Subscribe to Gizbot

ಕಾಮನ್‌ ಮ್ಯಾನ್ ಕೊಂಡುಕೊಳ್ಳಬಹುದಾದ ಕ್ಯಾಮಾನ್ ಐ ಸ್ಮಾರ್ಟ್‌ಫೋನ್‌..!

Written By:

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ವಿದೇಶಿಯ ಸ್ಮಾರ್ಟ್‌ಫೋನ್‌ಗಳ ಹಾವಳಿಯು ಅಧಿಕವಾಗಿದ್ದು, ಇದೇ ಮಾದರಿಯಲ್ಲಿ ಹಾಂಕಾಂಗ್ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಟೆಕ್ನೋ ಹೊಸ ಸ್ಮಾರ್ಟ್‌ಫೋನ್‌ವೊಂದನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಬಜೆಟ್ ಬೆಲೆಯ ಈ ಸ್ಮಾರ್ಟ್‌ಫೋನಿನಲ್ಲಿ ಟಾಪ್ ಎಂಡ್ ವಿಶೇಷತೆಗಳನ್ನು ನೋಡಬಹುದಾಗಿದೆ.

ಕಾಮನ್‌ ಮ್ಯಾನ್ ಕೊಂಡುಕೊಳ್ಳಬಹುದಾದ ಕ್ಯಾಮಾನ್ ಐ ಸ್ಮಾರ್ಟ್‌ಫೋನ್‌..!

ಕ್ಯಾಮಾನ್ ಐ ಎನ್ನುವ ನೂತನ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಟಾಪ್ ವಿಶೇಷತೆಗಳನ್ನು ಹೊಂದಿರುವ ಬಜೆಟ್ ಸ್ಮಾರ್ಟ್‌ಫೋನ್ ಎನ್ನಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ರೆಡ್‌ಮಿ 5 ಮತ್ತು ಭಾರತ್ 5 ಪ್ರೋ ಸ್ಮಾರ್ಟ್‌ಫೋನ್‌ಗಳಿಗೆ ಪ್ರಭಲ ಸ್ಪರ್ಧೇಯನ್ನು ನೀಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ

ಡಿಸ್‌ಪ್ಲೇ

ಕ್ಯಾಮಾನ್ ಐ ಸ್ಮಾರ್ಟ್‌ಫೋನಿನಲ್ಲಿ 18:9 ಅನುಪಾತದ 5.65 ಇಂಚಿನ HD+ ಐಪಿಎಸ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸುರಕ್ಷತೆಯೂ ಇದಕ್ಕಿದೆ. ಇದರಲ್ಲಿ ವಿಡಿಯೋ ನೋಡುವ ಅನುಭವವು ಉತ್ತಮವಾಗಿರಲಿದೆ ಎಂದು ಕಂಪನಿಯೂ ತಿಳಿಸಿದೆ.

3GB RAM:

3GB RAM:

ಕ್ಯಾಮಾನ್ ಐ ಸ್ಮಾರ್ಟ್‌ಫೋನಿನಲ್ಲಿ 1.3GHz ವೇಗದ 64 ಬಿಟ್ ಕ್ವಾಡ್ ಕೋರ್ MediaTek MT6737 ಪ್ರೊಸೆಸರ್ ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ 3GB RAM ಮತ್ತು 32 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.

ಕ್ಯಾಮೆರಾ:

ಕ್ಯಾಮೆರಾ:

ಕ್ಯಾಮಾನ್ ಐ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 13MP ಕ್ಯಾಮೆರಾ ಕಾಣಬಹುದಾಗಿದೆ. ಮುಂಭಾಗದಲ್ಲಿ 13MP ಕ್ಯಾಮೆರಾವನ್ನು ನೀಡಲಾಗಿದೆ. 3,050 mAh ಬ್ಯಾಟರಿ ಸಹ ಈ ಸ್ಮಾರ್ಟ್‌ಫೋನಿನಲ್ಲಿ ಇದೆ.

ಆಂಡ್ರಾಯ್ಡ್:

ಆಂಡ್ರಾಯ್ಡ್:

ಕ್ಯಾಮಾನ್ ಐ ಸ್ಮಾರ್ಟ್‌ಫೋನ್ ನೂತನ ಆಂಡ್ರಾಯ್ಡ್ 7.0 ನೌಗಾಟ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ HiOS ಎಂಬ ಕಾರ್ಯಾಚರಣಾ ವ್ಯವಸ್ಥೆಯನ್ನು ಕಾಣಬಹುದಾಗಿದೆ. ಫಿಂಗರ್‌ಪ್ರಿಂಟ್ ಸೆನ್ಸರ್ ಇರುವ ಈ ಸ್ಮಾರ್ಟ್‌ಫೋನಿನಲ್ಲಿ 4ಜಿ VoLTE ಬಳಕೆ ಮಾಡಿಕೊಳ್ಳಬಹುದಾಗಿದೆ. .

Do you know what all u can do by Downloading Hike Messenger app.?
ಬೆಲೆ:

ಬೆಲೆ:

ಈಗಾಗಲೇ ಮಾರುಕಟ್ಟೆಯಲ್ಲಿ ರೆಡ್‌ಮಿ 5 ಮತ್ತು ಭಾರತ್ 5 ಪ್ರೋ ರೂ.7999ಕ್ಕೆ ಮಾರಾಟವಾಗುತ್ತಿದ್ದು, ಇದೇ ಮಾದರಿಯಲ್ಲಿ ಕ್ಯಾಮಾನ್ ಐ ಸ್ಮಾರ್ಟ್‌ಫೋನ್ ರೂ.8,999ಕ್ಕೆ ದೊರೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
tecno camon i mobile specification. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot