Home
ಮೊಬೈಲ್

ಇಂದಿನಿಂದ ಸೇಲ್‌ ಆಗಲಿದೆ ಟೆಕ್ನೋ ಕ್ಯಾಮನ್ 30 5G; ಬೆಲೆ ಎಷ್ಟು?

ನೀವು ಫೋಟೋಗ್ರಫಿ ಪ್ರಿಯರಾಗಿದ್ದು, ಫೋಟೋಗ್ರಫಿಗಾಗಿ ಉತ್ತಮ ಫೋನ್ ಖರೀದಿಸಲು ಹುಡುಕುತ್ತಿದ್ದರೆ, ಇತ್ತೀಚೆಗೆ ಬಿಡುಗಡೆ ಮಾಡಿರುವ ಟೆಕ್ನೋ ಕ್ಯಾಮನ್ 30 5G (Tecno Camon 30 5G) ಮೊಬೈಲ್‌ ಖರೀದಿಸುವುದು ಉತ್ತಮ ಆಯ್ಕೆಯಾಗಿದೆ.ಇತ್ತೀಚೆಗೆ ಟೆಕ್ನೋ Camon 30 5G ಸರಣಿಯ ಎರಡು ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಇಂದು ಎರಡೂ ಫೋನ್‌ಗಳ ಮೊದಲ ಮಾರಾಟವು ಆರಂಭವಾಗಲಿದೆ.

ಟೆಕ್ನೋ ಕಂಪನಿಯು ಈ ಫೋನ್ ಅನ್ನು ಕ್ಯಾಮೆರಾ ಮಾಸ್ಟರ್ ಟ್ಯಾಗ್‌ನೊಂದಿಗೆ ಬಿಡುಗಡೆಗೊಳಿಸಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಇದರ ಮಾರಾಟ ಆರಂಭವಾಗಲಿದ್ದು, ಇಂದು ವಿಶೇಷ ಬೆಲೆಯಲ್ಲಿ ಈ ಫೋನ್ ಖರೀದಿಸಲು ಅವಕಾಶವಿದೆ.

ಇಂದಿನಿಂದ ಸೇಲ್‌ ಆಗಲಿದೆ ಟೆಕ್ನೋ ಕ್ಯಾಮನ್ 30 5G; ಬೆಲೆ ಎಷ್ಟು?

ಕಂಪನಿಯು ಟೆಕ್ನೋ ಕ್ಯಾಮನ್ 30 5G ಮೊಬೈಲ್‌ ಅನ್ನು ಎರಡು ಬೇರೆ ಬೇರೆ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ, 8GB+256GB ಸ್ಟೋರೇಜ್ ಹೊಂದಿರುವ ಮೊಬೈಲ್‌ಗೆ 27,999 ರೂ. ಆರಂಭಿಕ ಬೆಲೆ ಹಾಗೂ 12GB+512GB ಸ್ಟೋರೇಜ್ ಹೊಂದಿರುವ ಮೊಬೈಲ್‌ಗೆ 32,999 ರೂ. ಬೆಲೆ ಹೊಂದಿದೆ.

ಸೇಲ್ ನಲ್ಲಿ 20,000 ರೂ. ಗಿಂತಲೂ ಕಡಿಮೆ ಬೆಲೆಗೆ ಫೋನ್ ಖರೀದಿಸಲು ಅವಕಾಶವಿರುತ್ತದೆ. ಇನ್ನು ಹೆಚ್ಚುವರಿಯಾಗಿ ಮೊಬೈಲ್‌ ಜೊತೆಗೆ 4,999 ರೂ ಬೆಲೆಯೆ ಅಮೋಲ್ಡ್ (AMOLED) ಸ್ಮಾರ್ಟ್‌ವಾಚ್ ಅನ್ನು ನೀಡಲಾಗುತ್ತಿದ್ದು, ಈ ವಾಚ್‌ಗೆ ಯಾವುದೇ ಬೆಲೆಯನ್ನು ಪಾವತಿಸಬೇಕಾಗಿಲ್ಲ ಎಂದು ಕಂಪನಿ ತಿಳಿಸಿದೆ.

