ಮತ್ತೇ ಮೂರು ಫೋನ್ ಬಿಟ್ಟ ಟೆಕ್‌ನೋ: ಬೆಲೆಗಿಂತ ಆಯ್ಕೆಗಳೇ ಜಾಸ್ತಿ..!
ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ ಟೆಕ್‌ನೋ ಬ್ರ್ಯಾಂಡ್, ಮತ್ತೆ ಮೂರು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಟೆಕ್‌ನೋ iAIR2+, ಟೆಕ್‌ನೋ i2 ಮತ್ತು ಟೆಕ್‌ನೋ i2X ಎಂಬ ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಏಕಕಾಲಕ್ಕೆ ಲಾಂಚ್ ಮಾಡಿದೆ.

ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಕ್ಯಾಮೆರಾಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಿದ್ದು, 10 ಸಾವಿರದ ಆಸುಪಾಸಿನಲ್ಲಿ ಲಾಂಚ್ ಆಗಿದೆ. ಉತ್ತಮ ಫೋಟೋ ಮತ್ತು ಸೆಲ್ಫಿಗಳನ್ನು ಈ ಸ್ಮಾರ್ಟ್‌ಫೋನ್‌ಗಳಲ್ಲಿ ಸೆರೆ ಹಿಡಿಯಬಹುದಾಗಿದ್ದು, ಈ ಕುರಿತು ಮಾಹಿತಿಯೂ ಮುಂದಿದೆ.

ಟೆಕ್‌ನೋ iAIR2+ ಸ್ಮಾರ್ಟ್‌ಫೋನ್:
ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಮೂರು ಫೋನ್‌ಗಳಲ್ಲಿ ಆರಂಭಿಕ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿದೆ. ಇದರಲ್ಲಿ 6.2 ಇಂಚಿನ HD+ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. 19:9 ಅನುಪಾತದ ಸೂಪರ್ ಫುಲ್ ವ್ಯೂ ಡಿಸ್‌ಪ್ಲೇ ಇದಾಗಿದ್ದು, ಮೇಡ್ ಇನ್ ಇಂಡಿಯಾ ಲೇಬಲ್ ಹೊಂದಿರುವ ಈ ಫೋನ್ ಸೆಲ್ಫೀ 8 MP ಕ್ಯಾಮೆರಾ, ಫ್ಲ್ಯಾಶ್ ಹಾಗೂ 13 MP+2 MP ಡ್ಯುಯಲ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ಹೊಂದಿದೆ. ಆಂಡ್ರಾಯ್ಡ್ 8.1 ನೊಂದಿಗೆ ಹಾಯ್ OSನಲ್ಲಿ ಇದು ಕಾರ್ಯನಿರ್ವಹಿಸಲಿದೆ. 2 GB RAM + 32 GB ಇಂಟರ್ನಲ್ ಮೆಮೊರಿಯೊಂದಿಗೆ ಡ್ಯುಯಲ್ VoLTE ಸಿಮ್ ಸ್ಲಾಟ್‌ಗಳು, ಫಿಂಗರ್‌ಪ್ರಿಂಟ್, ಫೇಸ್ ಅನ್‌ಲಾಕ್ ವೈಶಿಷ್ಟ್ಯಗಳು ಇದರಲ್ಲಿವೆ. ಜತೆಗೆ 3750 mAh ಬ್ಯಾಟರಿಯೂ ಇದೆ.

ಟೆಕ್‌ನೋ i2 ಸ್ಮಾರ್ಟ್‌ಫೋನ್:
ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಮೂರು ಫೋನ್‌ಗಳಲ್ಲಿ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿದೆ. ಇದರಲ್ಲಿ 6.2 ಇಂಚಿನ HD+ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. 19:9 ಅನುಪಾತದ ಸೂಪರ್ ಫುಲ್ ವ್ಯೂ ಡಿಸ್‌ಪ್ಲೇ ಇದಾಗಿದ್ದು, ಮೇಡ್ ಇನ್ ಇಂಡಿಯಾ ಲೇಬಲ್ ಹೊಂದಿರುವ ಈ ಫೋನ್ 16 MP ಸೆಲ್ಫೀ ಕ್ಯಾಮೆರಾ ಫ್ಲ್ಯಾಶ್ ಸಹಿತ ಹಾಗೂ 13 MP+2 MP ಡ್ಯುಯಲ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ಹೊಂದಿದೆ. ಆಂಡ್ರಾಯ್ಡ್ 8.1 ನೊಂದಿಗೆ ಹಾಯ್ OSನಲ್ಲಿ ಇದು ಕಾರ್ಯನಿರ್ವಹಿಸಲಿದೆ. 3 GB RAM + 32 GB ಇಂಟರ್ನಲ್ ಮೆಮೊರಿಯೊಂದಿಗೆ ಡ್ಯುಯಲ್ VoLTE ಸಿಮ್ ಸ್ಲಾಟ್‌ಗಳು, ಫಿಂಗರ್‌ಪ್ರಿಂಟ್, ಫೇಸ್ ಅನ್‌ಲಾಕ್ ವೈಶಿಷ್ಟ್ಯಗಳು ಇದರಲ್ಲಿವೆ. ಜತೆಗೆ 3750 mAh ಬ್ಯಾಟರಿಯೂ ಇದೆ.

