ಫೇಸ್ ಅನ್‌ಲಾಕ್ ಫೀಚರ್ ಹೊಂದಿರುವ ಈ ಫೋನ್ ಬೆಲೆ ಕೇವಲ 7,500 ರೂ!!
ಶಿಯೋಮಿ, ಸ್ಯಾಮ್‌ಸಂಗ್ ಮತ್ತು ಇತರೆ ಚೀನಾ ಕಂಪೆನಿಗಳ ಆರ್ಭಟಕ್ಕೆ ನಲುಗಿರುವ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಇತರೆ ಮೊಬೈಲ್ ಕಂಪೆನಿಗಳ ಮಾತೆ ಇಲ್ಲ ಎನ್ನಬಹುದು. ಆದರೆ, ಹಾಂಕಾಂಗ್‌ನ ಟ್ರಾನ್ಸಿಷನ್ ಕಂಪನಿ ಕಡಿಮೆ ಬೆಲೆಗೆ ಹೆಚ್ಚಿನ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್ ನೀಡಿ ಮೊಬೈಲ್ ಪ್ರಿಯರ ಗಮನಸೆಳೆದಿದೆ. ಫೇಸ್ ಅನ್‌ಲಾಕ್, ಫಿಂಗ್‌ಪ್ರಿಂಟ್ ಸ್ಕ್ಯಾನ್, ಗರಿಷ್ಠ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಫೋನ್ ಒಂದನ್ನು ಕೇವಲ 7,500 ರೂಪಾಯಿಗಳಿಗೆ ಇತ್ತೀಚಿಗೆ ಮಾರುಕಟ್ಟೆಗೆ ಬಿಟ್ಟಿದೆ.
ಹೌದು, ಅತ್ಯಂತ ಕಡಿಮೆ ಬೆಲೆಯಲ್ಲೂ ಉತ್ತಮ ಸ್ಮಾರ್ಟ್‌ಪೋನ್ ಒಂದನ್ನು ಖರೀದಿಸಬೇಕು ಎಂದುಕೊಳ್ಳುವವರಿಗೆ ಟ್ರಾನ್ಸಿಷನ್ 'ಟೆಕ್ನೊ ಕ್ಯಾಮನ್ ಐಏಸ್ 2ಎಕ್ಸ್' (Camon iAce 2x) ಎಂಬ ಹೊಸ ಸ್ಮಾರ್ಟ್‌ಫೋನ್ ಕೈಬೀಸಿ ಕರೆಯುತ್ತಿದೆ. ಪ್ರೀಮಿಯಂ ಫೋನ್‌ಗಳಿಗೆ ಸರಿಸಾಟಿಯಾದಂತಹ ಫೇಸ್ ಅನ್‌ಲಾಕ್ ಆಯ್ಕೆಯನ್ನು ಹೊಂದಿರುವ ಈ ನೂತನ ಸ್ಮಾರ್ಟ್‌ಫೋನ್, ಎಲ್ಲಾ ಆಪ್‌ಗಳನ್ನು ಒಂದೇ ಕೀ ಮೂಲಕ ಪ್ರವೇಶಿಸುವಂತಹ ಹಲವು ಬಳಕೆದಾರಸ್ನೇಹಿ ಆಯ್ಕೆಗಳನ್ನು ಹೊಂದಿರುವುದು ವಿಶೇಷವಾಗಿದೆ.

ಟ್ರಾನ್ಸಿಷನ್ ಅಷ್ಟೇನು ಜನಪ್ರಿಯ ಮೊಬೈಲ್ ಕಂಪೆನಿಯಾಗಿಲ್ಲದಿರುವುದರಿಂದ ತನ್ನ ಈ ಸ್ಮಾರ್ಟ್‌ಫೋನ್ ಖರೀದಿಸಿದ 100 ದಿನಗಳ ಒಳಗೆ ಏನೇ ತೊಂದರೆ ಕಂಡು ಬಂದರೂ ಫೋನನ್ನೇ ಬದಲಿಸಿ ಹೊಸ ಫೋನ್ ಕೊಡುವುದಾಗಿ ತಿಳಿಸಿದೆ. ಇನ್ನು ಡಿಸ್‌ಪ್ಲೇ ಒಡೆದು ಹೋದರೆ ಒಂದು ಸಲ ಉಚಿತವಾಗಿ ಬದಲಿಸಿ ಕೊಡುವುದಾಗಿ ಹೇಳಿದೆ. ಹಾಗಾದರೆ, ಬಜೆಟ್ ಬೆಲೆಯಲ್ಲಿ ಒಂದು ಉತ್ತಮ ಸ್ಮಾರ್ಟ್‌ಫೋನಿನಂತೆ ಕಾಣುತ್ತಿರುವ 'ಟೆಕ್ನೊ ಕ್ಯಾಮನ್ ಐಏಸ್ 2ಎಕ್ಸ್' ಪೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ಟೆಕ್ನೊ ಕ್ಯಾಮನ್ ಐಏಸ್ 2ಎಕ್ಸ್' ವಿನ್ಯಾಸ?
'ಟೆಕ್ನೊ ಕ್ಯಾಮನ್ ಐಏಸ್ 2ಎಕ್ಸ್' ಸ್ಮಾರ್ಟ್‌ಫೋನ್ ಹಗುರಾಗಿದ್ದು, ಕೇವಲ 150 ಗ್ರಾಂ ಇದೆ. ಸ್ಕ್ರೀನ್ ಟು ಬಾಡಿ ರೇಷಿಯೊ 80.5 ಇದ್ದು, ಸೆಲ್ಫಿ ಕ್ಯಾಮೆರಾ ಮತ್ತು ಫ್ಲ್ಯಾಷ್‌ಗಾಗಿ ನಾಚ್ ಅನ್ನು ನೀಡಲಾಗಿದೆ. ಈ ಫೋನಿನ ಮಿತಿಗಳೆಂದರೆ, ಪೋನಿನಲ್ಲಿ ಪ್ಲಾಸ್ಟಿಕ್ ಬಾಡಿ ನೀಡಲಾಗಿದೆ. ಹೊರಗಿನಿಂದಲೇ ಸಿಮ್ ಮತ್ತು ಎಸ್‌ಡಿ ಕಾರ್ಡ್ ಹಾಕುವ ಅಥವಾ ತೆಗೆಯುವ ಆಯ್ಕೆ ಇಲ್ಲ.

'ಟೆಕ್ನೊ ಕ್ಯಾಮನ್ ಐಏಸ್ 2ಎಕ್ಸ್' ಡಿಸ್‌ಪ್ಲೇ
'ಟೆಕ್ನೊ ಕ್ಯಾಮನ್ ಐಏಸ್ 2ಎಕ್ಸ್' ಸ್ಮಾರ್ಟ್‌ಫೋನ್ 5.5 ಎಚ್‌ಡಿ + ಫುಲ್ ವೀವ್ ಡಿಸ್‌ಪ್ಲೇ ಹೊಂದಿದ್ದು, 18:9 ಆಸ್ಪೆಕ್ಟ್ ರೇಶಿಯೊ ಇದೆ. ಸೆಲ್ಫಿ ಕ್ಯಾಮೆರಾ ಮತ್ತು ಫ್ಲ್ಯಾಷ್ ಲೈಟ್‌ಗಾಗಿ ಪರದೆಯ ಮೇಲ್ಭಾಗದಲ್ಲಿ ನಾಚ್ ಅಳವಡಿಸಿಲೊಳ್ಳಲಾಗಿದೆ. ಆದರೆ, ಈ ಫೋನಿನ ಬ್ರೈಟ್‌ನೆಸ್ ಕಡಿಮೆ ಮಾಡಿಕೊಂಡರೂ ಡಿಸ್‌ಪ್ಲೇ ಕಣ್ಣಿಗೆ ಅಷ್ಟು ಹಿತ ಎನಿಸುವುದಿಲ್ಲ ಎಂಬುದು ಕೂಡ ಸತ್ಯ.

