Home
ಮೊಬೈಲ್

ಶಿಯೋಮಿ ಅರ್ಧ ಬೆಲೆಗೆ ದೊರೆಯುವ ಈ ಸ್ಮಾರ್ಟ್‌ಫೋನ್‌ ಮುಂದೆ ಬೇರೆ ಯಾವುದು ಇಲ್ಲ..!

By Srinidhi

ಸ್ವಾತ್ರಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಎರಡು ಹೊಸ ಮಾದರಿಯ ಬಜೆಟ್ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಿದೆ. ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿರುವ ಹಾಂಕಾಂಗ್ ಟೆಕ್ನೋ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಶಿಯೋಮಿ ಅರ್ಧ ಬೆಲೆಗೆ ದೊರೆಯುವ ಈ ಸ್ಮಾರ್ಟ್‌ಫೋನ್‌ ಮುಂದೆ ಬೇರೆ ಯಾವುದು ಇಲ್ಲ..!

ಈಗಾಗಲೇ ಮಾರುಕಟ್ಟೆಯಲ್ಲಿ ಟೆಕ್ನೋ ಕ್ಯಾಮಾನ್ ಐ ಸರಣಿಯ ಸ್ಮಾರ್ಟ್‌ಫೋನ್‌ಗಳು ಬಜೆಟ್ ವಿಭಾಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಇದೇ ಸರಣಿಯ ಮತ್ತೇರಡು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ ಕಂಪನಿಯೂ, ಕಡಿಮೆ ಬೆಲೆಗೆ ಉತ್ತಮ ಫೋನ್ ಅನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ಟೆಕ್ನೋ ಬಿಡಗಡೆ ಮಾಡಿರುವ ಫೋನ್‌ಗಳ ವಿವರ ಮುಂದಿದೆ.

ಒಟ್ಟು ಎರಡು ಸ್ಮಾರ್ಟ್‌ಫೋನ್:

ಒಟ್ಟು ಎರಡು ಸ್ಮಾರ್ಟ್‌ಫೋನ್:

ಮಾರುಕಟ್ಟೆಯಲ್ಲಿ ಟೆಕ್ನೋ ಕ್ಯಾಮಾನ್ ಐ ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಕ್ಯಾಮಾನ್ ಐ ಏಸ್ ಹಾಗೂ ಕ್ಯಾಮಾನ್ ಐ ಸ್ಕೈ 2 ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಿದ್ದು, ಈ ಎರಡು ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ ಲಭ್ಯವಿರುವುದು ವಿಶೇಷ.

ಲಾಂಚಿಂಗ್ ಆಫರ್

ಲಾಂಚಿಂಗ್ ಆಫರ್

ಸ್ವಾತ್ರಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಎರಡು ಸ್ಮಾರ್ಟ್‌ಫೋನ್‌ಗಳ ಮೇಲೆ ಜಿಯೋ ರೂ. 2200 ಕ್ಯಾಷ್‌ಬ್ಯಾಕ್ ಆಫರ್ ಅನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಕ್ಯಾಮಾನ್ ಐ ಐಏಸ್ ಸ್ಮಾರ್ಟ್‌ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ, ಕ್ಯಾಮಾನ್ ಐ ಸ್ಕೈ 2 ಸ್ಮಾರ್ಟ್‌ಫೋನ್ ಆಗಸ್ಟ್ 20ರಿಂದ ಮಾರಾಟವಾಗಲಿದೆ.

ಕ್ಯಾಮಾನ್ ಐ ಏಸ್:

ಕ್ಯಾಮಾನ್ ಐ ಏಸ್:

ಕ್ಯಾಮಾನ್ ಐ ಏಸ್ ಸ್ಮಾರ್ಟ್‌ಫೋನಿನಲ್ಲಿ 18:9 ಅನುಪಾತದ 5.5 ಇಂಚಿನ HD+ IPS ಫುಲ್ ವ್ಯೂ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರೊಂದಿಗೆ 1.5 GHz ವೇಗದ 64-Bit ಮೀಡಿಯಾ ಟೆಕ್ ಕ್ವಾಡ್‌ಕೋರ್ MT6739WW ಪ್ರೊಸೆಸರ್ ಅನ್ನು ನೀಡಲಾಗಿದ್ದು, 2 GB RAM ಮತ್ತು 16GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದೆ. ಇದಲ್ಲದೇ 128 GB ವರೆಗೂ ಮೆಮೊರಿ ವಿಸ್ತರಿಸುವ ಅವಕಾಸವನ್ನು ಮಾಡಿಕೊಡಲಾಗಿದೆ. ಇದಲ್ಲಿರ 3050 mAh ಬ್ಯಾಟರಿ ನೀಡಲಾಗಿದ್ದು, ಆಂಡ್ರಾಯ್ಡ್ ಒರಿಯೋ 8.1 ಆಧಾರಿತ Hi OSನಲ್ಲಿ ಕಾರ್ಯನಿರ್ವಹಿಸಲಿದೆ.