ಇದರ ಜೊತೆಗೆ ಮೊಬೈಲ್‌ ಅನ್ನು ಬ್ಯಾಂಕ್ ರಿಯಾಯಿತಿಯೊಂದಿಗೆ ಖರೀದಿಸಿದರೆ 3,000 ರೂ. ಉಳಿಸುವ ಅವಕಾಶವೂ ಇರಲಿದೆ.
ಟೆಕ್ನೋ ಕ್ಯಾಮನ್ 30 5G (Tecno Camon 30 5G) ಮೊಬೈಲ್‌ ಖರೀದಿ ಎಲ್ಲಿ: ಮಾರಾಟ ಪ್ರಕ್ರಿಯೆ ಆರಭವಾದ ಬಳಿಕ ಜನಪ್ರಿಯ ಇ-ಕಾಮರ್ಸ್ ತಾಣವಾಗಿರುವ ಅಮೇಜಾನ್ ( Amazon) ಮೂಲಕ ಈ ಸ್ಮಾರ್ಟ್‌ಫೋನ್‌ ಅನ್ನು ಗ್ರಾಹಕರು ಖರೀದಿಸಬಹುದಾಗಿದೆ.

ಜೊತಗೆ ಗ್ರಾಹಕರು ಈ ಟೆಕ್ನೋ ಫೋನ್ ಅನ್ನು ಯುಯುನಿ ಸಾಲ್ಟ್ ವೈಟ್ (Uyuni Salt White) ಮತ್ತು ಐಸ್ಲ್ಯಾಂಡ್ ಬಸಾಲ್ಟಿಕ್ ಡಾರ್ಕ್ (Iceland Basaltic Dark) ಎರಡು ಬಣ್ಣಗಳಲ್ಲಿ ಲಭ್ಯವಿದ್ದು ಗ್ರಾಹಕರು ಈ ಬಣ್ಣಗಳಲ್ಲಿ ಖರೀದಿಸುವ ಅವಕಾಶ ನೀಡಲಾಗಿದೆ.

ಟೆಕ್ನೋ ಕ್ಯಾಮನ್ 30 5G ಮೊಬೈಲ್‌ನ ಫೀಚರ್ಸ್:

ಡಿಸ್‌ಪ್ಲೇ: ಈ ಮೊಬೈಲ್ 6.68 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ 1200 nits ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. ಇದರ ಜೊತೆಗೆ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸಹ ಒಳಗೊಂಡಿವೆ.

ಪ್ರೊಸೆಸರ್: ಟೆಕ್ನೋ ಕ್ಯಾಮನ್ 30 5G ಮೊಬೈಲ್ 6nm ಮೀಡಿಯಾ ಟೆಕ್ ಡೈಮೆನ್ಸಿಟಿ ಜೊತೆಗೆ 7020 ಚಿಪ್ ಹೊಂದಿದೆ.

ಕ್ಯಾಮೆರಾ: ಟೆಕ್ನೋ ಕ್ಯಾಮನ್‌ 30 5G ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 100 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದುಕೊಂಡಿದೆ. ಇದರ ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಈ ಫೋನ್‌ 50 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಸೆನ್ಸಾರ್‌ ಅನ್ನು ಒಳಗೊಂಡಿದೆ.

ಬ್ಯಾಟರಿ: ಈ ಮೊಬೈಲ್ 70W ವೈರ್ಡ್ ಚಾರ್ಜಿಂಗ್ ಬೆಂಬಲದ ಜೊತೆಗೆ 5000mAh ಬ್ಯಾಟರಿ ಸೌಲಭ್ಯ ಹೊಂದಿದೆ.

ಟೆಕ್ನೋ ಕ್ಯಾಮನ್ 30 5G ಜೊತೆಗೆ ಟೆಕ್ನೋ ಕ್ಯಾಮನ್ 30 5G ಪ್ರೀಮಿಯರ್ ಮೊಬೈಲ್‌ಗಳ ಮಾರಾಟವು ನಿಖರವಾಗಿ ಇಂದು ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದ್ದು, ಈ ಫೋನ್ ಅನ್ನು 36,999 ರೂಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು.

Best Mobiles in India

English summary
Tecno Camon 30 5G series has recently launched two phones and the first sale of both the phones will start today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+