'ಟೆಕ್ನೊ ಕ್ಯಾಮನ್ ಐಏಸ್ 2ಎಕ್ಸ್' ಪ್ರೊಸೆಸರ್
'ಟೆಕ್ನೊ ಕ್ಯಾಮನ್ ಐಏಸ್ 2ಎಕ್ಸ್' ಸ್ಮಾರ್ಟ್‌ಫೋನ್ 2GHz ಕ್ವಾಡ್-ಕೋರ್ ಮೀಡಿಯಾ ಟೆಕ್ ಹೆಲಿಯೊ A22 (MT6761) ಪ್ರೊಸೆಸರ್ ಅನ್ನು ಹೊಂದಿದೆ.3GB RAM ಮತ್ತು 32GB ಅಂತರ್ಗತ ಶೇಖರಣಾ ಮೆಮೊರಿಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ಓರಿಯೊದಲ್ಲ ರನ್ ಆಗಲಿದ್ದು, 128 ಜಿಬಿ ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಇದೆ.

'ಟೆಕ್ನೊ ಕ್ಯಾಮನ್ ಐಏಸ್ 2ಎಕ್ಸ್' ಕ್ಯಾಮೆರಾ
'ಟೆಕ್ನೊ ಕ್ಯಾಮನ್ ಐಏಸ್ 2ಎಕ್ಸ್' ಸ್ಮಾರ್ಟ್‌ಫೋನ್ 13+0.3 ಮೆಗಾಪಿಕ್ಸಲ್ ಪ್ರೈಮರಿ ಮತ್ತು 8 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿದೆ. ನೈಟ್ ಅಲ್ಗಾರಿದಂ 2.0, ಎಐ ಆಡೊ ಸೀನ್ ಡಿಸ್ಟಿಂಗ್ವಿಷ್, ಎಐ ಬ್ಯೂಟಿ ಮೋಡ್, ಎಐ ಪೋರ್ಟ್ರೇಟ್ ಮೋಡ್, ಡಿಜಿಟಲ್ ಜೂಮ್, ಬ್ಯಾಕ್‌ಲೈಟ್ ಎಚ್‌ಡಿಆರ್ ತಂತ್ರಜ್ಞಾನಗಳಿದ್ದರೂ ಇತ್ತೀಚಿನ ಫೋನ್‌ಗಳಿಗೆ ಸಾಟಿಯಿಲ್ಲ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ಈ ಫೋನಿನಲ್ಲಿ 3050 ಎಂಎಎಚ್ ಬ್ಯಾಟರಿ ಇದೆ. ಐಕಾನ್‌ಗಳ ಬದಲಾಗಿ ಫೋಟೊಗಳನ್ನೇ ಉಳಿಸಿಕೊಳ್ಳುವುದು, ಎಲ್ಲಾ ಆಪ್‌ಗಳನ್ನು ಒಂದೇ ಕೀ ಮೂಲಕ ಪ್ರವೇಶಿಸುವುದು ಹೀಗೆ ಇನ್ನೂ ಕೆಲವು ಬಳಕೆದಾರಸ್ನೇಹಿ ಆಯ್ಕೆಗಳಿವೆ. ಆದರೆ, 4ಕೆ ವಿಡಿಯೊಗಳು ಪ್ಲೇ ಆಗುವುದಿಲ್ಲ, ಫಾಸ್ಟ್ ಚಾರ್ಜೀಂಗ್, ಎಲ್ಲಾ ಗೇಮ್‌ಗಳೂ ಇದಕ್ಕೆ ಒಗ್ಗುವುದಿಲ್ಲ ಎಂಬ ಹಲವು ಮಿತಿಗಳು ಸಹ ಇವೆ.


Click it and Unblock the Notifications








