕೆ

ಟೆಕ್ನೋ ಕ್ಯಾಮನ್ 30 5G ಸ್ಮಾರ್ಟ್‌ಫೋನ್ 8GB RAM ಮತ್ತು 12GB RAM ನೊಂದಿಗೆ ಬಿಡುಗಡೆಯಾಗಿದೆ. ಈ ಎರಡೂ ರೂಪಾಂತರಗಳು 256GB ಸ್ಟೋರೇಜ್‌ ಆಯ್ಕೆ ಹೊಂದಿವೆ.

100MP ಡ್ಯುಯಲ್ ಕ್ಯಾಮೆರಾ

ಟೆಕ್ನೋ ಕ್ಯಾಮನ್ 30 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ OIS ಬೆಂಬಲದೊಂದಿಗೆ 100 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಪವರ್ ಫುಲ್ ಬ್ಯಾಟರಿ

ಟೆಕ್ನೋ ಕ್ಯಾಮನ್ 30 5G ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 70W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಕೇವಲ 19 ನಿಮಿಷಗಳಲ್ಲಿ ಈ ಫೋನ್ 0 ರಿಂದ ಶೇ.50 ರಷ್ಟು ಚಾರ್ಜ್ ಆಗುತ್ತದೆ.

Best Mobiles in India

English summary
Tecno Camon 30 5G available with with huge discount on amazon: know new price, offers, availability specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+