ಕ್ಯಾಮಾನ್ ಐ ಏಸ್ ಕ್ಯಾಮೆರಾ:

ಕ್ಯಾಮಾನ್ ಐ ಏಸ್ ಕ್ಯಾಮೆರಾ:

ಕ್ಯಾಮಾನ್ ಐ ಏಸ್ ಸ್ಮಾರ್ಟ್‌ಫೋನಿನಲ್ಲಿ ಉತ್ತಮ ಕ್ಯಾಮೆರಾವನ್ನು ಕಾಣಬಹುದಾಗಿದೆ. ಮುಂಭಾಗದಲ್ಲಿ ಸೆಲ್ಪಿಗಾಗಿ 8 MP ಕ್ಯಾಮೆರಾದೊಂದಿಗೆ ಡ್ಯುಯಲ್ ಫ್ಲ್ಯಾಶ್ ಕಾಣಬಹುದು. ಇದರಲ್ಲಿ ನೀವು AI ಬ್ಯೂಟಿ ಮತ್ತು AI ಪೋರ್ಟ್ರೇಟ್ ವಿಶೆಷತೆಗಳನ್ನು ನೀಡಲಾಗಿದೆ. ಇದಲ್ಲದೇ ಹಿಂಭಾಗದಲ್ಲಿ 13 MP ಕ್ಯಾಮೆರಾದೊಂದಿಗೆ ಡ್ಯುಯಲ್ LED ಫ್ಲ್ಯಾಶ್ ಇದೆ. ಇದರಲ್ಲಿಯೂ ಸಹ ಆಟೋ ಸೀನ್ ಡಿಟೆಕ್ಷನ್, AI ಬ್ಯೂಟಿ, ಬೊಕೇ, ಪನೋರಮಾ, ವೀಡಿಯೊ ಚಾಟ್ ಸೇರಿದಂತೆ ಹಲವು ಆಯ್ಕೆಗಳಿದೆ.

ಕ್ಯಾಮಾನ್  ಐಸ್ಕೈ 2:

ಕ್ಯಾಮಾನ್ ಐಸ್ಕೈ 2:

ಕ್ಯಾಮಾನ್ ಐಸ್ಕೈ 2 ಸ್ಮಾರ್ಟ್‌ಫೋನಿನಲ್ಲಿ 18:9 ಅನುಪಾತದ 5.5 ಇಂಚಿನ HD+ IPS ಫುಲ್ ವ್ಯೂ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರೊಂದಿಗೆ 1.5 GHz ವೇಗದ 64-Bit ಮೀಡಿಯಾ ಟೆಕ್ ಕ್ವಾಡ್‌ಕೋರ್ MT6739WW ಪ್ರೊಸೆಸರ್ ಅನ್ನು ನೀಡಲಾಗಿದ್ದು, 2 GB RAM ಮತ್ತು 16GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದೆ. ಇದಲ್ಲದೇ 128 GB ವರೆಗೂ ಮೆಮೊರಿ ವಿಸ್ತರಿಸುವ ಅವಕಾಸವನ್ನು ಮಾಡಿಕೊಡಲಾಗಿದೆ. ಇದಲ್ಲಿರ 3050 mAh ಬ್ಯಾಟರಿ ನೀಡಲಾಗಿದ್ದು, ಆಂಡ್ರಾಯ್ಡ್ ಒರಿಯೋ 8.1 ಆಧಾರಿತ Hi OSನಲ್ಲಿ ಕಾರ್ಯನಿರ್ವಹಿಸಲಿದೆ.

ಕ್ಯಾಮಾನ್  ಐಸ್ಕೈ 2 ಕ್ಯಾಮೆರಾ:

ಕ್ಯಾಮಾನ್ ಐಸ್ಕೈ 2 ಕ್ಯಾಮೆರಾ:

ಕ್ಯಾಮಾನ್ ಐಸ್ಕೈ 2 ಸ್ಮಾರ್ಟ್‌ಫೋನಿನ ಮುಂಭಾಗದಲ್ಲಿ ಸೆಲ್ಪಿಗಾಗಿ 13 MP ಕ್ಯಾಮೆರಾದೊಂದಿಗೆ ಡ್ಯುಯಲ್ ಫ್ಲ್ಯಾಶ್ ಕಾಣಬಹುದು. ಇದರಲ್ಲಿ ನೀವು AI ಬ್ಯೂಟಿ ಮತ್ತು AI ಪೋರ್ಟ್ರೇಟ್ ವಿಶೆಷತೆಗಳನ್ನು ನೀಡಲಾಗಿದೆ. ಫೇಸ್ ಅನ್‌ಲಾಕ್ ಜತೆಗೆ ಫಿಂಗರ್‌ಪ್ರಿಂಟ್ ಅನ್‌ಲಾಕ್ ವ್ಯವಸ್ಥೆಯೂ ಇದೆ. ಇದಲ್ಲದೇ ಹಿಂಭಾಗದಲ್ಲಿ 13 MP ಕ್ಯಾಮೆರಾದೊಂದಿಗೆ ಡ್ಯುಯಲ್ LED ಫ್ಲ್ಯಾಶ್ ಇದೆ. ಇದರಲ್ಲಿಯೂ ಸಹ ಆಟೋ ಸೀನ್ ಡಿಟೆಕ್ಷನ್, AI ಬ್ಯೂಟಿ, ಬೊಕೇ, ಪನೋರಮಾ, ವೀಡಿಯೊ ಚಾಟ್ ಸೇರಿದಂತೆ ಹಲವು ಆಯ್ಕೆಗಳಿದೆ.

ಬೆಲೆಗಳು:

ಬೆಲೆಗಳು:

ಕ್ಯಾಮಾನ್ ಐ ಏಸ್ ಹಾಗೂ ಕ್ಯಾಮಾನ್ ಐ ಸ್ಕೈ 2 ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ ಲಭ್ಯವಿದೆ. ಕ್ಯಾಮಾನ್ ಐ ಏಸ್ ರೂ 6799ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ ಕ್ಯಾಮಾನ್ ಐ ಸ್ಕೈ 2 ಸ್ಮಾರ್ಟ್‌ಫೋನ್‌ ರೂ. 7499ಕ್ಕೆ ದೊರೆಯುತ್ತಿದೆ.

Best Mobiles in India

English summary
Tecno Camon iAce and Camon iSky with FullView display. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+