ಟೆಕ್‌ನೋ i2X ಸ್ಮಾರ್ಟ್‌ಫೋನ್:
ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಮೂರು ಫೋನ್‌ಗಳಲ್ಲಿ ಟಾಪ್ ಎಂಡ್ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿದೆ. ಇದರಲ್ಲಿ 6.2 ಇಂಚಿನ HD+ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. 19:9 ಅನುಪಾತದ ಸೂಪರ್ ಫುಲ್ ವ್ಯೂ ಡಿಸ್‌ಪ್ಲೇ ಇದಾಗಿದ್ದು, ಮೇಡ್ ಇನ್ ಇಂಡಿಯಾ ಲೇಬಲ್ ಹೊಂದಿರುವ ಈ ಫೋನ್ ಫ್ಲ್ಯಾಶ್ ಸಹಿತ 16 MP ಸೆಲ್ಫೀ ಕ್ಯಾಮೆರಾ ಹಾಗೂ 13 MP+ 5 MP ಡ್ಯುಯಲ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ಹೊಂದಿದೆ. ಆಂಡ್ರಾಯ್ಡ್ 8.1 ನೊಂದಿಗೆ ಹಾಯ್ OSನಲ್ಲಿ ಇದು ಕಾರ್ಯನಿರ್ವಹಿಸಲಿದೆ. 4 GB RAM + 64 GB ಇಂಟರ್ನಲ್ ಮೆಮೊರಿಯೊಂದಿಗೆ ಡ್ಯುಯಲ್ VoLTE ಸಿಮ್ ಸ್ಲಾಟ್‌ಗಳು, ಫಿಂಗರ್‌ಪ್ರಿಂಟ್, ಫೇಸ್ ಅನ್‌ಲಾಕ್ ವೈಶಿಷ್ಟ್ಯಗಳು ಇದರಲ್ಲಿವೆ. ಜತೆಗೆ 3750 mAh ಬ್ಯಾಟರಿಯೂ ಇದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್:
ಟೆಕ್‌ನೋ ಲಾಂಚ್ ಮಾಡಿರುವ ಮೂರು ಫೋನ್‌ಗಳಲ್ಲಿ AI (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ) ಆಧಾರಿತ ಕ್ಯಾಮೆರಾ ಕಾಣಬಹುದಾಗಿದ್ದು, AI ಆಧಾರಿತ ಆಟೋ ಸ್ಕ್ರೀನ್ ಡಿಟೆಕ್ಷನ್ , ಎಐ ಬೊಕೇ ಮೋಡ್ , ಸೆಲ್ಫೀ ಕ್ಯಾಮೆರಾದಲ್ಲಿ AI ಸಾಫ್ಟ್ ಲೈಟ್ ಎಂಬ ವೈಶಿಷ್ಟ್ಯದ ಮೂಲಕ ಮಂದ ಬೆಳಕಿನಲ್ಲೂ ಉತ್ತಮ ಸೆಲ್ಫೀ ಕ್ಲಿಕಿಸಬಹುದಾಗಿದೆ.

ಬೆಲೆ:
ಟೆಕ್‌ನೋ ಲಾಂಚ್ ಮಾಡಿರುವ ಮೂರು ಫೋನ್‌ಗಳು ವಿವಿಧ ಬೆಲೆಯಲ್ಲಿ ಮಾರಾಟವಾಗಲಿದೆ. ಟೆಕ್‌ನೋ iAIR2+ ರೂ.8999ಕ್ಕೆ ಲಭ್ಯವಿದೆ. ಇದೇ ಮಾದರಿಯಲ್ಲಿ ಟೆಕ್‌ನೋ i2 ರೂ.10499ಕ್ಕೆ ಮಾರಾಟವಾಗಲಿದೆ. ಜೊತೆಗೆ ಟೆಕ್‌ನೋ i2X ಸ್ಮಾರ್ಟ್‌ಫೋನ್ ರೂ.12499ಕ್ಕೆ ದೊರೆಯಲಿದೆ.


Click it and Unblock the Notifications








